ಧ್ರುವ ಸರ್ಜಾ (Dhruva Sarja) ನಟನೆಯ ‘ಮಾರ್ಟಿನ್’ (Martin Film) ಸಿನಿಮಾ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ. ಇತ್ತೀಚೆಗೆ ಮಾರ್ಟಿನ್ ಸಿನಿಮಾ ವಿಷ್ಯವಾಗಿ ನಿರ್ದೇಶಕ ಎ.ಪಿ ಅರ್ಜುನ್ 50 ಲಕ್ಷ ಕಮಿಷನ್ ತೆಗೆದುಕೊಂಡಿದ್ದಾರೆ ಅನ್ನೋದು ವಿವಾದಕ್ಕೆ ದಾರಿ ಮಾಡಿಕೊಟ್ಟಿತ್ತು. ಈ ಆರೋಪಕ್ಕೆಲ್ಲಾ ಎಪಿ ಅರ್ಜುನ್ (Ap Arjun) ಸ್ಪಷ್ಟನೆ ನೀಡಿದ್ದರು. ಇದೀಗ ಮತ್ತೊಮ್ಮೆ 50 ಲಕ್ಷ ಕಮಿಷನ್ ವಿಚಾರಕ್ಕೆ ನಿರ್ದೇಶಕ ಕ್ಲ್ಯಾರಿಟಿ ನೀಡಿದ್ದಾರೆ. ಇದನ್ನೂ ಓದಿ:ಪಿವಿ ಸಿಂಧು ಜೊತೆ ಕ್ಯಾಮೆರಾಗೆ ಪೋಸ್ ಕೊಟ್ಟ ಮೆಗಾಸ್ಟಾರ್ ಫ್ಯಾಮಿಲಿ
‘ಮಾರ್ಟಿನ್’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಎಪಿ ಅರ್ಜುನ್ ಮಾತನಾಡಿ, ನಮ್ಮದು ಹಾಗೂ ನಿರ್ಮಾಪಕ ಉದಯ್ ಮೆಹ್ತಾರದ್ದು ಒಪ್ಪಂದಗಳು ಏನಿವೆ ಅದು ಕಾನೂನಾತ್ಮಕವಾಗಿದೆ. ಬಾಯಿ ಮಾತಿನಲ್ಲಿ ಹೇಳಿದರೆ ಮಾತು ತಪ್ಪಬಹುದು. ಅದಕ್ಕೆ ಲೀಗಲ್ ಆಗಿಯೇ ಎಲ್ಲವೂ ನಡೆದಿದೆ. ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಒಬ್ಬರು 50 ಲಕ್ಷ ಅಂದರು, ಇನ್ನೊಬ್ಬರು ಒಂದು ಕೋಟಿ ಅಂದರೆ, ಮತ್ತೊಬ್ಬರು 20 ಕೋಟಿ ಅಂತ ಹೇಳುತ್ತಿದ್ದಾರಲ್ಲ. ನಾನು ಐದು ಸಾವಿರ ರೂಪಾಯಿ ಕಮಿಷನ್ ತೆಗೆದುಕೊಂಡಿದ್ದೇನೆ ಅಂತ ಹೇಳಿದರೆ, ನಾನು ಒಂದು ಕೋಟಿ ರೂಪಾಯಿ ಕೊಡುತ್ತೇನೆ ಎಂದು ಮಾಧ್ಯಮದ ಮುಂದೆ ಎಪಿ ಅರ್ಜುನ್ ಸವಾಲು ಹಾಕಿದ್ದಾರೆ.
ಇದೇ ವೇಳೆ ನಿರ್ಮಾಪಕ ಉದಯ್ ಮೆಹ್ತಾ (Uday Mehta) ಮಾತನಾಡಿ, ‘ಡಿಜಿಟಲ್ ಟರೇನ್’ ಅನ್ನೋ ಕಂಪನಿಯ ಸತ್ಯ ರೆಡ್ಡಿ, ಸುನೀಲ್ ರೆಡ್ಡಿ ಮೇಲೆ ಕಂಪ್ಲೇಟ್ ಕೊಟ್ಟಿದ್ದೇನೆ. ನಮ್ಮ ಟೀಂ ಅವರ ಮೇಲೆ ದೂರು ಕೊಟ್ಟಿಲ್ಲ. ಇಲ್ಲಿಯವರೆಗೂ ಯಾವ ಕಾಂಟ್ರವರ್ಸಿ ಇರಲಿಲ್ಲ, ಈಗಲೂ ಇಲ್ಲ. ಅಂದು ಎಪಿ ಅರ್ಜುನ್ ಪ್ರೇಸ್ ಮೀಟ್ ಮಾಡಿದಾಗ ನಾನು ಊರಲ್ಲಿ ಇರಲಿಲ್ಲ. ಎಷ್ಟೇ ಅಡೆತಡೆಯಾದ್ರೂ ಅಂದುಕೊಂಡಂತೆ ‘ಮಾರ್ಟಿನ್’ ಸಿನಿಮಾ ರಿಲೀಸ್ ಮಾಡುತ್ತೇವೆ ಎಂದು ಮಾತನಾಡಿದ್ದಾರೆ.