Exclusive: ಧ್ರುವಗೆ ಅರ್ಜುನ್ ಸರ್ಜಾ ಆ್ಯಕ್ಷನ್ ಕಟ್

Public TV
1 Min Read
DHRUVA SARJA ARJUN SARJA

ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ (Dhruva Sarja) ‘ಕೆಡಿ’ (KD Film) ಸಿನಿಮಾದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ಅರ್ಜುನ್ ಸರ್ಜಾ ನಿರ್ದೇಶನದ ‘ಸೀತಾ ಪಯಣ’ ಸಿನಿಮಾದಲ್ಲಿ ನಟಿಸಲು ಧ್ರುವ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನೂ ಓದಿ:ಶ್ರೀಕೃಷ್ಣ ದೇಗುಲಕ್ಕೆ ಭೇಟಿ ನೀಡಿದ ಪ್ರೇಮ್‌, ಶರಣ್ಯ ಶೆಟ್ಟಿ

dhruva sarja

‘ಮಾರ್ಟಿನ್’ (Martin) ಸಿನಿಮಾ ಆದ್ಮೇಲೆ ‘ಕೆಡಿ’ ಚಿತ್ರದ ಕಡೆ ಧ್ರುವ ಗಮನ ವಹಿಸಿದ್ದಾರೆ. ಸದ್ಯದಲ್ಲೇ ‘ಕೆಡಿ’ ಚಿತ್ರದ ಬಗ್ಗೆ ಮಾಹಿತಿ ಸಿಗಲಿದೆ. ಹೀಗಿರುವಾಗ ಅವರ ಹೊಸ ಸಿನಿಮಾದ ಬಗ್ಗೆ ಇಂಟರೆಸ್ಟಿಂಗ್ ಅಪ್‌ಡೇಟ್ ಸಿಕ್ಕಿದೆ. ಸೋದರ ಮಾವ ಅರ್ಜುನ್ ಸರ್ಜಾ (Arjun Sarja) ಜೊತೆ ಹೊಸ ಸಿನಿಮಾ ಮಾಡಲು ಧ್ರುವ ಸಾಥ್ ನೀಡುತ್ತಿದ್ದಾರೆ.

DHRUVA SARJA 2

ಅರ್ಜುನ್ ಸರ್ಜಾ (Arjun Sarja) ನಿರ್ದೇಶನದ ‘ಸೀತಾ ಪಯಣ’ (Seetha Payana) ಸಿನಿಮಾದಲ್ಲಿ ಧ್ರುವ ಗೆಸ್ಟ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ವಾರ ಅವರು ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಚೆನ್ನೈನಲ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ. ಅತಿಥಿ ಪಾತ್ರವಾಗಿದ್ದರೂ ಕೂಡ ಸಿನಿಮಾದಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಈ ಚಿತ್ರದಲ್ಲಿ ಧ್ರುವ ಜಬರ್‌ದಸ್ತ್ ಆದ ಆ್ಯಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನೂ ‘ಸೀತಾ ಪಯಣ’ ಸಿನಿಮಾದಲ್ಲಿ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಾಯಕನಾಗಿ ಕಾಣಿಸಿಕೊಳ್ತಿದ್ದಾರೆ. ನಾಯಕಿಯಾಗಿ ಐಶ್ವರ್ಯಾ ಅರ್ಜುನ್ ಸರ್ಜಾ ನಟಿಸಲಿದ್ದಾರೆ. ಈ ಸಿನಿಮಾ ಕನ್ನಡದ ಜೊತೆ ತೆಲುಗು, ತಮಿಳಿನಲ್ಲಿಯೂ ಮೂಡಿ ಬರಲಿದೆ.

Share This Article