ಬೆಂಗಳೂರು: ಫೆಬ್ರವರಿ 14ರಂದು ಮದುವೆ ಆಗುವುದಕ್ಕೆ ನವವಧು-ವರರು ಕ್ಯೂ ನಿಂತಿರುತ್ತಾರೆ. ಅಷ್ಟೇ ಅಲ್ಲ ಫೆ. 14ಕ್ಕೆ ಮದುವೆ ಹಾಲ್‍ಗಳು ನಿಮಗೆ ಸಿಗಬೇಕಾದರೆ ಬರೋಬ್ಬರಿ ಏಳೆಂಟು ತಿಂಗಳ ಹಿಂದೆನೇ ಬುಕ್ ಮಾಡಿಕೊಳ್ಳಬೇಕು. ಬೆಂಗಳೂರಿನ ಅಷ್ಟು ಚೌಟ್ರಿಗಳು ಗುರುವಾರದ ದಿನಕ್ಕೆ ಅದ್ಧೂರಿಯಾಗಿ ಹೌಸ್‍ಫುಲ್ ಆಗಿ ರೆಡಿಯಾಗುತ್ತಿದೆ.
ಗುರುವಾರ ಬೆಂಗಳೂರಿನ ಯಾವ ಕಲ್ಯಾಣ ಮಂಟಪದಲ್ಲೂ ಹಾಲ್ ಖಾಲಿ ಇರುವುದಿಲ್ಲ. ನೀವು ಆರೇಳು ತಿಂಗಳ ಹಿಂದೆ ನಾಳೆಯ ದಿನಕ್ಕೆ ಬುಕ್ ಮಾಡಿಸಿಕೊಳ್ಳೋಕೂ ಆಗುತ್ತಿರಲಿಲ್ಲ. ಗುರುವಾರ ಮದುವೆ ಆಗುವುದಕ್ಕೆ ಫುಲ್ ಡಿಮ್ಯಾಂಡ್. ಅಷ್ಟಕ್ಕೂ ಗುರುವಾರ ಏನಪ್ಪ ಸ್ಪೆಷಲ್ ಎಂದು ಯೋಚನೆ ಮಾಡುತ್ತಿದ್ದೀರಾ.
Advertisement
Advertisement
ನಾಳೆ ಫೆಬ್ರವರಿ 14 ಪ್ರೇಮಿಗಳ ದಿನಾಚರಣೆ. ಪ್ರೇಮಿಗಳ ದಿನಾಚರಣೆಯ ದಿನವೇ ಮದುವೆ ಟ್ರೆಂಡ್ ಹೆಚ್ಚುತ್ತಿದ್ದು ಈ ವರ್ಷವಂತೂ ಈ ದಿನ ಎಲ್ಲಾ ಚೌಟ್ರಿಗಳು ಹೌಸ್‍ಫುಲ್. ಅದರಲ್ಲೂ ಆರೇಳು ತಿಂಗಳ ಹಿಂದೆಯೇ ಈ ದಿನಕ್ಕಾಗಿ ಹಾಲ್ ಬುಕ್ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.
Advertisement
ಪ್ರೇಮಿಗಳ ದಿನವಾದರೂ ಮಹೂರ್ತ ಕೂಡಿಬಾರದೇ ಇದರೆ ಮದುವೆಯಾಗಲು ಹಿಂದೇಟು ಹಾಕುತ್ತಾರೆ. ಆದರೆ ಈ ವರ್ಷ ಮೂಹೂರ್ತ ಪ್ರೇಮಿಗಳ ದಿನಕ್ಕೆ ಅದ್ಭುತವಾಗಿ ಕೂಡಿಬಂದಿರುವುದರಿಂದ ಮದುವೆ ಆಗುವುದಕ್ಕೆ ಬಯಸೋರು ಇದೇ ದಿನಕ್ಕೆ ಜೈ ಅಂದಿದ್ದಾರೆ.
Advertisement
ವರ್ಷದ ಅಷ್ಟು ದಿನಗಳಲ್ಲಿ ಇರದ ಡಿಮ್ಯಾಂಡ್ ಮದ್ವೆ ಹಾಲ್‍ಗಳಿಗೆ ಪ್ರೇಮಿಗಳ ದಿನ ಇರುತ್ತೆ. ಪ್ರೇಮಿಗಳ ದಿನ ಸಪ್ತಪದಿ ತುಳಿದು ಗಟ್ಟಿಮೇಳ ಮೊಳಗಿಸಿಕೊಳ್ಳುವ ಜೋಡಿಗಳಿಗೆ ಮದ್ವೆ ದಿನ ಇನ್ನಷ್ಟು ಸ್ಪೆಷಲ್ ಆಗಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv