Tharun Sonal Wedding- ಬರ್ತ್ ಡೇ ದಿನಾನೇ ಮದುವೆ ನನಗೆ ತುಂಬಾ ಸ್ಪೆಷಲ್: ನಟಿ ಸೋನಲ್

Public TV
2 Min Read
Sonal 1

ಗುರು ಹಿರಿಯರ ಸಮ್ಮುಖದಲ್ಲಿ ಇಂದು ನಟಿ ಸೋನಲ್ (Sonal) ಮತ್ತು ನಿರ್ದೇಶಕ ತರುಣ್ ಸುಧೀರ್‍ (Tarun Sudhir) ಸಪ್ತಪದಿ ತುಳಿದಿದ್ದಾರೆ. ಈ ಮದುವೆಗೆ (marriage) ಅನೇಕ ಗಣ್ಯರು ಸಾಕ್ಷಿಯಾಗಿದ್ದರು. ಸ್ಯಾಂಡಲ್‍ ವುಡ್ ನಟ ನಟಿಯರು, ತಂತ್ರಜ್ಞರು ಮತ್ತು ಪರ ಭಾಷಾ ನಟರೂ ಆಗಮಿಸಿದ್ದರು. ಜೊತೆಗೆ ರಾಜಕಾರಣಗಳು ಕೂಡ ಮದುವೆಗೆ ಸಾಕ್ಷಿಯಾಗಿದ್ದು ವಿಶೇಷ. ಹಾಗಾಗಿ ಸಹಜವಾಗಿಯೇ ಹೊಸ ದಂಪತಿಗೆ ಸಂಭ್ರಮವಾಗಿದೆ.

Sonal 2

ಮದುವೆ ಕುರಿತಂತೆ ನಟಿ ಸೋನಲ್ ಮಾತನಾಡುತ್ತಾ, ‘ಹೊಸ ಜೀವನ ಶುರು ಮಾಡ್ತಿದ್ದೀವಿ ತುಂಬಾ ಖುಷಿ ಇದೆ. ದರ್ಶನ್ ಸರ್ ನಮ್ ಜೀವನದಲ್ಲಿ ಇಂಪಾರ್ಟೆಂಟ್ ರೋಲ್ ಪ್ಲೇ ಮಾಡಿದ್ದಾರೆ. ಅವರನ್ನು ಯಾವತ್ತೂ ಮರೆಯಲ್ಲ. ನನ್ನ ಹುಟ್ಟು ಹಬ್ಬದ ದಿನದಂದೇ ನಾನು ಹೊಸ ಜೀವನಕ್ಕೆ ಕಾಲಿಡ್ತಾ ಇರೋದು ಅತ್ಯಂತ ಸಂಭ್ರಮ ತಂದಿದೆ’ ಅಂದಿದ್ದಾರೆ.

Tharun Sonal Wedding 1 1

ತರುಣ್ ಸುಧೀರ್ ಹೇಳಿದ್ದೇನು?..

ನಿರ್ದೇಶಕ ತರುಣ್ ಸುಧೀರ್ ಮತ್ತು ಸೋನಲ್‍ ಮದುವೆ ಆಗೋಕೆ ಕಾರಣವೇ ನಟ ದರ್ಶನ್. ಅಂದುಕೊಂಡಂತೆ ಆಗಿದ್ದರೆ ದರ್ಶನ್ ಮುಂದೆ ನಿಂತು ಈ ಜೋಡಿಯ ಮದುವೆ ಮಾಡಬೇಕಿತ್ತು. ಇವರ ಮದುವೆ ನಿಶ್ಚಿಯ ಮಾಡಿ ಕೊಲೆ ಕೇಸ್‍್ ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿಕೊಂಡರು ದರ್ಶನ್. ಈ ಮದುವೆಗೆ ದರ್ಶನ್ ಬರ್ತಾರೆ ಅನ್ನೋ ಮಾತು ಸುಳ್ಳಾಯಿತು ಹಾಗಾಗಿ ಅವರ ಅನುಪಸ್ಥಿತಿ ಬೇಸರ ತರಿಸಿದೆ ಎಂದಿದ್ದಾರೆ ತರುಣ್ ಸುಧೀರ್.

Sonal 3

ಮದುವೆಯ ಈ ಸಂಭ್ರಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ತರುಣ್, `ಹೊಸ ಜೀವನ ಹೊಸ ಹುರುಪಿದೆ. ಇಷ್ಟು ದಿನ ಕಾದಿದ್ದಕ್ಕೂ ಬೇಸ್ಟ್ ಕೊಟ್ಟಿದಾರೆ ದೇವ್ರು. ತುಂಬಾ ಜನ ಬಂದು ವಿಶ್ ಮಾಡಿದ್ರು ಎಲ್ಲರೂ ತಮ್ಮನ ಥರ ಕುಟುಂಬದ ಥರ ಬಂದು ಹಾರೈಸಿದ್ರು ಎಂದಿದ್ದಾರೆ.

ದರ್ಶನ್ ಅನುಪಸ್ಥಿತಿ ಬಗ್ಗೆಯೂ ಮಾತನಾಡಿದ ತರುಣ್, `ಲಗ್ನ ಪತ್ರಿಕೆ ಬರೆಸುವ ಮುಂಚೆ ಡೇಟ್ ಕನ್ಪರ್ಮ್ ಆಗಿತ್ತು. ಡೇಟ್ ಚೇಂಜ್ ಮಾಡ್ಬೇಡ ಮದ್ವೆ ಮಾಡ್ಕೊ ಅಂದ್ರು ದರ್ಶನ್. ಆಗಸ್ಟ್ 11 ಡೇಟ್ ಕೊಟ್ಟಿದ್ವಿ. ಅವರು ಹೇಳಿದಂತೆ ಮದುವೆ ಆಗ್ತಿದ್ದೇವೆ. ದರ್ಶನ್ ಅವ್ರ ಅನುಪಸ್ಥಿತಿ ಬೇಸರ ಅನ್ನಿಸ್ತಿದೆ’ ಎಂದು ದರ್ಶನ್ ಬಗ್ಗೆ ಮಾತಾಡ್ತಾ ಭಾವುಕರಾದ ತರುಣ್ ಸುಧೀರ್.

ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮದುವೆ ಇಂದು ಬೆಳಗ್ಗೆ 10.50ಕ್ಕೆ ಬೆಂಗಳೂರಿನ ಪೂರ್ಣಿಮಾ ಪಾಲೇಸ್‍ ನಲ್ಲಿ ನಡೆಯಿತು. ಚಿತ್ರರಂಗದ ಅನೇಕ ಗಣ್ಯರ ಮತ್ತು ಕುಟುಂಬದ ಸಮ್ಮುಖದಲ್ಲಿ ಈ ಜೋಡಿ ಹೊಸ ಜೀವನಕ್ಕೆ ಕಾಲಿಟಿತು. ತಾಳಿ ಕಟ್ಟೋ ವೇಳೆ ನಟಿ ಸೋನಲ್ ಭಾವುಕರಾಗಿದ್ದರು.

Share This Article