ಹೈದರಾಬಾದ್: ಮದುವೆಯಾಗದ ಮಹಿಳೆಯರು ಮಾತ್ರ ಇಲ್ಲಿನ ಸಮಾಜ ಕಲ್ಯಾಣ ವಸತಿ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ಅರ್ಜಿ ಸಲ್ಲಿಸಬಹುದು ಎಂದು ತೆಲಂಗಾಣ ಸರ್ಕಾರ ಹೇಳಿದೆ.
ವಸತಿ ಕಾಲೇಜುಗಳಲ್ಲಿ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿರುವ ತೆಲಂಗಾಣ ಸಮಾಜ ಕಲ್ಯಾಣ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಮದುವೆಯಾಗದ ಮಹಿಳಾ ಅಭ್ಯರ್ಥಿಗಳು 2017-18ನೇ ಸಾಲಿನ ಪದವಿ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ.
Advertisement
ಈ ಬಗ್ಗೆ ಅಧಿಕಾರಿಗಳು ಹೇಳಿಕೆ ನೀಡಿದ್ದು, ಮದುವೆಯಾದ ಮಹಿಳೆಯರ ಗಂಡಂದಿರು ವಾರಕೊಮ್ಮೆ ಅಥವಾ 15 ದಿನಗಳಿಗೊಮ್ಮೆ ಬಂದು ಅವರನ್ನು ಭೇಟಿಯಗುವ ಸಾಧ್ಯತೆಯಿರುತ್ತದೆ. ಇದರಿಂದಾಗಿ ವಸತಿ ಕಾಲೇಜುಗಳಲ್ಲಿರುವ ಇತರೆ ವಿದ್ಯಾರ್ಥಿನಿಯರ ಗಮನ ಬೇರೆಡೆ ಹರಿಯಬಹುದು. ಈ ಕಾರಣಕ್ಕಾಗಿ ಮದುವೆಯಾಗದ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದಿದ್ದಾರೆ.
Advertisement
ಸಂಘದ ಕಾರ್ಯದರ್ಶಿ ಡಾ. ಆರ್ ಎಸ್ ಪ್ರವೀಣ್ ಕುಮಾರ್ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದು, ನಾವು ವಿವಾಹಿತ ಮಹಿಳೆಯರನ್ನು ಪ್ರೋತ್ಸಾಹಿಸುವುದಿಲ್ಲ ಹಾಗೆ ಅವರು ಪ್ರವೇಶಾತಿ ಬಯಸಿ ಬಂದರೆ ಅದನ್ನು ತಡೆಯುವುದಿಲ್ಲ. ಅವರನ್ನು ನಿರಾಕರಿಸುವುದಾಗಲೀ ಅವರಿಗೆ ನೋವುಂಟುಮಾಡುವುದಾಗಲೀ ನಮ್ಮ ಉದ್ದೇಶವಲ್ಲ ಎಂದಿದ್ದಾರೆ.
Advertisement
ಆದ್ರೆ ಇದಕ್ಕೆ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದು. ಕೂಡಲೇ ಅಧಿಸೂಚನೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.