ಜಿಮ್ ಟ್ರೈನರ್ ಪ್ರಶಾಂತ್ ಮೇಲಿನ ಹಲ್ಲೆ ಬಗ್ಗೆ ಧ್ರುವ ಸರ್ಜಾ ರಿಯಾಕ್ಷನ್

Public TV
1 Min Read
prashanth 1

ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ (Dhruva Sarja) ಜಿಮ್ ಟ್ರೈನರ್ ಪ್ರಶಾಂತ್ (Gym Trainer Prashanth) ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಮೇ 26ರ ರಾತ್ರಿ ಬೆಂಗಳೂರಿನ ಕೆ.ಆರ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಪ್ರಶಾಂತ್ ಮೇಲಿನ ಹಲ್ಲೆ ಬಗ್ಗೆ ಧ್ರುವ ಸರ್ಜಾ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ತಮಿಳು ನಟ ಸಿಂಬುಗೆ ಜಾನ್ವಿ ಕಪೂರ್ ನಾಯಕಿ

prashanth

ಪ್ರಶಾಂತ್ ಪರ್ಸನಲ್ ಏನಿದೆ ಎಂಬುದು ಗೊತ್ತಿಲ್ಲ. ಅವರಿಗೆ ಯಾರೋ ಮಚ್‌ನಲ್ಲಿ ಬಂದು ಹೊಡೆದಿದ್ದಾರೆ. ಯಾರು ಅಂತ ಗೊತ್ತಾಗಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯ ಅಕ್ಷಯ್‌ ಆಸ್ಪತ್ರೆಯಲ್ಲಿ ಪ್ರಶಾಂತ್ ಚಿಕಿತ್ಸೆ ಪಡೆಯುತ್ತಿದ್ದಾರೆ. ದುಷ್ಕರ್ಮಿ ಮೇಲೆ ಎಫ್‌ಐಆರ್ ಆಗಿದೆ. ಕಾನೂನು ರೀತಿಯಲ್ಲಿ ತನಿಖೆ ನಡೆಯುತ್ತಿದೆ ಎಂದಿದ್ದಾರೆ ಧ್ರುವ. ಇತ್ತೀಚೆಗೆ ಮಂತ್ರಾಲಯಕ್ಕೆ ಹೋಗಿ ಬರುತ್ತೇನೆ ಅಂದ ಕಳಿಸಿಕೊಟ್ಟಿದ್ದೆ, ಮುಡಿನೂ ಕೊಟ್ಟಿದ್ದಾರೆ. ನಿನ್ನೆ ನನ್ನ ಜೊತೆನೇ ಇದ್ದರು ಎಂದಿದ್ದಾರೆ. ಇಂದು ಸಂಜೆಯೊಳಗೆ ಪ್ರಶಾಂತ್ ಡಿಸ್ಜಾರ್ಜ್ ಆಗುತ್ತಾರೆ ಎಂದು ಧ್ರುವ ಸರ್ಜಾ ತಿಳಿಸಿದ್ದಾರೆ.

dhruva sarja 2

ಪ್ರಶಾಂತ್ ನಮ್ ಹುಡುಗ. ಅವರ ಜೊತೆಗಿರುತ್ತೇನೆ. ಸದ್ಯ ಅವರು ಔಟ್ ಆಫ್ ಡೇಂಜರ್ ಎಂದು ಧ್ರುವ ತಿಳಿಸಿದ್ದಾರೆ. ಬೆಂಗಳೂರಲ್ಲಿ ಮಚ್ಚು ಹಿಡ್ಕೊಂಡು ಆರಾಮವಾಗಿ ಓಡಾಡುತ್ತಿದ್ದಾರೆ. ಒಬ್ಬ ಸಿಟಿಜನ್ ಆಗಿ ಹೇಳೋದಾದ್ರೆ ನಮ್ ಫ್ರೆಂಡ್ ಅಷ್ಟೇ ಅಲ್ಲ, ಬೇರೆ ಯಾರಿಗೂ ಹೀಗೆ ಆಗಬಾರದು ಎಂದು ಧ್ರುವ ಸರ್ಜಾ ಮಾತನಾಡಿದ್ದಾರೆ.

ಅಂದಹಾಗೆ, ಧ್ರುವ ಸರ್ಜಾ ಮನೆಯ ಪಕ್ಕದ ರೋಡ್‌ನಲ್ಲಿ ನಡೆದ ಘಟನೆ ಇದಾಗಿದ್ದು,‌ ಭಾನುವಾರ ರಾತ್ರಿ (ಮೇ 26) ನಂಬರ್ ಪ್ಲೇಟ್ ಇಲ್ಲದ ಗಾಡಿಯಲ್ಲಿ ಮುಖ ಮುಚ್ಚಿಕೊಂಡು ಪ್ರಶಾಂತ್ ಮೇಲೆ ಇಬ್ಬರು ಅಪರಿಚಿತರು ಬೈಕ್ ಮೇಲೆ ಬಂದು ದಾಳಿ ನಡೆಸಿದ್ದಾರೆ.

Share This Article