ಹೈದರಾಬಾದ್: ನೇಣು ಬಿಗಿದುಕೊಂಡು ಮಹಿಳಾ ಪೇದೆ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಬುಧವಾರ ಆಂಧ್ರಪ್ರದೇಶದ ವಿಶಾಖಪಟ್ಟಣದ ಆನಂದಪುರಂನಲ್ಲಿ ನಡೆದಿದೆ.
ಕರನಂ ಕುಮಾರಿ(22) ಆತ್ಮಹತ್ಯೆ ಮಾಡಿಕೊಂಡ ಪೇದೆ. ಪತಿಯೊಂದಿಗಿನ ಗಲಾಟೆಯಿಂದ ರೋಸಿ ಹೋಗಿದ್ದ ಕರನಂ ಕುಮಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕರನಂ ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ಆಕೆಯ ಪತಿ ಮಲಾ ರಾಜೇಂದ್ರ(27) ಚಂಡೀಗಢದಲ್ಲಿ ಕೆಲಸ ಮಾಡುತ್ತಿದ್ದ.
Advertisement
ರಾಜೇಂದ್ರ ಹಾಗೂ ಕುಮಾರಿ ಇಬ್ಬರು ವಿಶಾಖಪಟ್ಟನಂನಲ್ಲಿರುವ ಪಂದಲಾಪಾಕದ ಇಂಡೋ-ಟಿಬೇಟಿಯನ್ ಬಾರ್ಡರ್ ಬೆಟಾಲಿಯನ್ ನಲ್ಲಿ ಭೇಟಿ ಆಗಿದ್ದರು. ಭೇಟಿಯಾದ ಬಳಿಕ ಇಬ್ಬರು ಒಳ್ಳೆಯ ಸ್ನೇಹಿತರು ಆಗಿದ್ದರು. ಇವರ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರು ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಇವರ ಮದುವೆಯನ್ನು ಪೋಷಕರು ಒಪ್ಪಿರಲಿಲ್ಲ. ಜಾತಿ ಬೇರೆ ಕಾರಣಕ್ಕೆ ಇಬ್ಬರ ಕುಟುಂಬದವರು ಈ ಮದುವೆಯನ್ನು ನಿರಾಕರಿಸಿದ್ದರು.
Advertisement
Advertisement
ಕುಮಾರಿ ತನ್ನ ಜೀವಕ್ಕೆ ಹೆದರಿ ಮದುವೆ ಮಾಡಿಕೊಳ್ಳೋಣ ಎಂದು ರಾಜೇಂದ್ರನಿಗೆ ಒತ್ತಾಯಿಸುತ್ತಿದ್ದಳು. ಬಳಿಕ ಇಬ್ಬರು ನಾಲ್ಕು ತಿಂಗಳ ಹಿಂದೆ ಸಿಂಹಚಲಂ ದೇವಸ್ಥಾನದಲ್ಲಿ ಮದುವೆ ಆಗಿ ಆನಂದಪುರಂನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಬಂದು ಜಗಳ ಮಾಡಲು ಶುರು ಮಾಡಿದ್ದಾರೆ. ಅಲ್ಲದೇ ಕುಮಾರಿ ಆತ್ಮಹತ್ಯೆಗೂ ಕೂಡ ಯತ್ನಿಸಿದ್ದಳು ಎಂದು ಬೀಮಿಲಿ ಸರ್ಕಲ್ ಇನ್ಸ್ ಪೆಕ್ಟರ್ ಸೂರ್ಯನಾರಾಯಣ ಹೇಳಿದ್ದಾರೆ.
Advertisement
ಕುಮಾರಿ ಮೊದಲ ಬಾರಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾಗ ಆಕೆಯ ಪತಿ ಹಾಗೂ ಆಕೆಯ ನಡುವೆ ಯಾವುದೇ ಮಾತುಕತೆ ಇರಲಿಲ್ಲ. ಅಲ್ಲದೇ ಪತಿ ರಾಜೇಂದ್ರ ತನ್ನ ಜೊತೆ ಚೆನ್ನಾಗಿ ನಡೆದುಕೊಳ್ಳುತ್ತಿಲ್ಲ ಎಂದು ಹೇಳಿ ಕುಮಾರಿ ಚಂಡೀಗಢದಲ್ಲಿದ್ದ ತನ್ನ ಪತಿಗೆ ಕರೆ ಮಾಡಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾಳೆ. ಆದರೆ ರಾಜೇಂದ್ರ ತನ್ನ ಪತ್ನಿಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ ಎಂದು ವರದಿಯಾಗಿದೆ.
ಪತಿಯನ್ನು ಕರೆ ಮಾಡಿದ ಬಳಿಕ ಕುಮಾರಿ ತನ್ನ ಕುಟುಂಬದವರಿಗೆ ಕರೆ ಮಾಡಿ, “ನಾನು ಮೋಸ ಹೋಗಿದ್ದೇನೆ. ನಾನು ಖಿನ್ನತೆಗೆ ಒಳಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದು ಹೇಳಿದ್ದಾಳೆ. ಆಕೆಯ ಪೋಷಕರು ಪ್ರತಿಕ್ರಿಯಿಸುವ ಮೊದಲೇ ಕುಮಾರಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೊಲೀಸರು ಕಾಲ್ ರೆಕಾರ್ಡ್ ಪರಿಶೀಲಿಸಿ ಚಂಡೀಗಢ ಪೊಲೀಸರಿಗೆ ಮಾಹಿತಿ ನೀಡಿದ್ದು ರಾಜೇಂದ್ರನನ್ನು ಬಂಧಿಸಿದ್ದಾರೆ.
ಕುಮಾರಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಬೀಮಿಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv