ಧಾರವಾಡ: ಲಾಕ್‍ಡೌನ್‍ನಿಂದ ಈಗಾಗಲೇ ಅನೇಕ ಮದುವೆ ಸಮಾರಂಭಗಳು ಕ್ಯಾನ್ಸಲ್ ಆಗಿವೆ. ಕೆಲವರು ಸರಳವಾಗಿ ಲಾಕ್‍ಡೌನ್ ನಿಯಮ ಉಲ್ಲಂಘಿಸದೆ ಮದುವೆಯಾಗಿದ್ದಾರೆ. ಈ ನಡುವೆ ಜಿಲ್ಲೆಯಲ್ಲಿ ವಿಡಿಯೋ ಕಾಲ್ ಮೂಲಕ ಮುಸ್ಲಿಂ ಜೋಡಿಯೊಂದು ಮದುವೆಯಾಗಿದ್ದಾರೆ.
ಜಿಲ್ಲೆಯ ಆದರ್ಶ ನಗರದ ವರ ಇಮ್ರಾನ್ ಜೊತೆ ಕೊಪ್ಪಳ ಜಿಲ್ಲೆಯ ವಧು ತಾಜಮಾ ಬೇಗಂ ಮದುವೆ ಆನ್‍ಲೈನ್‍ನಲ್ಲಿ ವಿಡಿಯೋ ಕಾಲ್‍ನಲ್ಲಿ ನಡೆದಿದೆ. ಇವರಿಬ್ಬರ ಮದುವೆಯನ್ನು ಏಪ್ರಿಲ್‍ನಲ್ಲಿ ಮಾಡಬೇಕೆಂದು ನಿಶ್ಚಯ ಮಾಡಲಾಗಿತ್ತು. ಆದರೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆಗಿದೆ. ಹೀಗಾಗಿ ಕುಟುಂಬದವರು ಮದುವೆ ಮಾಡಬೇಕೋ ಅಥವಾ ಬೇಡವೋ ಎಂದು ಗೊಂದಲದಲ್ಲಿದ್ದರು.
Advertisement
Advertisement
ಜಿಲ್ಲಾಧಿಕಾರಿಗಳು ಮದುವೆಗೆ ಕೇವಲ ನಾಲ್ವರು ಮಾತ್ರ ಹೋಗಲು ಅವಕಾಶ ನೀಡಲಾಗಿತ್ತು. ಆದರೆ ಮದುವೆ ಮಾಡಿಕೊಂಡು ಕೊಪ್ಪಳದಿಂದ ವಾಪಸ್ ಬರಲು ಕೂಡ ಲಾಕ್‍ಡೌನ್‍ನಿಂದ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ವರ ಮತ್ತು ವಧು ಕುಟುಂಬದವರು ವಿಡಿಯೋ ಕಾಲ್‍ನಲ್ಲಿ ಮದುವೆ ಮಾಡುವುದಾಗಿ ನಿರ್ಧಾರ ಮಾಡಿದ್ದಾರೆ.
Advertisement
ಎರಡು ಕುಟುಂಬಗಳು ಮದುವೆ ಕಾರ್ಡ್ ಕೂಡ ಮಾಡಿಸಿದ್ದರು. ಆದರೆ ಲಾಕ್‍ಡೌನ್ ಇರುವುದರಿಂದ ಇಬ್ಬರ ಕುಟುಂಬದವರು ಒಂದು ನಿರ್ಧಾರ ಕೈಗೊಂಡು ವಿಡಿಯೋ ಕಾಲ್‍ನಲ್ಲಿ ಮದುವೆ ಮಾಡಿಸಿದ್ದಾರೆ. ಇನ್ನೂ ಲಾಕ್‍ಡೌನ್ ಮುಗಿದ ಮೇಲೆ ಆರತಕ್ಷತೆ ಮಾಡಲು ಕುಟುಂಬದವರು ನಿರ್ಧಾರ ಮಾಡಿದ್ದಾರೆ.
Advertisement
ಸದ್ಯ ಮದುವೆ ಆಗಿದ್ದರೂ ಮದುಮಗಳು ಕೊಪ್ಪಳದಲ್ಲಿ ಇರಲಿದ್ದು, ಕೊರೊನಾ ಲಾಕ್‍ಡೌನ್ ಮುಗಿದ ಮೇಲೆ ಪತಿಯ ಮನೆಗೆ ಬರಲಿದ್ದಾಳೆ. ಮದುವೆಯ ಎಲ್ಲ ಪದ್ಧತಿಗಳನ್ನ ಮುಗಿಸಲು ಒಂದು ಗಂಟೆಗಳ ಕಾಲ ಸಮಯ ತೆಗೆದುಕೊಳ್ಳಲಾಗಿದೆ.