– ಪತಿಗೆ ಶಿಕ್ಷೆಯಾಗಬೇಕೆಂದು ನೂರ್ ಜಹಾನ್ ಪಟ್ಟು
ಕಾರವಾರ: ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಅವರು ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗಿದ್ರು. ಆದರೆ ಬೇರೆ ಹೆಣ್ಣಿನ ಚಟಕ್ಕೆ ಬಿದ್ದ ಗಂಡ ತನಗೆ ಮದುವೆಯೇ ಆಗಿಲ್ಲ ಎಂದು ಹೇಳಿ ಹಿಂದೂ ಯುವತಿಯನ್ನು ಪೀತಿಸಿ ಮದುವೆಯಾಗಿದ್ದು, ಇದೀಗ ಮೊದಲ ಪತ್ನಿ ತನಗಾದ ಅನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾಳೆ.
Advertisement
ಕಳೆದ 7 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ರು. 2017ರಲ್ಲಿ ದಾಂಡೇಲಿಯ (Karwar Dandeli) ವಿಜಯ ನಗರ ನಿವಾಸಿ ನೂರ್ ಜಹಾನ್ ಹಾಗೂ ಪಟೇಲ್ ನಗರದ ನಿವಾಸಿ ಖಾದರ್ ಅಲಿ ಹಸನ್ ಸಾಬ್ ಶೇಖ್ ಮದುವೆಯಾಗಿತ್ತು. 1 ವರ್ಷ ಎಲ್ಲಾ ಚೆನ್ನಾಗಿಯೇ ಇತ್ತು. 2 ನೇ ವರ್ಷಕ್ಕೆ ಗಂಡ ಸೇರಿದಂತೆ ಆತನ ಮನೆಯವರು ಕಿರುಕುಳ ನೀಡಿದ್ದಾರೆ. ಬೇರೆ ಮನೆ ಮಾಡ್ತೇನೆಂದು ಪತ್ನಿಯನ್ನ ತವರಿಗೆ ಕಳಿಸಿದ್ದ ಭೂಪ ಬೇರೆ ಯುವತಿ ಜೊತೆ ಪ್ರೀತಿ ಶುರುಮಾಡ್ಕೊಂಡಿದ್ದ. ಇದನ್ನ ತಿಳಿದ ಪತ್ನಿ ನ್ಯಾಯಕ್ಕಾಗಿ 2019ರಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಬಳಿಕ ಇಬ್ಬರನ್ನು ಕಾಂಪ್ರಮೈಸ್ ಮಾಡಿದ್ರು. ಆದರೆ ಆತ ಮಾತ್ರ ತನ್ನ ಚಾಳಿಯನ್ನ ಬಿಟ್ಟಿರಲಿಲ್ಲ. ಪತ್ನಿಯನ್ನು ತಾಯಿ ಮನೆಯಲ್ಲಿ ಬಿಟ್ಟು 2 ವರ್ಷ ವಿದೇಶಕ್ಕೆ ತೆರಳಿದ್ದ. ವಿದೇಶದಿಂದ ಬಂದ ಬಳಿಕ ಹಿಂದೂ ಯುವತಿ ಐಶ್ವರ್ಯಾಳನ್ನ ರಿಜಿಸ್ಟರ್ ಮದುವೆಯಾಗಿದ್ದ. ಮದುವೆಯಾಗಿಲ್ಲ ಎಂದು ಪ್ರತಿಜ್ಞಾ ಪತ್ರದಲ್ಲೂ ಸುಳ್ಳು ಮಾಹಿತಿ ನೀಡಿದ್ದಾನೆ. ಇದನ್ನ ತಿಳಿದ ಪತ್ನಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾಳೆ. ಇದನ್ನೂ ಓದಿ: ಕೌಟುಂಬಿಕ ಕಲಹ – ಪತ್ನಿಯ ಕತ್ತು ಸೀಳಿ ಕೊಲೆಗೈದ ಪತಿ
Advertisement
Advertisement
ನೂರ್ ಜಹಾನ್ ತವರು ಮನೆಯಲ್ಲಿದ್ದುಕೊಂಡೇ ಬೆಳಗಾವಿಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡ್ತಿದ್ದು, ಗೋವಾ ಸಂಸ್ಥೆಯಲ್ಲಿಯೂ ಕೆಲಸ ಮಾಡ್ತಿದ್ದಾಳೆ. ನೂರ್ ಜಹಾನ್‍ಳಿಗೆ ಆಗಿರುವ ಮೋಸದಲ್ಲಿ ಭಾಗಿಯಾದ ಆರೋಪಿಯ ತಾಯಿ ಮುಮ್ತಾಜ್ ಹಸನ್ ಸಾಬ್, ಹಸನ್ ಸಾಬ್ ಮೊಹ್ಮದ್, ಆರತಿ ಯಮುನಪ್ಪ ವಿರುದ್ಧ ಕಾರವಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಆರೋಪಿಯನ್ನ ಬಂಧಿಸಿ ಬೇಲ್‍ನಲ್ಲಿ ಬಿಡುಗಡೆ ಮಾಡಿದ್ದಾರೆ. ಸದ್ಯ ನೂರ್ ಜಹಾನ್ ಸಹಾಯಕ್ಕೆ ದಾಂಡೇಲಿ ಅಂಬೇಡ್ಕರ್ ಸೈನ್ಯ ದಲಿತ ಸಂಘಟನೆ ನಿಂತಿದ್ದು, ನ್ಯಾಯ ಸಿಗದಿದ್ದಲ್ಲಿ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
Advertisement
ತನಗಾದ ಅನ್ಯಾಯದ ವಿರುದ್ಧ ನ್ಯಾಯ ಪಡೆಯಲು ಅಧಿಕಾರಿಗಳ ಕಚೇರಿಯನ್ನು ಅಲೆದಾಡುತ್ತಿರುವ ನೂರ್ ಜಹಾನ್, ಮುಂದಕ್ಕೆ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.
Web Stories