ಚಂಡೀಗಢ: ವಿವಾಹಿತ ಉದ್ಯಮಿಯೊಬ್ಬ (Businessman) ತನ್ನ ಲಿವ್-ಇನ್ ಗೆಳತಿಯನ್ನು ಚಾಕುವಿನಿಂದ ಇರಿದು ಕೊಂದು, ದೇಹವನ್ನು ಸುಟ್ಟುಹಾಕಿರುವ ಘಟನೆ ಹರಿಯಾಣದ ಸೋನಿಪತ್‌ನಲ್ಲಿ (Haryana’s Sonipat) ನಡೆದಿದೆ. ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಕೊಲೆಯಾದ ಮಹಿಳೆಯನ್ನು (Women) ಸರಿತಾ ಹಾಗೂ ಕೊಲೆ ಆರೋಪಿಯನ್ನ ಸಿವಿಲ್ ಲೈನ್ಸ್ ಪ್ರದೇಶದ ರಿಷಿ ಕಾಲೋನಿಯಲ್ಲಿ ಉಪಕಾರ್ ಎಂದು ಗುರುತಿಸಲಾಗಿದೆ. ಪಂಜಾಬ್‌ನ (Punjab) ಜಿರಾಕ್‌ಪುರ ನಿವಾಸಿಯಾಗಿರುವ ಸರಿತಾ ವೃತ್ತಿಯಲ್ಲಿ ಉಪನ್ಯಾಸಕಿಯಾಗಿದ್ದಳು. ಈಕೆ ಪತಿಯಿಂದ ಬೇರ್ಪಟ್ಟು 6 ವರ್ಷಗಳಿಂದ ಉದ್ಯಮಿಯೊಂದಿಗೆ ವಾಸಿಸುತ್ತಿದ್ದಳು ಎನ್ನಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಹಣ, ಹೆಂಡ ಹಂಚಿಕೆಯಲ್ಲಿ ಬಿಜೆಪಿಗೆ ಕಾಂಗ್ರೆಸ್ ಪೈಪೋಟಿ ನೀಡಿದೆ: ಚರ್ಚೆಗೆ ಗ್ರಾಸವಾಯ್ತು ಬಿಕೆ ಹರಿಪ್ರಸಾದ್ ಮಾತು
Advertisement
Advertisement
ಅಲ್ಲದೇ ಉಪಕಾರ್ ಲಿವಿ-ಇನ್ ಸಂಬಂಧ (live In Relationship) ಬಗ್ಗೆ ಆತನ ಪತ್ನಿಗೆ ತಿಳಿದಿತ್ತು. ಸರಿತಾ ಕೂಡ 2004ರಲ್ಲೇ ತನ್ನ ಪತಿಗೆ ವಿಚ್ಛೇದನ ನೀಡಿದ್ದಳು. ಇಬ್ಬರೂ ಕಳೆದ 6 ವರ್ಷಗಳಿಂದ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ಮನೀಶ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ದಾರಿ ತಪ್ಪಿಸಿದ ಗೂಗಲ್ ಮ್ಯಾಪ್ – ನಿರ್ಮಾಣ ಹಂತದ ಸೇತುವೆಯಿಂದ ನದಿಗೆ ಕಾರು ಬಿದ್ದು 3 ಸಾವು
Advertisement
ಅಕ್ಟೋಬರ್ 25ರಂದು ಸರಿತಾಳನ್ನ ಕೊಂದಿರುವ ಉಪಕಾರ್ ಆಕೆಯ ದೇಹದೊಂದಿಗೆ ಇಡೀ ಮನೆಯನ್ನೇ ಸುಟ್ಟುಹಾಕಿದ್ದಾನೆ. ನಂತರ ಇದೊಂದು ಆಕಸ್ಮಿಕ ಬೆಂಕಿ ಅವಘಡ ಎನ್ನುವಂತೆ ಬಿಂಬಿಸಿದ್ದಾನೆ. ಆದ್ರೆ ವಿಧಿವಿಜ್ಞಾನ ಪ್ರಯೋಗಾಲಯ ಪರೀಕ್ಷೆ ಬಳಿಕ ಸುಟ್ಟ ಗಾಯಕ್ಕೂ ಮುನ್ನ ಚೂರಿ ಇರಿದಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಉಪಕಾರ್‌ನನ್ನ ಬಂಧಿಸಲಾಗಿದೆ. ಸದ್ಯ ನ್ಯಾಯಾಲಯವು 2 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Advertisement
ಗೊತ್ತಾಗಿದ್ದು ಹೇಗೆ?
ಪಂಜಾಬ್‌ನಲ್ಲಿರುವ ಸರಿತಾ ಸಹೋದರಿ ತ್ರಿಶ್ಲಾ ಸೋನಿಪತ್‌ನ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಒಂದೊಂದೇ ಸತ್ಯಗಳು ಬೆಳಕಿಗೆ ಬಂದಿದೆ. ಇದನ್ನೂ ಓದಿ: ʻವಕ್ಫ್ ಹಠಾವೋ ಭಾರತ್ ದೇಶ್ ಬಚಾವೋʼ – ಇಂದಿನಿಂದ ವಕ್ಫ್ ವಿರುದ್ಧ ಬಿಜೆಪಿ ರೆಬಲ್ಸ್ ಟೀಂ ಹೋರಾಟ ಶುರು
ಸರಿತಾ ತನ್ನ ಪತಿ ಕಪಿಲ್‌ಗೆ ವಿಚ್ಛೇದನ ನೀಡಿ, 2018 ರಿಂದ ಸೋನಿಪತ್‌ನಲ್ಲಿ ಉಪಕಾರ್‌ನೊಂದಿಗೆ ವಾಸಿಸಲು ಪ್ರಾರಂಭಿಸಿದಳು. ಆಗಲೇ ಅವರಿಬ್ಬರ ನಡುವೆ ಜಗಳ ನಡೆಯುತ್ತಿತ್ತು. ಅ.20ರಂದು ಉಪಕಾರ್ ತನಗೆ ಕರೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಎಂದು ಸರಿತಾ ನನ್ನ ಬಳಿ ಕೇಳಿಕೊಂಡಿದ್ದಳು. ಅ.25ರಂದು ತನಗೆ ಕರೆ ಮಾಡಿ ಉಪಕಾರ್ ನನ್ನನ್ನ ಸಾಯಿಸಲು ಪ್ರಯತ್ನಿಸುತ್ತಿದ್ದಾನೆ ಎಂದು ಹೇಳಿದ್ದಳು. ಈ ಕರೆ ಕಟ್ಟಾದ ಕೆಲವೇ ಕ್ಷಣಗಳಲ್ಲಿ ಫೋನ್ ಸ್ವಿಚ್ ಆಫ್ ಆಗಿತ್ತು. ಅದೇ ದಿನ ರಾತ್ರಿ ಸರಿತಾ ಇದ್ದ ಮನೆಗೆ ಬೆಂಕಿ ತಗುಲಿ ಆಕೆ ಬೆಂಕಿಗೆ ಆಹುತಿಯಾದಳು ಎಂಬ ಮಾಹಿತಿ ತ್ರಿಶಲಾಗೆ ಸಿಕ್ಕಿತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಳು. ವಿಧಿವಿಜ್ಞಾನ ಪ್ರಯೋಗಾಲಯ ಪರೀಕ್ಷಾ ವರದಿ ಬಂದ ಬಳಿಕ ಸತ್ಯ ಬಯಲಾಗಿದೆ.