ನವದೆಹಲಿ: ಮುಂಗಾರು ಸಂಸತ್ ಅಧಿವೇಶನಕ್ಕೆ ಮಣಿಪುರ ಹಿಂಸಾಚಾರ (Manipur Violence) ವಿಚಾರ ಕಂಟಕವಾಗಿ ಪರಿಣಮಿಸಿದೆ. ಗುರುವಾರವೂ ಉಭಯ ಸದನಗಳಲ್ಲಿ ಗದ್ದಲ ಏರ್ಪಟ್ಟಿದೆ.
ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ (Jagdeep Dhankhar) ಮತ್ತು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ನಡುವೆ ವಾಗ್ಯುದ್ಧ ನಡೆದಿದೆ. ಪ್ರಧಾನಿಯನ್ನ ಅಷ್ಟೇಕೆ ಸಮರ್ಥಿಸಿ ಮಾತಾಡ್ತಿದ್ದೀರಿ? ಮಣಿಪುರ ವಿಚಾರದಲ್ಲಿ ಪ್ರಧಾನಿಯನ್ನ ಏಕೆ ರಕ್ಷಣೆ ಮಾಡ್ತಿದ್ದೀರಿ? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಧನಕರ್, ಯಾರನ್ನೂ ರಕ್ಷಿಸುವ ಅಗತ್ಯ ನನಗಿಲ್ಲ. ಸಂವಿಧಾನ ಮತ್ತು ಸದಸ್ಯರ ಹಕ್ಕುಗಳನ್ನು ರಕ್ಷಣೆ ಮಾಡುವುದು ನನ್ನ ಕೆಲಸ. ನಿಮ್ಮಂಥವರಿಂದ ಇಂಥಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಾದ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತನಾಡಲು ಅವಕಾಶ ನೀಡಿದಾಗ `ಸಭಾಪತಿ ಅವರಿಗೆ ಮದುವೆಯಾಗಿ 45 ವರ್ಷಗಳಾಗಿದೆ. ಆದರೂ ಪ್ರತಿಪಕ್ಷ ಸದಸ್ಯರ ಪ್ರಶ್ನೆಗೆ ಉತ್ತರಿಸುವಾಗ ಏಕೆ ಸಿಡಿಮಿಡಿಗೊಳ್ಳುತ್ತಾರೆ ಅನ್ನೋದೇ ಅರ್ಥವಾಗುತ್ತಿಲ್ಲ’ ಎಂದು ಕುಳಿತುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಧನಕರ್, ನಾನು ಮದುವೆಯಾಗಿ 45 ವರ್ಷ ಕಳೆದಿದೆ. ಹಾಗಾಗಿ ನನಗೆ ಕೋಪವೇ ಬರೋದಿಲ್ಲ ಎಂದು ಚಟಾಕಿ ಹಾರಿಸಿದರು. ಇದನ್ನೂ ಓದಿ: ಟ್ರೈನಿಂಗ್ ನೆಪದಲ್ಲಿ ಜ್ಯೂನಿಯರ್‌ಗಳಿಗೆ ಥಳಿಸಿದ NCC ಸೀನಿಯರ್ ಕೆಡೆಟ್- ವೀಡಿಯೋ ವೈರಲ್
ಇನ್ನು, ಆಡಳಿತ ಮತ್ತು ವಿಪಕ್ಷಗಳ ಧೋರಣೆಗೆ ಬೆಸತ್ತ ಸ್ಪೀಕರ್ ಓಂಬಿರ್ಲಾ ಇವತ್ತು ಕಲಾಪದಿಂದ ಹೊರಗುಳಿದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಧೀರ್ ರಂಜನ್ ಚೌಧರಿ, ಸ್ಪೀಕರ್ ಸದನದ ಸಂರಕ್ಷರು, ಅವರು ಬರಬೇಕು ಎಂದು ಕೋರಿದರು. ಇದನ್ನು ಮನ್ನಿಸಿದ ಸ್ಪೀಕರ್ ಮಧ್ಯಾಹ್ನದ ಕಲಾಪವನ್ನ ನಿರ್ವಹಿಸಿದರು. ಇದನ್ನೂ ಓದಿ: ಲೋಕಸಭೆಯಲ್ಲಿ ದೆಹಲಿ ಸೇವಾ ಮಸೂದೆ ಅಂಗೀಕಾರ – ಆಪ್‌ಗೆ ಭಾರೀ ಹಿನ್ನಡೆ
ಅಲ್ಲದೇ ಗುರುವಾರ ಪ್ರತಿಪಕ್ಷಗಳ ಭಾರೀ ವಿರೋಧದ ನಡುವೆಯೂ ದೆಹಲಿ ಸೇವಾ ಮಸೂದೆ ವಿಧೇಯಕವನ್ನು ಮಂಡನೆ ಮಾಡಲಾಯಿತು. ಈ ವೇಳೆ ವಿಧೇಯಕದ ಪ್ರತಿ ಹರಿದೆಸೆದ ಎಎಪಿ ಸಂಸದ ಸುಶೀಲ್ ಸದನದಿಂದ ಅಮಾನಾತಾದರು. ಕೇಂದ್ರದ ವಿರುದ್ಧ ಎಎಪಿ ವಾಗ್ದಾಳಿ ನಡೆಸಿದೆ. ಇದೇ ವೇಳೆ, ಡಿಜಿಟಲ್ ದತ್ತಾಂಶಗಳ ಸಂರಕ್ಷಣಾ ವಿಧೇಯಕವನ್ನು ಸರ್ಕಾರ ಮಂಡಿಸಿದ್ದು, ಲೋಕಸಭೆಯಲ್ಲಿ ಗದ್ದಲ ಉಂಟಾಯ್ತು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]