– ಪತಿ, ಆತನ ಕುಟುಂಬದಿಂದ ಮೋಸ
– ಹಬ್ಬಕ್ಕೆ ಕರ್ಕೊಂಡು ಬರಲು ಹೋದಾಗ ರಹಸ್ಯ ಬಯಲು
ಹೈದರಾಬಾದ್: ಮದುವೆಯಾದ ಕೇವಲ ಎಂಟು ದಿನಕ್ಕೆ ನವ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯಲ್ಲಿ ನಡೆದಿದೆ.
ಮೌನಿಕಾ ರೆಡ್ಡಿ (25) ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ. ಈಕೆಯ ತಂದೆ ಸೋಮ ಇಂದ್ರ ರೆಡ್ಡಿ ಸರ್ಕಾರಿ ಶಿಕ್ಷಕರಾಗಿದ್ದು, ಜಿಲ್ಲೆಯ ವಿನಾಯಕನಗರದಲ್ಲಿ ವಾಸಿಸುತ್ತಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಮೌನಿಕಾ ರೆಡ್ಡಿ ಹಿರಿಯ ಮಗಳಾಗಿದ್ದಳು.
Advertisement
ಇದೇ ತಿಂಗಳ 15 ರಂದು ಅಂದರೆ ಭಾನುವಾರ ಮೌನಿಕಾ ರೆಡ್ಡಿಗೆ ಮದುವೆಯಾಗಿತ್ತು. ಹೈದರಾಬಾದ್‍ನ ನಿವಾಸಿ ಸಾಯಿ ಕಿರಣ್ ರೆಡ್ಡಿಯ ಜೊತೆ ವಿವಾಹವಾಗಿತ್ತು. ಮದುವೆ ಸಂದರ್ಭದಲ್ಲಿ ವರದಕ್ಷಿಣೆಯಾಗಿ 10 ಲಕ್ಷ ರೂ. ನಗದು, 35 ಗ್ರಾಂ ಚಿನ್ನ ಮತ್ತು 4 ಕೆಜಿ ಬೆಳ್ಳಿಯನ್ನು ನೀಡಲಾಗಿತ್ತು. ವಿವಾಹ ಮುಗಿದ ನಂತರ ಮೌನಿಕಾ ಪತಿಯ ಮನೆಗೆ ಹೋಗಿದ್ದಳು.
Advertisement
ಬುಧವಾರ ಯುಗಾದಿ ಹಬ್ಬವಿದೆ. ಹೀಗಾಗಿ ಪೋಷಕರು ಮಗಳು ಮತ್ತು ಅಳಿಯನನ್ನು ಹಬ್ಬಕ್ಕೆ ಕರೆದುಕೊಂಡು ಬರಲು ಶನಿವಾರ ಹೈದರಾಬಾದ್‍ಗೆ ಹೋಗಿದ್ದರು. ಈ ವೇಳೆ ಕಿರಣ್ ರೆಡ್ಡಿಯ ಕುಟುಂಬಕ್ಕೆ ಯಾವುದೇ ಆಸ್ತಿ ಇಲ್ಲ. ಅಲ್ಲದೇ ಆತ ಯಾವುದೇ ಕೆಲಸವಿಲ್ಲದೆ ಮನೆಯಲ್ಲಿದ್ದಾನೆ ಎಂದು ತಿಳಿದಿದೆ.
Advertisement
ಇದರಿಂದ ಕೋಪಗೊಂಡ ಮೌನಿಕಾ ಪೋಷಕರು ಗಲಾಟೆ ಮಾಡಿದ್ದಾರೆ. ಕೊನೆಗೆ ಜಗಳ ಮಾಡಿಕೊಂಡು ತಮ್ಮ ಮನೆಗೆ ಮಗಳನ್ನು ಕರೆದುಕೊಂಡು ಬಂದಿದ್ದಾರೆ. ಭಾನುವಾರ ರಾತ್ರಿ ಊಟ ಮಾಡುವಾಗ ನನಗೆ ಮೋಸ ಆಗಿದೆ ಎಂದು ಮೌನಿಕಾ ಕಣ್ಣೀರು ಹಾಕಿದ್ದಾಳೆ. ಆಗ ಫೋಷಕರು ನಾವು ಹಿರಿಯರ ಜೊತೆ ಮಾತನಾಡಿ ರಾಜಿ-ಪಂಚಾಯಿತಿ ಮಾಡುತ್ತೇವೆ ಎಂದು ಸಮಾಧಾನ ಮಾಡಿದ್ದಾರೆ.
Advertisement
ಭಾನುವಾರ ಬೆಳಿಗ್ಗೆ ತುಂಬಾ ಹೊತ್ತಾದರೂ ಮೌನಿಕಾ ರೂಮಿನಿಂದ ಹೊರಗೆ ಬಂದಿರಲಿಲ್ಲ. ನಂತರ ಪೋಷಕರು ಹೋಗಿ ಬಾಗಿಲು ಬಡಿದಿದ್ದಾರೆ. ಆದರೆ ಒಳಗಿನಿಂದ ಮೋನಿಕಾ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಿಲ್ಲ. ಇದರಿಂದ ಗಾಬರಿಗೊಂಡ ಪೋಷಕರು ನೆರೆಹೊರೆಯವರ ಸಹಾಯದಿಂದ ಬಾಗಿಲು ಮುರಿದು ಒಳಗೆ ಹೋಗಿದ್ದಾರೆ. ಆದರೆ ಅಷ್ಟರಲ್ಲಿ ಮೌನಿಕಾ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.
ನಮ್ಮ ಮಗಳ ಪತಿಗೆ ಯಾವುದೇ ಕೆಲಸವಿಲ್ಲ. ಆತ ಜಮೀನು ಇದೆ ಎಂದು ಸುಳ್ಳು ಮದುವೆ ಸಂದರ್ಭದಲ್ಲಿ ಹೇಳಿದ್ದನು. ಇದರಿಂದ ನೊಂದ ಮಗಳ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರು ನೀಡಿದ್ದಾರೆ. ಸೂರ್ಯಪೇಟೆ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.