ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸರ್ಜಾ (Chiranjeevi Sarja) ಅಗಲಿ ಜೂನ್ 7ಕ್ಕೆ ನಾಲ್ಕು ವರ್ಷಗಳು ಕಳೆದಿವೆ. ಇಂದಿಗೂ ಚಿರು ಅಗಲಿಕೆ ನೋವನ್ನು ಅವರ ಕುಟುಂಬಕ್ಕಿದೆ. ಇದೀಗ ಚಿರಂಜೀವಿ ಪುಣ್ಯಸ್ಮರಣೆಯಂದು ಧ್ರುವ (Dhruva Sarja) ಭಾವುಕರಾಗಿದ್ದಾರೆ. ಅಣ್ಣನ ಕುರಿತು ಪೋಸ್ಟ್ ಮಾಡಿದ್ದಾರೆ.
ಚಿರಂಜೀವಿ ಪುಣ್ಯಸ್ಮರಣೆಯಂದು ‘ಮಿಸ್ಸಿಂಗ್ ಯೂ ಡ್ಯೂಡ್’ ಎಂದು ಧ್ರುವ ಹೇಳಿದ್ದಾರೆ. ಅಣ್ಣನ ಫೋಟೋ ಶೇರ್ ಮಾಡಿ ಅಪ್ಪ, ಅಮ್ಮ ಮತ್ತು ನಾವೆಲ್ಲರೂ ನಿನ್ನನ್ನು ಮಿಸ್ ಮಾಡಿಕೊಳ್ತಿದ್ದೇವೆ ಎಂದು ಧ್ರುವ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ರಜನಿಕಾಂತ್‌ಗೆ ಮದುವೆ ಆಮಂತ್ರಣ ನೀಡಿದ ಕನ್ನಡದ ‘ಮಾಣಿಕ್ಯ’ ನಟಿ
ಅಂದಹಾಗೆ, ಅಣ್ಣ ಚಿರು ಜೊತೆ ಧ್ರುವಗೆ ಉತ್ತಮ ಒಡನಾಟ ಇತ್ತು. ಕೆಲ ತಿಂಗಳುಗಳ ಹಿಂದೆ ಅಣ್ಣ ಚಿರು ಸಮಾಧಿ ಬಳಿ ಧ್ರುವ ನಿದ್ದೆ ಮಾಡುತ್ತಿದ್ದ ವಿಡಿಯೋವೊಂದು ವೈರಲ್ ಆಗಿತ್ತು. ಇದು ಚಿರು ಜೊತೆ ಧ್ರುವ ಒಡನಾಟ ಅದೆಷ್ಟರ ಮಟ್ಟಿಗೆ ಇತ್ತು ಎಂಬುದಕ್ಕೆ ಸಾಕ್ಷಿಯಾಗಿತ್ತು.
ಚಿರಂಜೀವಿ ನಟಿಸಿದ ಕೊನೆಯ ‘ರಾಜ ಮಾರ್ತಾಂಡ’ ಚಿತ್ರಕ್ಕೂ ಧ್ರುವ ಅವರೇ ಅಣ್ಣ ಪಾತ್ರಕ್ಕೆ ವಾಯ್ಸ್ ಡಬ್ ಮಾಡಿದ್ದರು. ಜೊತೆಗೆ ರಿಲೀಸ್ ವೇಳೆ, ಚಿತ್ರತಂಡಕ್ಕೆ ಸಾಥ್ ನೀಡುತ್ತಲೇ ಬಂದಿದ್ದರು.