DistrictsKalaburagiKarnatakaLatestMain Post

ಮಠಕ್ಕೆ ಬಂದ ಭಕ್ತೆಯನ್ನೇ ಪಟಾಯಿಸಿ ಕೈ ಕೊಟ್ಟ ಕಾಮಿ ಸ್ವಾಮೀಜಿ

ಕಲಬುರಗಿ: ಮಠಕ್ಕೆ ಭಕ್ತೆಯಾಗಿ ಬಂದ ಭಕ್ತಳನ್ನೆ ಪಟಾಯಿಸಿ ಮದುವೆಯಾಗಿ ನಂತರ ಕೈ ಕೊಟ್ಟ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸರಸಂಭಾ ಮಠದ ಪ್ರಕಾಶ್ ಪುರಾಣಿಕ್ ಮಹಿಳೆಯನ್ನು ವಂಚಿಸಿ ಈಗ ಅರೆಸ್ಟ್ ಆಗಿದ್ದಾನೆ.

ಏನಿದು ಪ್ರಕರಣ?
ಮಠಕ್ಕೆ ಬಂದ ಭಕ್ತೆಯನ್ನು ಮಠದ ಪೀಠಾಧಿಪತಿಯಾದ ಪ್ರಕಾಶ್ ಪುರಾಣಿಕ ಮುತ್ಯಾ ಯುವತಿಯನ್ನು ಪ್ರೀತಿಸಲು ಆರಂಭಿಸಿದ್ದ. ಈ ಪ್ರೀತಿ ಮದುವೆಯ ಸಂಬಂಧಕ್ಕೆ ತಿರುಗಿ 2010 ರಲ್ಲಿ ಇಬ್ಬರು ಶ್ರೀಶೈಲಕ್ಕೆ ಹೋಗಿ ಮದುವೆಯಾಗಿದ್ದರು. 7 ವರ್ಷ ಚೆನ್ನಾಗಿ ಸಂಸಾರ ನಡೆಸಿದ ಪ್ರಕಾಶ್ ಮುತ್ಯ ಇತ್ತೀಚಿಗೆ ಯುವತಿಗೇ ಕೈ ಕೊಟ್ಟು ಮೊಬೈಲ್ ಸ್ವೀಚ್ ಆಫ್ ಮಾಡಿ ಪರಾರಿಯಾಗಿದ್ದ.

7 ವರ್ಷ ಸಂಸಾರ ಮಾಡಿದ್ರರೂ ಸ್ವಾಮೀಜಿ ಮಹಾನಂದಳಿಗೆ ಮಕ್ಕಳಾಗದಂತೆ ಔಷಧಿ ನೀಡಿದ್ದಾನೆ. ಅಷ್ಟೇ ಅಲ್ಲ ಮಹಾನಂದಳಿಗಾಗಿ ಕಲಬುರಗಿ ನಗರದಲ್ಲಿ ಕಟ್ಟಿಸಿದ ಮನೆ ಸಹ ಸ್ವಾಮೀಜಿ ಇದೀಗ ಭಕ್ತರ ಹೆಸರಿನಲ್ಲಿ ನೋಂದಾಯಿಸಿದ್ದಾನೆ. ಅಷ್ಟೇ ಅಲ್ಲದೇ ಯುವತಿಗೇ ಮನೆ ಬಿಡುವಂತೆ ರೌಡಿಗಳ ಮೂಲಕ ಹೆದರಿಸುತ್ತಿದ್ದಾನೆ. ಹೀಗಾಗಿ ಕೂಡಲೇ ಪ್ರಕಾಶ್ ಮುತ್ಯಾನ ವಿರುದ್ಧ ಕ್ರಮಕ್ಕೆ ದಲಿತ ಸಂಘಟನೆ ಆಗ್ರಹಿಸಿವೆ.

ಈ ಕುರಿತು ಕಲಬುರಗಿ ನಗರದ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಕಾಮಿ ಸ್ವಾಮಿಯನ್ನು ಬಂಧಿಸಿದ್ದಾರೆ.

 

Leave a Reply

Your email address will not be published. Required fields are marked *

Back to top button