Connect with us

Bengaluru City

ತಾಳಿ ಕಟ್ಟುವ ವೇಳೆ ಪ್ರಿಯಕರ ದಿಢೀರ್ ಎಂಟ್ರಿ – ಪ್ರೇಮಿಯ ಕಣ್ಣೀರಿಗೆ ಕರಗಿದ ವಧು

Published

on

ಬೆಂಗಳೂರು: ತಾಳಿ ಕಟ್ಟುವ ವೇಳೆ ಮದುವೆ ಮನೆಗೆ ವಧುವಿನ ಪ್ರಿಯಕರ ದಿಢೀರ್ ಭೇಟಿ ಕೊಟ್ಟಿದ್ದು, ಕೆಲಕಾಲ ಕಲ್ಯಾಣ ಮಂಟಪದಲ್ಲಿ ಹೈಡ್ರಾಮ ನಡೆದ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ನಡೆದಿದೆ.

ನೆಲಮಂಗಲ ಪಟ್ಟಣದ ವಿಶ್ವಶಾಂತಿ ಸಮುದಾಯ ಭವನದಲ್ಲಿ ಈ ಘಟನೆ ನಡೆದಿದೆ. ಮದುವೆ ಮನೆಗೆ ಪ್ರಿಯಕರ ನುಗ್ಗಿದ ಪರಿಣಾಮ ವಿವಾಹ ಮುರಿದು ಬಿದ್ದಿದೆ. ಇಂದು ವರ ಅಶೋಕ್ ಮತ್ತು ವಧು ಶ್ವೇತಾ (ಹೆಸರು ಬದಲಾಯಿಸಲಾಗಿದೆ) ಮದುವೆ ನಡೆಯುತ್ತಿತ್ತು. ಆದರೆ ಪ್ರಿಯಕರನ ಕಣ್ಣೀರಿಗೆ ವಧು ಕರಗಿ ಮದುವೆಯನ್ನು ನಿರಾಕರಿಸಿದ್ದಾಳೆ.

ಮದುವೆ ಶಾಸ್ತ್ರಗಳು ಮುಗಿದು ಕೊನೆಗೆ ತಾಳಿ ಕಟ್ಟುವ ಶಾಸ್ತ್ರಕ್ಕೆ ಪ್ರಿಯತಮೆಯ ಮದುವೆಯನ್ನು ತಡೆಯಲು ಕಲ್ಯಾಣ ಮಂಟಪಕ್ಕೆ ದಿಢೀರ್ ಎಂದು ವಧುವಿನ ಪ್ರಿಯಕರ ಸಂಜುಎಂಟ್ರಿಯಾಗಿದ್ದಾನೆ. ಇತ್ತ ಪ್ರಿಯಕರನನ್ನು ನೋಡುತ್ತಿದ್ದಂತೆ ವಧು ಅರ್ಧಕ್ಕೆ ಮದುವೆ ನಿಲ್ಲಿಸಿದ್ದಾಳೆ. ಇದರಿಂದ ರೊಚ್ಚಿಗೆದ್ದ ವಧುವಿನ ಸಂಬಂಧಿಕರು ಪ್ರಿಯಕರನಿಗೆ ಚೆನ್ನಾಗಿ ಥಳಿಸಿದ್ದಾರೆ.

ಮದುವೆ ಮನೆಯಲ್ಲಿ ಗಲಾಟೆ ರಂಪಾಟ ಶುರುವಾಗಿದೆ. ಬಳಿಕ ಈ ಬಗ್ಗೆ ಸ್ಥಳದಲ್ಲಿದ್ದವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ನೆಲಮಂಗಲ ಪೊಲೀಸರ ಭೇಟಿ ನೀಡಿ ಪ್ರಿಯಕರನನ್ನು ವಶಕ್ಕೆ ಪಡೆದಿದ್ದಾರೆ.

ನವ ಜೋಡಿಗಳು ರಾತ್ರಿ ನಡೆದ ಶಾಸ್ತ್ರದಲ್ಲಿ ನಗುನಗುತ್ತ ಇದ್ದರು. ಆದರೆ ಪ್ರಿಯಕರನನ್ನು ನೋಡುತ್ತಿದ್ದಂತೆ ಮದುವೆ ಬೇಡ ಎಂದು ವಧು ನಿರಾಕರಿಸಿದ್ದಾಳೆ. ನಂತರ ಮನೆಯವರು ಮದುವೆಗೆ ಒಪ್ಪಿಸಲು ಪ್ರಯತ್ನ ಮಾಡಿದ್ದಾರೆ. ಆದರೆ ವಧು ಶ್ವೇತಾ ಮದುವೆಯಾಗುವುದಿಲ್ಲ ಎಂದು ನಿರಾಕರಣೆ ಮಾಡಿದ್ದಾಳೆ. ವಧು ಮತ್ತು ಪ್ರಿಯಕರ ಸಂಜು ಸುಮಾರು ನಾಲ್ಕು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Click to comment

Leave a Reply

Your email address will not be published. Required fields are marked *

www.publictv.in