ಚಂಡೀಘಡ್: ಮದುವೆಯಾದ ಜೋಡಿಯೊಂದು ಶವವಾಗಿ ಪತ್ತೆಯಾದ ಘಟನೆ ಹರಿಯಾಣದ ರೋಹ್ಟಕ್‍ನಲ್ಲಿ ನಡೆದಿದೆ.
ಅಶೋಕ್(36) ಹಾಗೂ ಸೋನಿಯಾ(32) ಕೊಲೆಯಾದ ದಂಪತಿ. ಅಶೋಕ್ ಹಾಗೂ ಸೋನಿಯ ಇಬ್ಬರು 6 ವರ್ಷದ ಹಿಂದೆ ಮದುವೆ ಆಗಿದ್ದರು. ರೋಹ್ಟಕ್‍ನ ರಾಮ್‍ನಗರದಲ್ಲಿರುವ ಅವರ ನಿವಾಸದಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ ಎಂದು ಡಿಎಸ್‍ಪಿ ತಹೀರ್ ಹುಸ್ಸೇನ್ ತಿಳಿಸಿದ್ದಾರೆ.
Advertisement
ಪಕ್ಕದ ಮನೆಯವರು ಅಶೋಕ್ ಹಾಗೂ ಸೋನಿಯಾ ಅವರನ್ನು ಭೇಟಿ ಮಾಡಲು ಅವರ ಮನೆಗೆ ತೆರಳಿದ್ದಾಗ ಇಬ್ಬರು ಶವವಾಗಿ ಪತ್ತೆ ಆಗಿದ್ದಾರೆ. ತಕ್ಷಣ ಪಕ್ಕದ ಮನೆಯ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದರು.
Advertisement
Advertisement
ಅಶೋಕ್ ಹಾಗೂ ಸೋನಿಯಾ ದೇಹದ ಮೇಲೆ ಚೂಪಾದ ವಸ್ತುವಿನಿಂದ ಹಲ್ಲೆ ಮಾಡಿರುವ ಗುರುತುಗಳು ಕಾಣಿಸಿಕೊಂಡಿದೆ.ಸದ್ಯ ಅನಾಮಿಕ ವ್ಯಕ್ತಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ತಹೀರ್ ಹುಸ್ಸೇನ್ ತಿಳಿಸಿದ್ದಾರೆ.
Advertisement
ಈ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv