ಬೆಂಗಳೂರು: ಮಂಗಳೂರು ಮೂಲದ ರಾಜಾಸ್ಥಾನದ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಅವರ ಪತಿ ನಿರಂಜನ್ ಥಾಮಸ್ ಆಳ್ವಾ ಅವರು ಇಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ನಿರಂಜನ್ ಕಳೆದ 20 ದಿನಗಳಿಂದ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.
78 ವರ್ಷದ ನಿರಂಜನ್ ಅವರು ಇಂದು ಬೆಳಗ್ಗೆ 10:33 ರ ಸುಮಾರಿಗೆ ನಿಧನರಾಗಿದ್ದಾರೆ. ಅಂತಿಮ ವಿಧಿ ವಿಧಾನಗಳನ್ನು ನಾಳೆ ಬೆಂಗಳೂರಿನಲ್ಲಿ ಮಾಡಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ನಿರಂಜನ್ ಥಾಮಸ್ ಆಳ್ವ ಸುಪ್ರೀಂ ಕೋರ್ಟ್ ವಕೀಲರಾಗಿದ್ದರು. ಮೊದಲ ಸಂಸದೀಯ ದಂಪತಿ ಜೋಕಿಮ್ ಆಳ್ವಾ ಮತ್ತು ವೈಲೆಟ್ ಆಳ್ವಾ ಅವರ ಪುತ್ರರಾಗಿದ್ದರು.