– ‘ಐದು ಬಾರಿ’ ಪತ್ನಿಗೆ ಚಾನ್ಸ್ ಕೊಟ್ಟ ಯೋಧ
– ನಂಗೂ ಅವಳ ಮೇಲೆ ಹಕ್ಕಿದೆ ಎಂದ ಪ್ರಿಯಕರ
ಬೆಂಗಳೂರು: ಜಮ್ಮುಕಾಶ್ಮೀರದ ಮೈ ನಡುಗಿಸುವ ಚಳಿಯಲ್ಲಿ ದೇಶ ಕಾಯುವ ಯೋಧನೊಬ್ಬ ಮದುವೆಯಾದ ಆರೇ ತಿಂಗಳಿಗೆ ಮೋಸಗಾತಿ ಪತ್ನಿಯಿಂದ ಬಿಡುಗಡೆಬೇಕು ಎಂದು ಪೊಲೀಸ್ ಇಲಾಖೆಗೆ ಅಲೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಯೋಧ ಪ್ರಶಾಂತ್ ನ್ಯಾಯ ಕೊಡಿಸುವಂತೆ ಗೃಹ ಸಚಿವರು, ಪೊಲೀಸ್ ಇಲಾಖೆ ಎಂದು ಅಲೆದಾಡುತ್ತಿದ್ದಾರೆ.
Advertisement
Advertisement
ಏನಿದು ಪ್ರಕರಣ?
ಮರಾಠ ರೆಜಿಮೆಂಟ್ ಜಮ್ಮು ಕಾಶ್ಮೀರದಲ್ಲಿ ಗಡಿಕಾಯುವ ಯೋಧ ಪ್ರಶಾಂತ್ (27)ಗೆ ಆರು ತಿಂಗಳ ಹಿಂದೆ ಕಾನ್ಸ್‌ಟೇಬಲ್ ಪೂರ್ಣಿಮಾ ಜೊತೆ ಮದುವೆ ನಿಶ್ಚಯವಾಗಿತ್ತು. ಮನೆಯವರು ನೋಡಿದ ಹುಡುಗಿಗೆ ಪ್ರಶಾಂತ್ ತಾಳಿ ಕಟ್ಟಿದ್ದರು. ಮದುವೆಯಾದ ಬಳಿಕ ಸ್ವಲ್ಪ ದಿನವಿದ್ದು ಮತ್ತೆ ಗಡಿಕಾಯುವ ಕೆಲಸಕ್ಕೆ ಹೋಗಿದ್ದಾರೆ. ಅಲ್ಲಿ ಪತ್ನಿಯ ನೆನಪಲ್ಲಿ ಪ್ರಶಾಂತ್ ದಿನ ದೂಡುತ್ತಿದ್ದರೆ ಇತ್ತ ಪೂರ್ಣಿಮಾ ಮಡಿಕೇರಿ ಗೋಣಿಕೊಪ್ಪಲಿನ ಸ್ಟೇಷನ್ ಕಾನ್ಸ್‌ಟೇಬಲ್ ಆಗಿದ್ದ ಮೋಹನ್ ಜೊತೆ ಲವ್ವಿಡವ್ವಿ ಶುರು ಮಾಡಿಕೊಂಡಿದ್ದಳು.
Advertisement
ಪ್ರಶಾಂತ್ ಡ್ಯೂಟಿಯಿಂದ ಮನೆಗೆ ಬಂದಾಗ ಈ ವಿಚಾರ ಗೊತ್ತಾಗಿದೆ. ಮೋಹನ್‍ಗೆ ಮದುವೆಯಾಗಿ ಮಕ್ಕಳಿದ್ದರೂ ಪೂರ್ಣಿಮಾಗೆ ಅಶ್ಲೀಲ ಮೆಸೇಜ್, ವಿಡಿಯೋ ಕಾಲ್ ಮಾಡುವುದು ಗೊತ್ತಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಮೊದ ಮೊದಲು ಅಣ್ಣ ತಂಗಿ ಸಂಬಂಧ ಎಂದು ಇಬ್ಬರೂ ನಟಿಸಿದ್ದಾರೆ. ಆಮೇಲೆ ಪತ್ನಿ, ತನಗೂ ಮೋಹನ್‍ಗೂ ಸಂಬಂಧ ಇದೆ. ಆತ ನನಗೆ ಬ್ಲಾಕ್‍ಮೇಲ್ ಮಾಡುತ್ತಿದ್ದನು. ಹೀಗಾಗಿ ಎಲ್ಲವನ್ನು ಮರೆತು ಮತ್ತೆ ಬಾಳೋಣ ಇನ್ನೆಂದೂ ಹೀಗಾಗಲ್ಲ ಅಂದಿದ್ದಾಳೆ.
Advertisement
‘ಐದು ಬಾರಿ’ ಪತ್ನಿಗೆ ಚಾನ್ಸ್ ಕೊಟ್ಟ ಯೋಧ!
ಪತಿ ಪ್ರಶಾಂತ್ ಐದು ಬಾರಿ ಆಕೆಗೆ ಚಾನ್ಸ್ ಕೊಟ್ಟಿದ್ದಾರೆ. ಇನ್ನೆಂದೂ ಮಾತನಾಡಲ್ಲ ಎಂದು ಪ್ರಮಾಣ ಮಾಡೋದು ಮತ್ತೆ ಮೋಹನ್ ಜೊತೆ ಸುತ್ತಾಡೋದು ಮಾಡುತ್ತಿದ್ದಳು. ಕೊನೆಗೆ ಪೂರ್ಣಿಮಾಳ ವಂಚನೆಯ ಬುದ್ಧಿ ಎಷ್ಟೇ ಹೇಳಿದರೂ ಬದಲಾಗಿಲ್ಲ. ಇದರಿಂದ ರೋಸಿ ಹೋದ ಪ್ರಶಾಂತ್ ಮದುವೆಯಾಗಿ ಆರೇ ತಿಂಗಳಿಗೆ ಮೋಸಗಾತಿಯಿಂದ ಬಿಡುಗಡೆಬೇಕು ಎಂದು ನಿರ್ಧಾರ ಮಾಡಿದ್ದಾರೆ.
ತನ್ನ ಬದುಕಿಗೆ ಅನ್ಯಾಯ ಮಾಡಿದ ಮೋಹನ್ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಎಸ್‍ಪಿಗೆ ದೂರು ಕೊಟ್ಟಿದ್ದಾರೆ. ಜೊತೆಗೆ ನನ್ನ ಹೆಂಡತಿನಾ ಬಿಟ್ಟು ಬಿಡು ಎಂದು ಮೋಹನ್‍ನನ್ನು ಪರಿ ಪರಿಯಾಗಿ ಕೇಳಿದ್ದಾರೆ. ಆಗ ಮೋಹನ್, ನಿಂಗೆಷ್ಟು ಹಕ್ಕು ಇದಿಯೋ ನನಗೂ ಅವಳ ಮೇಲೆ ಅಷ್ಟೇ ಹಕ್ಕಿದೆ ಎಂದಿದ್ದಾನಂತೆ.
ಕೊನೆಗೆ ಅಲ್ಲಿನ ಎಸ್‍ಪಿ ಕ್ರಮಕೈಗೊಳ್ಳದೇ ಇದ್ದಾಗ ತೊಟ್ಟ ಯೂನಿಫಾರ್ಮ್ ನಲ್ಲೇ ಗೃಹಸಚಿವರು, ಎಡಿಜಿಪಿ ಎಂದು ಪೊಲೀಸ್ ಇಲಾಖೆಯಿಂದ ಇಲಾಖೆಗೆ ನ್ಯಾಯ ಕೊಡಿಸುಂತೆ ಪ್ರಶಾಂತ್ ಅಲೆದಾಡುತ್ತಿದ್ದಾರೆ. ಮೋಹನ್ ವಿರುದ್ಧ ಶಿಸ್ತಿನ ಕ್ರಮ ಕೈಗೊಂಡು ಅಮಾನತು ಮಾಡಿ ಎಂದು ಪ್ರಶಾಂತ್ ಈಗ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ..