ಪತ್ನಿ ಇರುವಾಗ್ಲೇ ಮತ್ತೊಬ್ಬಳಿಗೆ ಕೋಟಿ ಮೌಲ್ಯದ ಮನೆ, ಕಾರು- ಕೊನೆಗೆ ಆಕೆಯಿಂದ್ಲೇ ಕೊಲೆಯಾದ!

Public TV
1 Min Read
NML MURDER 11

– ಪ್ರಿಯತಮೆಗಾಗಿ ಪತ್ನಿ, ಮನೆಯವ್ರಿಂದ್ಲೇ ದೂರವಾದ

ನೆಲಮಂಗಲ: ಆತ ಕೋಟಿ ಕೋಟಿ ಹಣದ ಒಡೆಯ. ಆತನಿಗೆ ಮದುವೆ ಕೂಡ ಆಗಿತ್ತು. ನಂತರ ಮೊದಲನೇ ಹೆಂಡತಿಯನ್ನು ಹಾಗೂ ತನ್ನ ಮನೆಯವರನ್ನು ದೂರ ಮಾಡಿಕೊಂಡು ಮತ್ತೊಬ್ಬಳಿಗೆ ಫಿದಾ ಆಗಿದ್ದ. ಆದರೆ ಆಕೆಯೇ ಇಂದು ಆತನಿಗೆ ಪರಲೋಕದ ದಾರಿ ತೋರಿಸಿದ್ದಾಳೆ.

NML MURDER

ಹೌದು. ಬೆಂಗಳೂರು ಹೊರವಲಯ ಮಾದನಾಯಕನಹಳ್ಳಿ ಬಳಿಯ ಗೌಡಹಳ್ಳಿಯಲ್ಲಿ ಘಟನೆ ನಡೆದಿದೆ. ಕೊಲೆಯಾದವನನ್ನು ಸ್ವಾಮಿರಾಜ್ ಎಂದು ಗುರುತಿಸಲಾಗಿದ್ದು, ಈತನನ್ನು ಪತ್ನಿ ನೇತ್ರಾವತಿ ಹತ್ಯೆ ಮಾಡಿದ್ದಾಳೆ. ಇದನ್ನೂ ಓದಿ: ಮೈಸೂರಲ್ಲಿ ಶಿಕ್ಷಕರಿಗೆ ಜೀನ್ಸ್ ಪ್ಯಾಂಟ್ ಬ್ಯಾನ್

NML MURDER 2

ಕೊಲೆಯಾಗಿರೋ ಸ್ವಾಮಿರಾಜ್‍ಗೆ ಈಗಾಗಲೇ ಒಂದು ಮದುವೆಯಾಗಿತ್ತು. ನಂತರ ಈತ ನೇತ್ರಾವತಿಯನ್ನ ಮದುವೆ ಆಗಿದ್ದ. ಕೋಟಿ ಕೋಟಿ ಒಡಯನಾಗಿದ್ದ ಸ್ವಾಮಿರಾಜ್, ಎರಡನೇ ಪತ್ನಿಗಾಗಿ ನಾಲ್ಕು ಕೋಟಿ ಮನೆ, ಓಡಾಡೋಕೆ ಕಾರು ಕೊಡಿಸಿದ್ದ ಎನ್ನಲಾಗಿದೆ. ಆದರೆ ಆಕೆ ಹೇಳುವಂತೆ ತನ್ನನ್ನು ಅಕ್ರಮ ಸಂಬಂಧಕ್ಕೆ ಒತ್ತಾಯಿಸಿದ್ದ. ಬೇರೆಯವರ ಜೊತೆಗೆ ಮಲಗಲು ಹೇಳುತ್ತಿದ್ದ. ಅದಕ್ಕೆ ಕೊಲೆ ಮಾಡಿದ್ದೇನೆ ಅಂತಿದ್ದಾಳೆ. ಇದನ್ನೂ ಓದಿ: ಜಿಮ್ ಮಾಡೋವ್ರಿಗೆ ಅಪ್ಪು ಸಾವು ಬಿಗ್ ಶಾಕ್ – ಜಿಮ್‍ಗೆ ಹೋಗದಂತೆ ಮಕ್ಕಳಿಗೆ ಪೋಷಕರ ಆಕ್ಷೇಪ

NML MURDER 6

ಇತ್ತ ಪತಿಯನ್ನ ಕೊಲೆ ಮಾಡಿ ಪೊಲೀಸ್ ಠಾಣೆಗೆ ಬಂದು ಈ ನೇತ್ರಾವತಿ ನಾಟಕ ಆಡಿದ್ಳಾ ಎಂಬ ಅನುಮಾನ ಪೊಲೀಸರಲ್ಲಿ ಮೂಡಿದೆ. ಕೊಲೆಯಾದ ಸ್ವಾಮಿರಾಜ್, ನೇತ್ರಾವತಿಗಾಗಿ ತನ್ನ ಫ್ಯಾಮಿಲಿಯನ್ನೇ ದೂರ ಮಾಡಿಕೊಂಡಿದ್ದ. ಹಾಗಾಗಿ ಪ್ರೀತಿಸಿದ್ದ ಪತ್ನಿಯನ್ನು ಬೇರಯವರ ಜೊತೆ ಮಲಗು ಎಂದು ಹೇಳಿದ್ನಾ ಅನ್ನೋ ಅನುಮಾನ ವ್ಯಕ್ತಪಡಿಸಿರೋ ಪೊಲೀಸ್ರು ಆಕೆಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

NML MURDER 1

ಒಟ್ಟಿನಲ್ಲಿ ಸಪ್ತಪದಿ ತುಳಿದು ಹೆಂಡತಿ ಹಾಗೂ ಮನೆಯವರಿಗೆ ಮೋಸ ಮಾಡಿ, ಮನೆಯವರ ವಿರೋಧದ ನಡುವೆಯೂ ಮತ್ತೊಬ್ಬಳ ಮೋಹಕ್ಕೆ ಒಳಗಾದವ ಈಗ ಆಕೆಯಿಂದಲೇ ಕೊಲೆಯಾಗಿದ್ದಾನೆ. ಇತ್ತ ಸ್ವಾಮಿ ರಾಜ್ ಮನೆಯವರು ಆಕೆಗೆ ಸೂಕ್ತ ಶಿಕ್ಷೆಗಾಗಿ ಆಗ್ರಹಿಸಿದ್ದಾರೆ.

NML MURDER 4

Share This Article
Leave a Comment

Leave a Reply

Your email address will not be published. Required fields are marked *