ಮಂಗಳೂರು: ನೋವಿನ ನಡುವೆಯೂ ಜೋಡುಪಾಲದ ಸಂತ್ರಸ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಸುಳ್ಯದ ಕಲ್ಲುಗುಂಡಿ ಪರಿಹಾರ ಕೇಂದ್ರದಲ್ಲಿ ಮದರಂಗಿ ಶಾಸ್ತ್ರ ನಡೆದಿದ್ದು, ಜಾತಿ, ಧರ್ಮ ಬೇಧವಿಲ್ಲದೆ ಜೊತೆಗೂಡಿ ಎಲ್ಲರೂ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.
2ನೇ ಮೊಣ್ಣಂಗೇರಿ ನಿವಾಸಿ ವಾರಿಜಾ(26) ಹಾಗೂ ಪುಣೆಯ ರುದ್ರೇಶ್‍ಗೆ (32) ಮದುವೆ ಸಂಭ್ರಮವಿದ್ದು, ಇಂದು ಮಡಿಕೇರಿಯ ಗಣಪತಿ ದೇವಸ್ಥಾನದಲ್ಲಿ ಈ ಜೋಡಿ ಹಸೆಮಣೆಗೇರಲಿದೆ. ದಿ. ಕೃಷ್ಣಪ್ಪ ನಾಯ್ಕರ ಕುಟುಂಬ ದುರಂತದಲ್ಲಿ ಮನೆ ಹಾಗೂ ಆಸ್ತಿ ಕಳೆದುಕೊಂಡಿದ್ದರು.
Advertisement
Advertisement
ಮೊಣ್ಣಂಗೇರಿಯಲ್ಲಿ ತಾಯಿ ರೋಹಿಣಿ ಜೊತೆ ವಾರಿಜಾ ಬದುಕುತ್ತಿದ್ದರು. ಸದ್ಯ ಸಂಪಾಜೆ ನಿವಾಸಿಗಳು ಸೇರಿ ಹಣ ಒಟ್ಟುಗೂಡಿಸಿ ಶುಭಕಾರ್ಯಕ್ಕೆ ಹೆಗಲು ಕೊಟ್ಟಿದ್ದಾರೆ. ನವ ವಧುವಿಗೆ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಸಂತ್ರಸ್ತರು ಸೇರಿ ಶುಭಕೋರಿದ್ದಾರೆ.
Advertisement
ಕಲ್ಲುಗುಂಡಿ ಸರಕಾರಿ ಶಾಲೆಯಲ್ಲಿರುವ ಪರಿಹಾರ ಕೇಂದ್ರದಲ್ಲಿ ಮದರಂಗಿ ಶಾಸ್ತ್ರ ನಡೆದಿದೆ. ಸದ್ಯ ವಾರಿಜಾ ಅವರ ಮದುವೆ ಸಂಭ್ರಮ ಆಸ್ತಿ- ಪಾಸ್ತಿ ಕಳೆದುಕೊಂಡ ಸಂತ್ರಸ್ತರ ನೋವನ್ನು ಮರೆಸುತ್ತಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv