ಚಿಕ್ಕಮಗಳೂರು: ಕೊರೊನಾ ಆತಂಕದಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಇದರಿಂದ ಇಂದು ನಡೆಯಬೇಕಿದ್ದ ಮದುವೆಯಲ್ಲಿ ವಧು-ವರರಿಬ್ಬರು ಮುಖಕ್ಕೆ ಮಾಸ್ಕ್ ಧರಿಸಿ, ವಧುವಿನ ಮನೆಯಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಹಲಸುಗುಡ್ಡೆ ಗ್ರಾಮದಲ್ಲಿ ನಡೆದಿದೆ.
ಬಣಕಲ್‍ನ ಚರ್ಚ್ ಹಾಲ್‍ನಲ್ಲಿ ಇಂದು ಸುಶಾಂತ್ ಹಾಗೂ ನಿಶ್ಚಿತಾ ಮದುವೆ ನಿಗದಿಯಾಗಿತ್ತು. ಆದರೆ ಕೊರೊನಾ ಆತಂಕದಿಂದ ಇಡೀ ದೇಶ ಲಾಕ್‍ಡೌನ್ ಆಗಿರುವುದರಿಂದ ಅದ್ಧೂರಿ ಮದುವೆಯನ್ನ ಕ್ಯಾನ್ಸಲ್ ಮಾಡಲಾಗಿತ್ತು. ಹೀಗಾಗಿ ಇಂದು ವಧುವಿನ ಸ್ವ-ಗ್ರಾಮದಲ್ಲಿ ಸರಳವಾಗಿ ಮದುವೆ ನಡೆಸಲಾಯಿತು.
Advertisement
Advertisement
ಈ ವೇಳೆ ಮದುವೆಗೆ ಆಗಮಿಸಿದ್ದ ಬಂಧುಗಳು ಸೇರಿದಂತೆ ವಧು-ವರರಿಬ್ಬರು ಕೂಡ ಮುಖಕ್ಕೆ ಮಾಸ್ಕ್ ಹಾಕಿಕೊಂಡೇ ಹಾರ ಬದಲಿಸಿಕೊಂಡು, ತಾಳಿ ಕಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಬಳಿಕವೂ ಕುಟುಂಬದವರು ಸೇರಿದಂತೆ ಎಲ್ಲರೂ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಫೋಟೋ ತೆಗಿಸಿಕೊಂಡಿದ್ದಾರೆ.
Advertisement
ಅಷ್ಟೇ ಅಲ್ಲದೇ ಮದುವೆ ಮಾಡಿಸಿದ ಪುರೋಹಿತರು ಕೂಡ ಮುಖಕ್ಕೆ ಮಾಸ್ಕ್ ಹಾಕಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಂಡು ಮದುವೆ ಮಾಡಿಸಿದ್ದಾರೆ.