ಒಟ್ಟಾವಾ: ಕೆನಡಾದ 24ನೇ ಪ್ರಧಾನ ಮಂತ್ರಿಯಾಗಿ ಮಾರ್ಕ್ ಕಾರ್ನಿ (Mark Carney) ಅವರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಟ್ರಂಪ್ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ಆಕಾರದಲ್ಲಾಗಲಿ, ರೂಪದಲ್ಲಾಗಲಿ ಕೆನಡಾ (Canada), ಅಮೆರಿಕದ ಭಾಗವಾಗುವುದಿಲ್ಲ ಎಂದರಲ್ಲದೇ ಡೊನಾಲ್ಡ್ ಟ್ರಂಪ್ (Donald Trump) ಅವರ ಸುಂಕ ವಿಧಿಸುವ ಕ್ರಮವನ್ನು ಎದುರಿಸುವುದೇ ನಮ್ಮ ಪ್ರಮುಖ ಆದ್ಯತೆ ಎಂದು ಗುಡುಗಿದ್ದಾರೆ.
ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಮಾರ್ಕ್ ಕಾರ್ನಿ, ಕೆನಡಾ ಆಕಾರ – ಗಾತ್ರದಲ್ಲಿ, ಯಾವುದೇ ರೀತಿಯಲ್ಲಾಗಲಿ ಅಮೆರಿಕದ ಭಾಗವಾಗುವುದಿಲ್ಲ. ಆದ್ರೆ ನಮ್ಮ ಸರ್ಕಾರ ಎರಡೂ ದೇಶದ ಹಿತಾಸಕ್ತಿಯನ್ನು ಹೆಚ್ಚಿಸಲು ವಾಷಿಂಗ್ಟನ್‌ನೊಂದಿಗೆ ಒಟ್ಟಾಗಿ ಕೆಲಸ ಮಾಡಬಹುದು ಭರವಸೆ ನೀಡಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಇನ್ನು ಮುಂದೆ ಕಸಕ್ಕೂ ಸರ್ವಿಸ್ ಚಾರ್ಜ್ – ಏ.1 ರಿಂದ ಜಾರಿ
ಇದೇ ವೇಳೆ ಟ್ರಂಪ್ ಅವರನ್ನು ಭೇಟಿಯಾಗುವ ವಿಚಾರ ಕುರಿತು ಪ್ರತಿಕ್ರಿಯಿಸಿ, ಕೆನಡಾ ಅನುಭವಿ ಕ್ಯಾಬಿನೆಟ್ ಹೊಂದಿದ್ದು, ಅತ್ಯಂತ ವೇಗವಾಗಿ ಕೆಲಸ ಮಾಡುತ್ತದೆ. ಅಲ್ಲದೇ ಭವಿಷ್ಯವನ್ನು ರಕ್ಷಿಸುತ್ತಾ, ನಮ್ಮ ಆರ್ಥಿಕತೆಯನ್ನು ಸುರಕ್ಷಿತಗೊಳಿಸುತ್ತದೆ. ಕೆನಡಾದ ಸಾರ್ವಭೌಮತ್ವಕ್ಕೆ ಗೌರವ ಕೊಡುವುದಾದರೇ ಟ್ರಂಪ್ ಅವರನ್ನು ಭೇಟಿಯಾಗಲು ಒಪ್ಪುತ್ತೇನೆ ಎಂದು ಖಡಕ್ಕಾಗಿ ಹೇಳಿದ್ದಾರೆ. ಇದನ್ನೂ ಓದಿ: ಮಧ್ಯಾಹ್ನ 12 ರಿಂದ 3 ಗಂಟೆ ವರೆಗೆ ಮನೆಯಿಂದ ಹೊರಗೆ ಬರಬೇಡಿ: ದಿನೇಶ್ ಗುಂಡೂರಾವ್
ಕಳೆದ ಜನವರಿಯಲ್ಲಿ ಟ್ರಂಪ್ ಅಧಿಕಾರ ಸ್ವೀಕರಿಸಿದ ಬಳಿಕ ಒಟ್ಟಾವ ಗಡಿಯಾಚೆಗಿನ ಸಂಬಂಧಗಳು ಕುಸಿದಿವೆ. ಅಲ್ಲದೇ ಕೆನಡಾವನ್ನು 51ನೇ ರಾಜ್ಯವಾಗಿ ಮಾಡಿಕೊಳ್ಳುವ ಚಿಂತನೆ ಹಾಗೂ ಕೆನಡಾ ಉತ್ಪನ್ನಗಳ ಮೇಲೆ ಸುಂಕ ವಿಧಿಸುವ ಟ್ರಂಪ್ ಅವರ ನಿರ್ಧಾರಗಳು ಉಭಯ ದೇಶಗಳ ಸಂಬಂಧ ಮತ್ತಷ್ಟು ಹಳಸುವಂತೆ ಮಾಡಿದೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ವಕ್ಫ್ ಅಧ್ಯಕ್ಷ ಸ್ಥಾನಕ್ಕೆ ಜಟಾಪಟಿ – ಅಧ್ಯಕ್ಷರಾಗಿ ಸೈಯದ್ ಹುಸೈನಿ ಆಯ್ಕೆ