– ಸಾಮಾನ್ಯ ಉಡುಪಿನಲ್ಲೇ ಮದುವೆ
ಲಕ್ನೋ: ಈಗಾಗಲೇ ಕೊರೊನಾ ಲಾಕ್‍ಡೌನ್‍ನಿಂದ ಅನೇಕರು ಬೈಕಿನಲ್ಲಿ ವಧುವಿನ ಮನೆಗೆ ತೆರಳಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಇಲ್ಲೊಬ್ಬ ಯುವಕ ಸೈಕಲ್ ಮೇಲೆ ಸವಾರಿ ಮಾಡಿಕೊಂಡು ಹೋಗಿ ಮದುವೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಹಮೀರ್ ಪುರ ಜಿಲ್ಲೆಯ ಪೌಥಿಯಾ ಗ್ರಾಮದ ಕಲ್ಕು ಪ್ರಜಾಪತಿ (23) ಸೈಕಲ್ ಮೂಲಕ ವಧು ರಿಂಕಿ ಮನೆಗೆ ಹೋಗಿ ಮದುವೆಯಾಗಿದ್ದಾನೆ. ವರ ತಾನು ಮದುವೆಯಾಗುವ ವಧುವಿನ ಮನೆಗೆ ತಲುಪಲು ಸುಮಾರು 100 ಕಿ.ಮೀ ದೂರದವರೆಗೂ ಸೈಕಲ್ ತುಳಿದಿದ್ದಾನೆ. ತಮ್ಮ ಮದುವೆಯ ದಿನಾಂಕವನ್ನು ಮುಂದೂಡಲಾಗದೆ ಒಂಟಿಯಾಗಿ ಹೋಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾನೆ. ಇದನ್ನೂ ಓದಿ: ದಿನಸಿ ತರಲು ಕಳುಹಿಸಿದ್ರೆ ಪತ್ನಿ ಜೊತೆ ಬಂದ ಮಗ – ತಾಯಿ ಶಾಕ್
Advertisement
Advertisement
ಕಲ್ಕು ಪ್ರಜಾಪತಿ ಏಪ್ರಿಲ್ 25 ರಂದು ತಮ್ಮ ಮದುವೆಗೆ ಜಿಲ್ಲಾಡಳಿತದ ಅನುಮತಿಗಾಗಿ ಕಾಯುತ್ತಿದ್ದನು. ಆದರೆ ಜಿಲ್ಲಾಡಳಿತ ಅನುಮತಿ ನೀಡದ ಹಿನ್ನೆಲೆಯಲ್ಲಿ ಕೊನೆಗೆ ಲಕ್ನೋದಿಂದ 100 ಕಿ.ಮೀ ದೂರದಲ್ಲಿರುವ ಮಹೋಬಾ ಜಿಲ್ಲೆಯ ಪುನಿಯಾ ಗ್ರಾಮದಲ್ಲಿರುವ ವಧು ರಿಂಕಿಯ ಮನೆಗೆ ತನ್ನ ಬೈಸಿಕಲ್‍ನಲ್ಲಿ ಏಕಾಂಗಿಯಾಗಿ ಹೋಗಲು ನಿರ್ಧರಿಸಿದ್ದನು. ಅದರಂತೆಯೇ ಸೈಕಲ್ ಮೂಲಕ ಹೋಗಿ ಹಳ್ಳಿಯ ದೇವಸ್ಥಾನವೊಂದರಲ್ಲಿ ಪ್ರಜಾಪತಿ ಮತ್ತು ರಿಂಕಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
Advertisement
Advertisement
ವಧು-ವರ ಇಬ್ಬರು ಮದುವೆ ಉಡುಪನ್ನು ಧರಿಸಿದೆ ಸಾಮಾನ್ಯ ಉಡುಪಿನಲ್ಲಿ ಮದುವೆಯಾಗಿದ್ದಾರೆ. ನಮ್ಮ ಮದುವೆಗೆ ಸ್ಥಳೀಯ ಪೊಲೀಸರಿಂದ ಅನುಮತಿ ಸಿಗಲಿಲ್ಲ. ಹೀಗಾಗಿ ನಾನು ಸೈಕಲ್ ಮೂಲಕ ಹೋಗುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ನನ್ನ ಬಳಿ ಬೈಕ್ ಇದೆ. ಆದರೆ ಡ್ರೈವಿಂಗ್ ಲೈಸೆನ್ಸ್ ಇರಲಿಲ್ಲ. ಕೊನೆಗೆ ಸೈಕಲ್ ಮೂಲಕ ಹೋದೆ. ಆದರೆ ಸೋಂಕಿನಿಂದ ನನ್ನನ್ನು ರಕ್ಷಿಸಿಕೊಳ್ಳಲು ನನ್ನ ಬಾಯಿಗೆ ಕರವಸ್ತ್ರ ಕಟ್ಟಿಕೊಂಡಿದ್ದೆ. ಅಲ್ಲದೇ ಜೀನ್ಸ್ ಮತ್ತು ಟೀ ಶರ್ಟ್ ಧರಿಸಿಕೊಂಡು ಹೋಗಿದ್ದೆ ಎಂದು ರೈತ ಪ್ರಜಾಪತಿ ಹೇಳಿದರು.
ಮದುವೆಗೆ ನಾವು ಕಾರ್ಡ್ ಕೂಡ ರೆಡಿ ಮಾಡಿಸಿದ್ದು, ಸಂಬಂಧಿಕರಿಗೆ ನೀಡಿದ್ದೆವು. ಆದರೆ ಲಾಕ್‍ಡೌನ್‍ನಿಂದ ಅದ್ಧೂರಿ ಮದುವೆಯಾಗಲು ಸಾಧ್ಯವಾಗಿಲ್ಲ. ಆದರೆ ವಾಪಸ್ ಬರುವಾಗ ಪತ್ನಿಯ ಜೊತೆ ಬಂದಿದ್ದೇನೆ. ಎರಡೂ ಕುಟುಂಬದವರು ನಮ್ಮ ಮದುವೆಯನ್ನು ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ನಮ್ಮ ಮನೆಯಲ್ಲಿ ತಾಯಿ ಅನಾರೋಗ್ಯದಿಂದ ಬಳುತ್ತಿದ್ದಾರೆ. ಹೀಗಾಗಿ ಅಡುಗೆ ಮಾಡಲು ಯಾರೂ ಇಲ್ಲದಿರುವುದರಿಂದ ಅನಿವಾರ್ಯವಾಗಿ ಮದುವೆಯಾಗಬೇಕಿತ್ತು. ಇದಲ್ಲದೆ ಲಾಕ್‍ಡೌನ್ ಮುಗಿಯಲು ಎಷ್ಟು ದಿನವಾಗುತ್ತದೋ ಗೊತ್ತಿಲ್ಲ. ಹೀಗಾಗಿ ಏಕಾಂಕಿಯಾಗಿ ಸೈಕಲ್ ನಲ್ಲಿ ಹೋಗಿ ವಿವಾಹವಾದೆ ಎಂದು ವರ ಹೇಳಿದನು.