ಯಾದಗಿರಿ: 6 ವರ್ಷ ಪ್ರೀತಿಸಿ, ಮದುವೆಯಾಗಿ ಮಗುವಾದ ಮೇಲೂ ಮತ್ತೊಂದು ಹುಡುಗಿಯ ಬೆನ್ನು ಬಿದ್ದು ಆಕೆಯನ್ನೂ ಕೈಹಿಡಿದ ಘಟನೆಯೊಂದು ಯಾದಗಿರಿ (Yadagiri) ಜಿಲ್ಲೆಯಲ್ಲಿ ನಡೆದಿದೆ.
ಯಾದಗಿರಿಯ ದಲಿತ ಸಂಘಟನೆಯ ಮುಖಂಡನನ್ನು ಪ್ರೀತಿಸಿ ಮದುವೆ ಆಗಿ ತಪ್ಪು ಮಾಡಿದ್ದೇನೆ. ಇದಕ್ಕೆ ನ್ಯಾಯ ಕೊಡಿಸಿ ಅಂತಾ ಪತ್ನಿ ಇದೀಗ ಕಣ್ಣೀರು ಹಾಕುತ್ತಿದ್ದಾರೆ.
Advertisement
Advertisement
ಘಟನೆ ವಿವರ: ಜಿಲ್ಲೆಯ ಶಹಾಪುರ (Shahapura) ತಾಲೂಕಿನ ದೋರನಹಳ್ಳಿ ಗ್ರಾಮದ ನಿವಾಸಿ ಶರಣು ಎಂಬಾತ ಕಾಲೇಜು ಜೀವನದಲ್ಲಿ ISI ಕ್ಯಾಂಪ್ ಗೆ ಅಂತ ಬೆಂಗಳೂರಿಗೆ ತೆರಳಿದ್ದ. ಇದೇ ಕ್ಯಾಂಪ್ ಗೆ ಬಂದಿದ್ದ ಕನಕಪುರ ಸುಂದರಿಯೊಬ್ಬಳು ಶರಣುವಿನ ಕಣ್ಣು ಕುಕ್ಕಿದ್ದಳು. 2014ರಲ್ಲಿ ಬೆಂಗಳೂರಿನಲ್ಲಿ ನಡೆದ ಕ್ಯಾಂಪ್ ನಲ್ಲಿ ಕನಕಪುರದ ಸಿಂಧು ಹಾಗೂ ಯಾದಗಿರಿಯ ಶರಣು ಮೊದಲು ಭೇಟಿ ಆಗಿದ್ರು. 15 ದಿನದ ಕ್ಯಾಂಪ್ ನಲ್ಲಿ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಸ್ನೇಹ ಪ್ರೀತಿಗೆ ತಿರುಗಿ, ಶರಣು ಬೆಂಗಳೂರಿನಲ್ಲೇ ಸಿಂಧುವಿಗೆ ಲವ್ ಪ್ರಪೋಸ್ (Love Propose) ಮಾಡಿದ್ದ. ಶರಣುವಿನ ಪ್ರಪೋಸ್ ಗೆ ಆಗ ಕನಕಪುರದ ಸಿಂಧು ಸಹ ಗ್ರೀನ್ ಸಿಗ್ನಲ್ ನೀಡಿದ್ದರು. ಇದನ್ನೂ ಓದಿ: 850 ಅಡಿಕೆ ಮರ ಕಡಿದ ಕೇಸ್‌ಗೆ ಟ್ವಿಸ್ಟ್ – ಮಗಳನ್ನ ಮದುವೆ ಮಾಡಿಕೊಡ್ತೀವಿ ಅಂತಾ 25 ಲಕ್ಷ ಪೀಕಿತ್ತು ಕುಟುಂಬ
Advertisement
ಇದಾದ ಬಳಿಕ 6 ವರ್ಷಗಳ ಕಾಲ ಸಿಂಧು ಹಾಗೂ ಶರಣು ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. 6 ವರ್ಷದ ಬಳಿಕ ಶರಣು, ಸಿಂಧು ಕುಟುಂಬಸ್ಥರಿಗೆ ನಿಮ್ಮ ಮಗಳನ್ನ ಆದರ್ಶಳನ್ನಾಗಿ ಮಾಡ್ತೀನಿ ಅಂತ ಕಥೆ ಹೇಳಿ ಮದುವೆ ಆಗಿದ್ದ. ಮದುವೆಯಾಗಿ ಇಬ್ಬರು 4 ವರ್ಷಗಳ ಕಾಲ ಸುಖವಾದ ಸಂಸಾರ ನಡೆಸಿದ್ದಾರೆ. ಇವರಿಬ್ಬರಿಗೆ ಇದೀಗ ಮುದ್ದಾದ ಮೂರು ವರ್ಷದ ಗಂಡು ಮಗು ಇದೆ. ಹೀಗಿರುವಾಗಲೂ ಶರಣು, ಪತ್ನಿ ಸಿಂಧುಗೆ ತಿಳಿಸದೇ ಸಂಬಂಧಿಕರಲ್ಲೇ ಮತ್ತೊಂದು ವಿವಾಹ ಆಗಿದ್ದಾನೆ. ಮೊದಲ ಪತ್ನಿಯ ಕೈಗೊಂದು ಮಗು ನೀಡಿ, ಆಕೆಯನ್ನ ನಡು ರಸ್ತೆಯಲ್ಲೇ ಕೈಬಿಟ್ಟಿದ್ದಾನೆ. ಪ್ರೀತಿಸಿ ಮದುವೆಯಾಗಿ ಮೋಸ ಮಾಡಿದ ಗಂಡನ ಅಸಲೀ ಮುಖವಾಡ ಕಂಡು ಕಂಗಾಲಾಗಿರೋ ಸಿಂಧು, ನ್ಯಾಯಕ್ಕಾಗಿ ಅಲೆದಾಡ್ತಿದ್ದಾರೆ.
Advertisement
ಶರಣನ ಬಣ್ಣದ ಮಾತಿಗೆ ಬೆರಗಾಗಿ ಮಗಳನ್ನ ಆತನಿಗೆ ನೀಡಿದ ಕರುಳಿನ ಕೊರಗಂತು ಹೇಳ ತೀರದು. ನಮಗೆ ಶರಣು ಯಾರು ಏನು ಅಂತ ಸಹ ಗೊತ್ತಿರಲಿಲ್ಲ. ನಾವು ನಮ್ಮ ಮಗಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ಕೆಎಎಸ್, ಐಎಸ್ಎಸ್ ಮಾಡಿಸಬೇಕೆಂದು ಕನಸು ಕಂಡಿದ್ವಿ. ಆದರೆ 2014 ರಲ್ಲಿ ಬೆಂಗಳೂರಿನಲ್ಲೆ ನಮ್ಮ ಮಗಳನ್ನ ಶರಣ ಪ್ರೇಮದ ಬಲೆಗೆ ಬಿಳಿಸಿಕೊಂಡಿದ್ದಾನೆ. ಬಳಿಕ ನಮಗೆ ಬಲವಂತವಾಗಿ ಒಪ್ಪಿಸಿ ಮದುವೆ ಆಗಿದ್ದಾನೆ. 4 ವರ್ಷ ಚೆನ್ನಾಗಿಯೇ ಇದ್ದರು. ಇದ್ದಕ್ಕಿದ್ದಂತೆ ಕಳೆದ ಡಿಸೆಂಬರ್ ನಲ್ಲಿ ತಮ್ಮ ಸಂಬಂಧಿಕರ ಹುಡುಗಿಯೊಬ್ಬಳ ಜೊತೆ ವಿವಾಹವಾಗಿದ್ದಾನೆ. ಈಗ ನಮ್ಮ ಮಗಳ ಪಾಡೆನೂ ಅಂತ ತಾಯಿ ಕಣ್ಣೀರು ಹಾಕ್ತಿದ್ದಾರೆ.
ಸುಮಾರು 600 ಕಿಲೋ ಮಿಟರ್ ದೂರದಿಂದ ಮಗಳು ಚೆನ್ನಾಗಿ ಇರಲಿ ಅಂತ ಮದುವೆ ಮಾಡಿಕೊಟ್ಟಿದ್ವಿ. ಆದರೆ ಆತ ನಮ್ಮ ಮಗಳಿಗೆ ಮೋಸ ಮಾಡಿದ್ದಾನೆ. ಆತನ ವಿರುದ್ದ ಜನವರಿ 10 ರಂದು ಶಹಾಪೂರ ಠಾಣೆಗೆ ದೂರು ನೀಡಿದ್ದೇವೆ. ಆತನ ವಿರುದ್ಧ ದೂರು ನೀಡಿ ಸುಮಾರು 22 ದಿನಗಳು ಕಳೆದ್ರೂ ಪೊಲೀಸರು ಆತನನ್ನ ಬಂಧಿಸುತ್ತಿಲ್ಲ. ನನ್ನ ಮಗಳಿಗೆ ನ್ಯಾಯ ಕೊಡಿಸಿ ಸರ್ ಅಂತ ಸಿಂಧುವಿನ ತಾಯಿ ಕಣ್ಣೀರು ಹಾಕ್ತಿದ್ದಾರೆ.
ಈ ಶರಣು ದೋರನಹಳ್ಳಿ ದಲಿತ ಸಂಘಟನೆಯೊಂದರ ಯಾದಗಿರಿ ಜಿಲ್ಲಾ ಉಸ್ತುವಾರಿ ಆಗಿದ್ದಾನಂತೆ. ಇದೇ ಕಾರಣಕ್ಕೆ ನನ್ನ ಏನೂ ಮಾಡಿಕೊಳ್ಳೋದಕ್ಕೆ ಆಗಲ್ಲ ಅಂತಾ ಅದೇಷ್ಟೋ ಹುಡುಗಿಯರ ಬಾಳಲ್ಲಿ ಚೆಲ್ಲಾಟ ಆಡಿದ್ದಾನಂತೆ. ಇದೀಗ ಪರಸ್ಪರ ಪ್ರೀತಿಸಿ, ಕಾನೂನಾತ್ಮಕವಾಗಿ ಮದುವೆ ಆಗಿ ಯುವತಿ ಬಾಳಿಗೆ ಕೊಳ್ಳಿ ಇಟ್ಟಿದ್ದಾನೆ. ಅಷ್ಟೇ ಅಲ್ಲ ಆಕೆಗೊಂದು ಮಗು ಕೊಟ್ಟು ಆಕೆಯನ್ನ ನಡು ನೀರಲ್ಲಿ ಕೈ ಬಿಟ್ಟಿದ್ದು ಎಷ್ಟು ಸರಿ ಅಂತ ನಾಗರಿಕ ಸಮಾಜ ಪ್ರಶ್ನೆ ಮಾಡ್ತಿದೆ. ಹೀಗಾಗಿ ಪೊಲೀಸರು ಕೂಡಲೇ ಆರೋಪಿಯನ್ನ ಬಂಧಿಸಿ, ಕಠಿಣ ಶಿಕ್ಷೆ ಕೊಡಿಸುವ ಜೊತೆಗೆ ಸಂತ್ರಸ್ತೆಗೆ ನ್ಯಾಯ ಕೊಡಿಸಬೇಕಿದೆ.