ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ಗಳಲ್ಲಿ ಹಣ ಸಂಪಾದಿಸಿ ಎಂದ ಜುಕರ್‌ಬರ್ಗ್

Public TV
1 Min Read
Mark Zuckerberg

ವಾಷಿಂಗ್ಟನ್: ಮಾರ್ಕ್ ಜುಕರ್‌ಬರ್ಗ್ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಬಳಕೆದಾರರಿಗೆ ಕೆಲವು ಒಳ್ಳೆಯ ಸುದ್ದಿಗಳನ್ನು ನೀಡಿದ್ದಾರೆ. ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ಗಳಲ್ಲಿ 2024ರ ವರೆಗೆ ಆದಾಯ ಹಂಚಿಕೆಯ ಯೋಜನೆಯನ್ನು ತಡೆ ಹಿಡಿಯುತ್ತದೆ ಎಂದು ಫೇಸ್‌ಬುಕ್ ಸಿಇಒ ತಮ್ಮ ಅಧಿಕೃತ ಖಾತೆಯ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ನಾವು 2024ರ ವರೆಗೆ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಆದಾಯ ಹಂಚಿಕೆಯನ್ನು ತಡೆಹಿಡಿಯುತ್ತೇವೆ. ಅವುಗಳಲ್ಲಿ ಪಾವತಿಸಲಾಗುವ ಆನ್‌ಲೈನ್ ಈವೆಂಟ್‌ಗಳು, ಸಬ್ಸ್‌ಕ್ರಿಪ್ಷನ್‌ಗಳು, ಬ್ಯಾಡ್ಜ್‌ಗಳು ಹಾಗೂ ಬುಲೆಟಿನ್‌ಗಳು ಸೇರಿರುತ್ತವೆ ಎಂದು ತಿಳಿಸಿದ್ದಾರೆ.

instagram

ಇದರೊಂದಿಗೆ ಜುಕರ್‌ಬರ್ಗ್ ಈ ಎರಡು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಣ ಸಂಪಾದಿಸುವ ಹೊಸ ಮಾರ್ಗಗಳ ಬಗ್ಗೆಯೂ ತಿಳಿಸಿದ್ದಾರೆ. ಇದಕ್ಕಾಗಿ ಪ್ಲಾಟ್‌ಫಾರ್ಮ್‌ಗಳಲ್ಲಿ ಕೆಲವು ಹೊಸ ಫೀಚರ್‌ಗಳನ್ನು ತರಲಿದ್ದಾರೆ ಎಂದು ತಿಳಿಸಿದ್ದಾರೆ.

ಹೊಸ ಫೀಚರ್‌ಗಳು:
ಇಂಟರ್‌ಆಪರೇಬಲ್ ಸಬ್ಸ್‌ಕ್ರಿಪ್ಷನ್‌ಗಳು: ಇತರ ಪ್ಲಾಟ್‌ಫಾರ್ಮ್ ಬಳಕೆದಾರರು ಫೇಸ್‌ಬುಕ್ ಕ್ರಿಯೇಟರ್(ರಚನಾಕಾರರು)ಗಳಿಗೆ ಪಾವತಿಸುವ ವೇಳೆ ಫೇಸ್‌ಬುಕ್ ಗುಂಪುಗಳನ್ನು ಪ್ರವೇಶಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ಬಳಕೆದಾರರಿಗೆ ಜುಲೈ 1 ರಿಂದ ಸಿಗಲಿದೆ ಗುಡ್‌ನ್ಯೂಸ್‌

facebook 1

ಫೇಸ್‌ಬುಕ್ ಸ್ಟಾರ್ಸ್: ಕಂಪನಿಯು ಎಲ್ಲಾ ಅರ್ಹ ರಚನೆಕಾರರಿಗೆ ಸ್ಟಾರ್ಸ್ ಎಂಬ ಫೀಚರ್ ಅನ್ನು ತರುತ್ತಿದೆ ಎಂದು ಜುಕರ್‌ಬರ್ಗ್ ಹೇಳಿದ್ದಾರೆ. ಈ ಫೀಚರ್ ಮೂಲಕ ಹೆಚ್ಚಿನ ಜನರು ತಮ್ಮ ರೀಲ್ಸ್‌, ಲೈವ್ ಅಥವಾ ವಿಒಡಿ ವೀಡಿಯೊಗಳಿಂದ ಗಳಿಸಲು ಪ್ರಾರಂಭಿಸಬಹುದು.

ಹಣಗಳಿಸುವ ರೀಲ್ಸ್: ಕಂಪನಿ ಫೇಸ್‌ಬುಕ್‌ನಲ್ಲಿ ಹೆಚ್ಚಿನ ರಚನೆಕಾರರಿಗೆ ರೀಲ್ಸ್ ಪ್ಲೇ ಬೋನಸ್ ಪ್ರೋಗ್ರಾಂ ಅನ್ನು ತೆರೆಯುತ್ತಿದೆ. ಇದು ರಚನೆಕಾರರು ತಮ್ಮ ಇನ್‌ಸ್ಟಾಗ್ರಾಮ್ ರೀಲ್ಸ್‌ಗಳನ್ನು ಫೇಸ್‌ಬುಕ್‌ಗೆ ಕ್ರಾಸ್-ಪೋಸ್ಟ್ ಮಾಡಲು ಹಾಗೂ ಅಲ್ಲಿಯೂ ಹಣಗಳಿಸಲು ಅನುವು ಮಾಡಿಕೊಡುತ್ತದೆ. ಇದನ್ನೂ ಓದಿ: ಬಂದೇ ಬಿಡ್ತು ಎಡಿಟ್ ಬಟನ್ – ಟ್ವಿಟ್ಟರ್ ರೋಲ್‌ಔಟ್ ಪ್ರಾರಂಭ

mark zuckerberg 1

ಕ್ರಿಯೇಟರ್ ಮಾರ್ಕೆಟ್‌ಪ್ಲೇಸ್: ಕಂಪನಿಯು ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಹೊಸ ಯೋಜನೆಯನ್ನು ಪರೀಕ್ಷಿಸಲು ಪ್ರಾರಂಭಿಸಿದೆ. ಅಲ್ಲಿ ರಚನೆಕಾರರು ತಮಗೆ ಬೇಕಾದ ವಿಷಯಗಳನ್ನು ಹುಡುಕಬಹುದು, ಪಾವತಿಸಬಹುದು ಹಾಗೂ ಬ್ರ‍್ಯಾಂಡ್‌ಗಳಿಗೆ ಹೊಸ ಪಾಲುದಾರಿಕೆ ಅವಕಾಶಗಳನ್ನು ಹಂಚಿಕೊಳ್ಳಬಹುದು ಎಂದು ಜುಕರ್‌ಬರ್ಗ್ ತಿಳಿಸಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *