ಹಿಂದಿ ಕಿರುತೆರೆಯಲ್ಲಿ ಮೋಡಿ ಮಾಡಿದ ಮುದ್ದು ಮುಖದ ಸುಂದರಿ ಸುರಭಿ ಚಂದ್ನಾ(Surabhi Chandna) ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ. ಬಹುಕಾಲದ ಗೆಳೆಯ ಕರಣ್ ಶರ್ಮಾ (Karan Sharma) ಜೊತೆ ಜೈಪುರನಲ್ಲಿ ಅದ್ಧೂರಿಯಾಗಿ ಮದುವೆಯಾಗುತ್ತಿದ್ದಾರೆ.
Advertisement
ನಾಗಿನ್ 5, ಬಿಗ್ ಬಾಸ್ ಸೀಸನ್ 15 ಸೇರಿದಂತೆ ಹಲವು ಟಿವಿ ಶೋಗಳಲ್ಲಿ ಜನಪ್ರಿಯತೆ ಗಳಿಸಿದ್ದ ನಟಿ ಸುರಭಿ ಅವರು ಉದ್ಯಮಿ ಕರಣ್ ಶರ್ಮಾ ಜೊತೆ ಕಳೆದ 13 ವರ್ಷಗಳಿಂದ ಡೇಟಿಂಗ್‌ನಲ್ಲಿದ್ದರು. ಈಗ ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಮಾರ್ಚ್ 2ರಂದು ಮದುವೆ (Wedding) ಜರುಗಲಿದೆ.
Advertisement
View this post on Instagram
Advertisement
ಜೈಪುರ ರಾಜಸ್ಥಾನದ ಖಾಸಗಿ ರೆಸಾರ್ಟ್‌ನಲ್ಲಿ ಮದುವೆ ಶುಭಕಾರ್ಯ ನಡೆಯುತ್ತಿದೆ. ಮೆಹೆಂದಿ, ಅರಿಶಿನ ಶಾಸ್ತ್ರದ ಕಾರ್ಯಕ್ರಮಗಳು ಈಗಾಗಲೇ ಶುರುವಾಗಿದೆ. ಇದನ್ನೂ ಓದಿ:ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ರಾಕಿಭಾಯ್? ಯಶ್ ಸ್ಪಷ್ಟನೆ
Advertisement
ನಟಿ ಸುರಭಿ ಮದುವೆಗೆ ನಟಿ ಶ್ರೇನು, ಮಾನಸಿ ಶ್ರೀವಾಸ್ತವ್, ಶಿವಾಂಗಿ ಜೋಶಿ, ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ. ಸದ್ಯ ಈ ಮದುವೆ ಸುದ್ದಿ ಕೇಳಿ ನಾಗಿನ್ ನಟಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ.