ತಾಳಿ ದೂಡಿ ಮದುವೆ ಬೇಡವೆಂದ ಪ್ರಕರಣ- ನಾನಿನ್ನೂ ಓದಬೇಕೆಂದ ವಧು!

Public TV
1 Min Read
CHITRADURGA MARRIAGE CANCEL NEW

ಚಿತ್ರದುರ್ಗ: ತಾಳಿ ಕಟ್ಟುವ ವೇಳೆ ಮುರಿದು ಬಿದ್ದ ಮದುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಧು (Bride) ಕಾರಣ ನೀಡಿದ್ದಾಳೆ. ನಾನಿನ್ನೂ ಓದಬೇಕು. ಹೀಗಾಗಿ ಮದುವೆಗೆ ನನ್ನ ಒಪ್ಪಿಗೆ ಇಲ್ಲ ಎಂದು ತಿಳಿಸಿದ್ದಾಳೆ.

CHITRADURGA MARRIAGE CANCEL copy

ನಡೆದಿದ್ದೇನು..?: ಚಿತ್ರದುರ್ಗ (Chitradurga) ಜಿಲ್ಲೆಯ ಹೊಸದುರ್ಗ ತಾಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮದ ಮಂಜುನಾಥ್ ಹಾಗೂ ಚಳ್ಳಕೆರೆ ತಾಲೂಕಿನ ತಿಪ್ಪರೆಡ್ಡಿಹಳ್ಳಿಯ ಐಶ್ವರ್ಯಾ ಜೊತೆ ವಿವಾಹ ಫಿಕ್ಸ್ ಆಗಿತ್ತು. ಆದರೆ ಗುರುವಾರ ಬೆಳಗ್ಗೆ ಗ್ರಾಮದ ಭೈರವೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆಯ ಮುಹೂರ್ತ ನಡೆಯುವ ವೇಳೆ ವರನಿಗೆ ವಧು ಶಾಕ್ ನೀಡಿದ್ದಾಳೆ.

ವರ ತಾಳಿಕಟ್ಟುವ ವೇಳೆ ಮಂಜುನಾಥ್ ನನಗೆ ಇಷ್ಟ ಇಲ್ಲವೆಂದು ಹೇಳಿದ್ದಾಳೆ. ಯುವತಿ ನಡೆಗೆ ಯುವಕನ ಸಂಬಂಧಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಆಗ ಯುವತಿ ಮನೆಯವರು ಹಾಗೂ ಯುವಕನ ಕುಟುಂಬಸ್ಥರ ನಡುವೆ ವಾಗ್ವಾದ ನಡೆದಿತ್ತು.  ಇದನ್ನೂ ಓದಿ: ತಾಳಿ ಕಟ್ಟುವಾಗ್ಲೇ ಕೈ ಅಡ್ಡ ಹಿಡಿದ ವಧು- ಮುರಿದು ಬಿದ್ದ ಮದ್ವೆಯ ವೀಡಿಯೋ ವೈರಲ್

ಡಿ.6ರಂದು ನಡೆದಿದ್ದ ಆರತಕ್ಷತೆ ನಡೆದಿತ್ತು. ಆವಾಗ ವಧು ಚೆನ್ನಾಗಿಯೇ ಇದ್ದಳು. ಆದರೆ ಡಿ.7 ರಂದು ನಡೆಯಬೇಕಿದ್ದ ಮುಹೂರ್ತದ ಸಂದರ್ಭದಲ್ಲಿ ವಧು ಉಲ್ಟಾ ಹೊಡೆದಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ವರನ ಸಹೋದರ ಹಾಗೂ ಸಂಬಂಧಿಗಳು ವಧುವಿನ ಕುಟುಂಬಸ್ಥರ ವಿರುದ್ಧ ಕಿಡಿಕಾರಿದ್ದರು.

Share This Article