ವಾಷಿಂಗ್ಟನ್: ವರ್ಜಿನಿಯಾದ ಶಾಲಾ ಶಿಕ್ಷಕಿಯೊಬ್ಬಳು 14 ವರ್ಷದ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ನಂತರ ಆಕೆಗೆ 50 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಹೆನ್ರಿಕೊ ಕೌಂಟಿಯ ಹಂಗೇರಿ ಕ್ರೀಕ್ ಮಿಡಲ್ ಸ್ಕೂಲ್‌ನ ಶಿಕ್ಷಕಿ ಮೇಗನ್ ಪಾಲಿನ್ ಜೋರ್ಡಾನ್ (25), 14 ವರ್ಷದ ವಿದ್ಯಾರ್ಥಿಯೊಂದಿಗೆ ಅನೇಕ ಬಾರಿ ಸೆಕ್ಸ್ ಮಾಡಿದ್ದೇನೆ. ಆತನೊಂದಿಗೆ ಸೆಕ್ಸ್ ಬಯಸಿ, ವಿದ್ಯಾರ್ಥಿಯ ಮನೆಗೆ ನುಗ್ಗಲು ಪ್ರಯತ್ನಿಸಿದ್ದೆ. ಆದ್ರೆ ಅದೆಲ್ಲವೂ ನನ್ನನ್ನು ಬಹಳವಾಗಿ ಕಾಡಿತ್ತು ಎಂದು ತಪ್ಪೊಪ್ಪಿಕೊಂಡಿದ್ದಾಳೆ. ಬಳಿಕ ವಿಚಾರಣೆ ನಡೆಸಿದ್ದ ಕೋರ್ಟ್ ಆಕೆಗೆ 50 ವರ್ಷ ಜೈಲು ಶಿಕ್ಷೆ ವಿಧಿಸಿದೆ ಎಂಬುದಾಗಿ ಹೆನ್ರಿಕೊ ಕೌಂಟಿ ಕಾಮನ್‌ವೆಲ್ತ್‌ನ ಅಟಾರ್ನಿ ಕಚೇರಿ ತಿಳಿಸಿದೆ.
Advertisement
Advertisement
ಏನಿದು ಪ್ರಕರಣ?
2022-2023ರ ಅವಧಿಯಲ್ಲಿ ಜೋರ್ಡಾನ್ ಮಾಧ್ಯಮಿಕ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಅದೇ ಶಾಲೆಯ 14 ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಳು. ಶಿಕ್ಷಕಿಯೇ ಆಗಾಗ್ಗೆ ವಿದ್ಯಾರ್ಥಿಯ ಮನೆಗೆ ಹೋಗಿ ಲೈಂಗಿಕ ಕ್ರಿಯೆಯನ್ನೂ ನಡೆಸುತ್ತಿದ್ದಳು. ಇದರಿಂದ ಬೇಸತ್ತ ವಿದ್ಯಾರ್ಥಿ ದೂರು ನೀಡಿದ್ದ. ಬಳಿಕ ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ವಿದ್ಯಾರ್ಥಿ ಮತ್ತು ಶಿಕ್ಷಕಿ ಇಬ್ಬರ ಡಿಎನ್‌ಎ ಹಾಗೂ ಅವರಿಬ್ಬರು ಮಲಗಿದ್ದ ಹಾಸಿಗೆಗಳನ್ನೂ ತಪಾಸಣೆ ನಡೆಸಿದಾಗ ಸಾಕ್ಷ್ಯಾಧಾರಗಳು ಪತ್ತೆಯಾಗಿತ್ತು. ನಂತರ ಶಿಕ್ಷಕಿಯನ್ನ ಬಂಧಿಸಲಾಗಿತ್ತು.
Advertisement
ಹೆನ್ರಿಕೊ ಕೌಂಟಿ ಪೊಲೀಸರ ಪ್ರಕಾರ, 2023ರಲ್ಲಿ ಶಿಕ್ಷಕಿಯನ್ನ ಬಂಧಿಸಿ, ವಿಚಾರಣೆ ನಡೆಸಲಾಗುತ್ತಿತ್ತು. ಕೊನೆಗೆ ಆಕೆಯೇ ತಪ್ಪೊಪ್ಪಿಕೊಂಡಿದ್ದಾಳೆ. ಬಳಿಕ ಸ್ಥಳೀಯ ಕೋರ್ಟ್ ವರ್ಜೀನಿಯಾ ಕೋಡ್ ಅಡಿಯಲ್ಲಿ, 17 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಲೈಂಗಿಕ ಚಟುವಟಿಕೆಗೆ ಕಾನೂನು ಬದ್ಧವಾಗಿ ಅನುಮತಿ ನೀಡಲು ಸಾಧ್ಯವಿಲ್ಲ ಎಂಬುದನ್ನು ಗಮನಿಸಿ ಶಿಕ್ಷೆ ವಿಧಿಸಿತು. ಇದನ್ನೂ ಓದಿ: ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಬಿಜೆಪಿ ಸರ್ಕಾರ ಇಲ್ಲದ ರಾಜ್ಯಕ್ಕೆ ಅನುದಾನ ಇಲ್ಲ: ಖರ್ಗೆಯಿಂದ ಕಪ್ಪು ಪತ್ರ ಬಿಡುಗಡೆ
Advertisement
ಇದೇ ಮೊದಲೇನಲ್ಲ:
ಯುಎಸ್‌ನಲ್ಲಿ ಈ ರೀತಿಯ ಘಟನೆಗಳು ಇದೇ ಮೊದಲೇನಲ್ಲ. ಕಳೆದ ತಿಂಗಳು ಅರ್ಕಾನ್ಸಾಸ್‌ನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆ ಹೈಸ್ಕೂಲ್ ಹುಡುಗನೊಂದಿಗೆ 30 ಬಾರಿ ಸೆಕ್ಸ್ ಮಾಡಿದ್ದಳು. ನಂತರ ವಿದ್ಯಾರ್ಥಿಯಿಂದ ದೂರವಾಗಿದ್ದಳು, ಮತ್ತೆ ವಿದ್ಯಾರ್ಥಿಯೊಂದಿಗೆ ಸೆಕ್ಸ್ ಬಯಸಿದಾಗ ವಿದ್ಯಾರ್ಥಿ ದೂರು ನೀಡಲಾಗಿ, ಪೊಲೀಸರು ಬಂಧಿಸಿದ್ದರು. ಅಲ್ಲದೇ 33 ವರ್ಷದ ಮಹಿಳೆ ಹಲವು ವಿದ್ಯಾರ್ಥಿಗಳೊಂದಿಗೆ ಈ ರೀತಿ ಲೈಂಗಿಕ ಸಂಭೋಗ ನಡೆಸಿರುವುದಾಗಿ ಕಂಡುಬಂದಿತ್ತು. ಇದರಿಂದ ಆಕೆಯನ್ನು ತಪ್ಪಿತಸ್ಥಳೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಇದನ್ನೂ ಓದಿ: ಮೀಸಲಾತಿ ಪಡೆದವರು ಅದರಿಂದ ಹೊರಬಂದು ಹಿಂದುಳಿದವರಿಗೆ ಅವಕಾಶ ಕೊಡಲಿ: ಸುಪ್ರೀಂ