ಬೆಂಗಳೂರು: ಇನ್ಮುಂದೆ ವಿವಾಹ ನೋಂದಣಿ ಪ್ರಮಾಣಪತ್ರಕ್ಕಾಗಿ ಸಬ್ ರಿಜಿಸ್ಟ್ರಾರ್ (Sub Register) ಕಚೇರಿಗೆ ಅಲೆದಾಡಬೇಕಾಗಿಲ್ಲ ಮನೆಯಲ್ಲಿಯೇ ಕೂತು ವಿವಾಹ ಪ್ರಮಾಣ (Marriage Certificate) ಪತ್ರಗಳನ್ನು ಪಡೆಯಬಹು.
ವಿವಹಾದ ಪ್ರಮಾಣ ಪತ್ರ ಪಡೆಯಬೇಕಾದ್ರೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಅಲೆದಾಡಬೇಕಾಗಿತ್ತು. ಒಂದಿಷ್ಟು ಪ್ರಕ್ರಿಯೆಗಳು ಕೂಡ ನಡೆಯಬೇಕು. ಆದರೆ ಇನ್ಮುಂದೆ ಫಟಾಫಟ್ ಅಂತಾ ಪತ್ರ ಸಿಗಲಿದೆ. ಇನ್ಮುಂದೆ `ಕಾವೇರಿ’ ತಂತ್ರಾಂಶದಲ್ಲಿ ಹಿಂದೂ ವಿವಾಹ ಪ್ರಮಾಣ ಪತ್ರವನ್ನು ಪಡೆಯಬಹುದು. ಇದನ್ನೂ ಓದಿ: Karnataka Budget: ರಾಜ್ಯದ ರಾಮ ಮಂದಿರಗಳ ಪುನರುಜ್ಜೀವಕ್ಕೆ ಬಜೆಟ್‌ನಲ್ಲಿ ಸಿಗುತ್ತಾ ಅನುದಾನ?
Advertisement
Advertisement
ಸರ್ಕಾರ ಪರಿಚಯಿಸಿರುವ ಕಾವೇರಿ ತಂತ್ರಾಂಶದ ಮೂಲಕ ವೆಬ್‌ಸೈಟ್‌ನಲ್ಲಿ ದಂಪತಿಗಳು ತಮ್ಮ ಮದುವೆ ಫೋಟೋ, ಆಧಾರ್ ಸಂಖ್ಯೆ, ಮದುವೆ ಆಮಂತ್ರಣ ಪತ್ರಿಕೆಯ ದಾಖಲಾತಿಯನ್ನು ಮನೆಯಲ್ಲಿ ಕೂತೇ ಆನ್‌ಲೈನ್‌ನಲ್ಲಿ ಸಲ್ಲಿಕೆ ಮಾಡಿ ವಿವಾಹ ಪ್ರಮಾಣ ಪತ್ರವನ್ನು ಪಡೆಯಬಹುದು. ಇದನ್ನೂ ಓದಿ: ಬೆಂಗ್ಳೂರು ಟ್ರಾಫಿಕ್ ದಟ್ಟಣೆಗೆ ಮುಕ್ತಿ ಸಿಗುತ್ತಾ? – ಸಿಎಂ ಬಜೆಟ್‌ನಲ್ಲಿ ಬೆಂಗಳೂರಿನ ನಿರೀಕ್ಷೆಗಳೇನು?
Advertisement
Advertisement
ಈ ಕುರಿತು ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಮಾತನಾಡಿ, ಇವರೆಗೆ 100 ಮದುವೆ ನಡೆದರೆ ಅದ್ರಲ್ಲಿ 30 ದಂಪತಿಗಳು ಮಾತ್ರ ವಿವಾಹ ಪ್ರಮಾಣ ಪತ್ರ ಪಡೆಯುತ್ತಿದ್ದರು. ಹೀಗಾಗಿ ವ್ಯಾಜ್ಯ ಅಥವಾ ಕಾನೂನಾತ್ಮಕ ಸಮಸ್ಯೆ ಬರುತ್ತಿತ್ತು. ಜನರಿಗೆ ಸರಳೀಕರಣದ ಸೇವೆ ನೀಡುವ ಸಲುವಾಗಿ ಈ ಯೋಜನೆ ಜಾರಿಯಾಗಿದೆ. ವಿವಾಹ ಪ್ರಮಾಣ ಪತ್ರದ ಜೊತೆಗೆ ಸದ್ಯ ಸಬ್‌ರಿಜಿಸ್ಟ್ರಾರ್ ಕಚೇರಿಯ ಅನೇಕ ಸೇವೆಗಳನ್ನು ಆನ್‌ಲೈನ್ ಮೂಲಕ ಜನರಿಗೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಇಂದು ಸಿದ್ದರಾಮಯ್ಯರಿಂದ ದಾಖಲೆಯ 15ನೇ ಬಜೆಟ್ ಮಂಡನೆ – ಗ್ಯಾರಂಟಿ ಮಧ್ಯೆ ಬೆಟ್ಟದಷ್ಟು ನಿರೀಕ್ಷೆ