ಹಸೆಮಣೆ ಮೇಲೆ ಕೂರುವಾಗ ಮದ್ವೆ ಬೇಡ ಎಂದ ವಧು – ಪೋಷಕರು ಶಾಕ್

Public TV
1 Min Read
bride 1

– ಮಾವನನ್ನು ಬಿಟ್ಟು ಯಾರನ್ನೂ ಮದ್ವೆಯಾಗೋದಿಲ್ಲ
– ಕಲ್ಯಾಣ ಮಂಪಟದಲ್ಲಿ ವಧು ಹಠ

ಹೈದರಾಬಾದ್: ತಾಳಿ ಕಟ್ಟುವ ಸಮಯದಲ್ಲಿ ವಧು ತನಗೆ ಮದುವೆ ಬೇಡ ಎಂದು ನಿರಾಕರಿಸಿರುವ ಘಟನೆ ತೆಲಂಗಾಣದ ವನಪರ್ಥಿ ಜಿಲ್ಲೆಯಲ್ಲಿ ನಡೆದಿದೆ.

ಕೊತ್ತಕೋಟ ಮಂಡಲದ ಚಾರ್ಲಪಲ್ಲಿ ಗ್ರಾಮದ ವರ ವೆಂಕಟೇಶ್‍ಗೆ ಪಮಾಪುರಂ ಗ್ರಾಮದ ವಧು ನಂದಿನಿ ಜೊತೆ ಮದುವೆ ನಿಶ್ಚಯವಾಗಿತ್ತು. ಶುಕ್ರವಾರ ಬೆಳಿಗ್ಗೆ ಮದುವೆಯ ಮುಹೂರ್ತ ನಿಶ್ಚಯವಾಗಿತ್ತು. ಕುಟುಂದವರು ಮದುವೆಗೆ ಎಲ್ಲಾ ತಯಾರಿ ಮಾಡಿಕೊಂಡಿದ್ದರು.

161716 f52db183 148645813182 640 376

ವಿವಾಹದ ಶಾಸ್ತ್ರಗಳು ಶುರುವಾಗಿದ್ದು, ವಧು-ವರರು ಕಲ್ಯಾಣ ಮಂಟಪದಲ್ಲಿ ಹಸೆಮಣೆ ಮೇಲೆ ಕುಳಿತುಕೊಳ್ಳುವ ಸಂದರ್ಭದಲ್ಲಿ ವಧು ನಂದಿನಿ ತಕ್ಷಣ ಮದುವೆ ಬೇಡ ಎಂದು ಹೇಳಿದ್ದಾಳೆ. ಇದರಿಂದ ಕುಟುಂಬದವರು ಶಾಕ್ ಆಗಿದ್ದಾರೆ. ವಧು ನಂದಿನಿ ತನ್ನ ಮಾವನನ್ನು ಪ್ರೀತಿಸುತ್ತಿದ್ದು, ಆತನನ್ನೇ ಮದುವೆಯಾಗಲು ಬಯಸಿದ್ದರಿಂದ ಮದುವೆಯಾಗಲು ನಿರಾಕರಿಸಿದ್ದಳು. ಈ ವಿಚಾರ ತಿಳಿದು ಎರಡು ಕುಟುಂಬಗಳ ನಡುವೆ ಜಗಳ ನಡೆದಿದೆ.

bride 768x508 1

ಮಾಹಿತಿ ತಿಳಿದ ಪೊಲೀಸರು ಮದುವೆ ಮಂಟಪಕ್ಕೆ ಬಂದು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ವಧು ತನ್ನ ಮಾವನನ್ನು ಬಿಟ್ಟು ಯಾರನ್ನೂ ಮದುವೆಯಾಗುವುದಿಲ್ಲ ಎಂದು ಹಠ ಮಾಡಿದ್ದಾಳೆ. ನಂತರ ವಧುವಿನ ಕುಟುಂಬದವರು ಮದುವೆ ನಿಲ್ಲಿಸಿ ಮಂಟಪದಿಂದ ಹೋಗಿದ್ದಾರೆ.

ವಧು ನಂದಿನಿಯ ಪೋಷಕರ ಜೊತೆ ಮಾತನಾಡಿದ ಪೊಲೀಸರು, ಹುಡುಗಿಗೆ ಇಷ್ಟವಿಲ್ಲದ ಮದುವೆಯನ್ನು ಮಾಡಬೇಡಿ ಎಂದು ಸಲಹೆ ನೀಡಿ ಕಳುಹಿಸಿದ್ದಾರೆ.

Police Jeep 1 1

Share This Article
Leave a Comment

Leave a Reply

Your email address will not be published. Required fields are marked *