ರಾಯಚೂರು: ಜಿಲ್ಲೆಯ ಸಿಂಧನೂರಿನಲ್ಲಿ ಎಪಿಎಂಸಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರಾಜ್ಯ ಹೆದ್ದಾರಿ ಬಂದ್ ಆಗಿದ್ದು, ಟ್ರಾಫಿಕ್ ಜಾಮ್‍ನಲ್ಲಿ ಅಂಬುಲೆನ್ಸ್ ಸಿಲುಕಿ ರೋಗಿ ಪರದಾಡಿದ ಘಟನೆ ಸಿಂಧನೂರಿನ ಕುಷ್ಟಗಿ ಮುಖ್ಯ ಹೆದ್ದಾರಿಯಲ್ಲಿ ನಡೆದಿದೆ.
Advertisement
ನಗರದ ಹೊರವಲಯದಲ್ಲಿ ಪ್ರತೀ ಸೋಮವಾರ ಕುರಿ ಸಂತೆ ನಡೆಯುತ್ತದೆ. ಸಂತೆಗೆ ಬಂದವರು ವಾಹನಗಳನ್ನೆಲ್ಲಾ ಯದ್ವಾತದ್ವಾ ರಸ್ತೆ ಮೇಲೆ ನಿಲ್ಲಿಸಿದ್ದರ ಪರಿಣಾಮ ಸುಮಾರು ಒಂದು ಕಿಮೀವರೆಗೆ ಟ್ರಾಫಿಕ್ ಜಾಮ್ ಆಗಿತ್ತು. ಈ ವೇಳೆ ಅದೇ ದಾರಿಯಲ್ಲಿ ರೋಗಿಯನ್ನು ಆಸ್ಪತ್ರೆಗೆ ಕರೆತರುತ್ತಿದ್ದ ಅಂಬುಲೆನ್ಸ್ ಗೂ ದಾರಿ ಸಿಗದೇ ಪರದಾಡಬೇಕಾಯಿತು.
Advertisement
Advertisement
ಕೆಲ ಹೊತ್ತು ಅಂಬುಲೆನ್ಸ್ ಟ್ರಾಫಿಕ್‍ನಲ್ಲೇ ಸಿಕ್ಕಾಕಿಕೊಂಡಿತ್ತು, ಹೀಗಾಗಿ ಅಂಬ್ಯುಲೆನ್ಸ್ ನಲ್ಲಿದ್ದ ರೋಗಿ ನರಳಾಡುವಂತಾಯಿತು. ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸಿದ್ದರೂ ಕೇಳುವವರು ಇರಲಿಲ್ಲ. ಇದನ್ನೂ ಓದಿ: ಜೇಬಿನಲ್ಲೇ ಸದಾ ಕಾಂಡೋಮ್ ಇಟ್ಕೊಂಡು ತಿರುಗಾಡುತ್ತಿದ್ದ ಕಾಮುಕ
Advertisement
ಸ್ಥಳದಲ್ಲಿ ಇಷ್ಟೆಲ್ಲಾ ಅವಾಂತರವಾದ್ರೂ ಸಂಚಾರಿ ಠಾಣೆ ಪೊಲೀಸರು ಸ್ಥಳದಲ್ಲಿರಲಿಲ್ಲ. ಪ್ರತೀ ವಾರ ಸಂತೆ ನಡೆಯುವುದರಿಂದ ಪೊಲೀಸರು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕೆಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಾಕಿಂಗ್ ಹೋಗಿದ್ದ ಪಾದಚಾರಿ ಮೇಲೆ ಹರಿದ ಲಾರಿ – ಸ್ಥಳದಲ್ಲಿಯೇ ಮಹಿಳೆ ಸಾವು