2 ತಿಂಗಳ ಹಿಂದಷ್ಟೇ ಪ್ರೀತಿಸಿ ಮದ್ವೆಯಾಗಿದ್ದ ಯುವತಿ ಸಾವು!

Public TV
1 Min Read
BENGALURU ANUSHA

ಬೆಂಗಳೂರು: ಎರಡು ತಿಂಗಳ ಹಿಂದೆಯಷ್ಟೇ ಪ್ರೀತಿಸಿ ಮದುವೆಯಾಗಿದ್ದ ಯುವತಿಯೊಬ್ಬಳು ಅನುಮಾನಸ್ಪದವಾಗಿ ಸಾವನ್ನಪ್ಪಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

ಅನುಷಾ (23) ಮೃತ ನವವಿವಾಹಿತೆ. ಮಂಡ್ಯ ಜಿಲ್ಲೆಯ ಮಳ್ಳವಳ್ಳಿ ಮೂಲದ ಪ್ರವೀಣ್ ಮತ್ತು ಅನುಷಾ ಪ್ರೀತಿಸಿ ಎರಡು ತಿಂಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಳಿಕ ಮಹದೇವಪುರದ ಪೊಲೀಸ್ ಠಾಣಾ (Mahadevapura Police Station) ವ್ಯಾಪ್ತಿಯ ಸಿಂಗಯ್ಯಪಾಳ್ಯದಲ್ಲಿ ವಾಸವಾಗಿದ್ದರು.

ಮದುವೆಯ ಬಳಿಕ ಅತ್ತೆ ನಾಗಮ್ಮ ಮತ್ತು ಸೋದರ ಮಾವ ರಾಜೇಶ್ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪತಿಯ ಕುಟುಂಬಸ್ಥರು ಹಲ್ಲೆ ಮತ್ತು ಕಿರುಕುಳ ನೀಡಿದ್ದಾರೆ ಎಂದು ಅನುಷಾ ಕುಟುಂದವರು ಗಂಭೀರ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಸಿಪಿ ಯೋಗೇಶ್ವರ್ ಬಾವ ಮಹದೇವಯ್ಯ ಪತ್ತೆಗೆ ನಾಲ್ಕು ತಂಡ ರಚನೆ: ಎಸ್ಪಿ

ಈ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share This Article