ರಸ್ತೆ ಅಪಘಾತದಲ್ಲಿ ಮರಾಠಿ ನಟಿ ಈಶ್ವರಿ ದೇಶಪಾಂಡೆ ಸಾವು

By
1 Min Read

ಪಣಜಿ: ಮರಾಠಿಯ ಯುವ ನಟಿ ಈಶ್ವರಿ ದೇಶಪಾಂಡೆ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಟಿ ಈಶ್ವರಿ ದೇಶಪಾಂಡೆ( 25) ಮೃತರಾಗಿದ್ದಾರೆ. ಸೋಮವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಈಶ್ವರಿ ದೇಶಪಾಂಡೆ ದುರಂತ ಸಾವನ್ನಪಿದ್ದಾರೆ. ಗೆಳೆಯ ಜೊತೆಗೆ ಗೋವಾಗೆ ಬಂದಿದ್ದ ನಟಿ ಈಶ್ವರಿ ದೇಶಪಾಂಡೆ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

ಗೆಳೆಯ ಶುಭಂ ದಡ್ಗೆ ಒಟ್ಟಿಗೆ ಕಾಲ ಕಳೆಯಲು ಟ್ರಿಪ್ ಪ್ಲಾನ್ ಮಾಡಿದ್ದರು. ಇಬ್ಬರೂ ಕಾರಿನಲ್ಲಿ ಗೋವಾಗೆ ತೆರಳಿದ್ದರು. ಕಳೆದ ಸೆಪ್ಟೆಂಬರ್ 15ರಂದೇ ಈಶ್ವರಿ ದೇಶಪಾಂಡೆ ಮತ್ತು ಶುಭಂ ದಡ್ಗೆ ಗೋವಾಗೆ ಬಂದಿದ್ದರು. ಸೆಪ್ಟೆಂಬರ್ 20 (ಸೋಮವಾರ) ಬೆಳಗ್ಗೆ ಬಾರ್ಡೇಜ್ ತಾಲೂಕಿನ ಬಳಿ ಈಶ್ವರಿ ದೇಶಪಾಂಡೆ ಮತ್ತು ಶುಭಂ ದಡ್ಗೆ ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತಕ್ಕೀಡಾಯಿತು. ಕಾರು ಅಪಘಾತದಲ್ಲಿ ಈಶ್ವರಿ ದೇಶಪಾಂಡೆ ಮತ್ತು ಆಕೆಯ ಗೆಳೆಯ ಶುಭಂ ದಡ್ಗೆ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಪ್ರೇಮಾಚೆ ಸೈಡ್ ಎಫೆಕ್ಟ್ಸ್ ಸಿನಿಮಾ ಮೂಲಕ ಈಶ್ವರಿ ದೇಶಪಾಂಡೆ ಮರಾಠಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಬೇಕಿತ್ತು. ಆದರೆ ಅದು ನೆರವೇರುವ ಮುನ್ನವೇ ಈಶ್ವರಿ ದೇಶಪಾಂಡೆ ಮೃತಪಟ್ಟಿದ್ದಾರೆ. ಗೋವಾ ಟ್ರಿಪ್‍ಗೆ ತೆರಳುವ ಮುನ್ನವೇ ಕೆಲ ಪ್ರಾಜೆಕ್ಟ್‍ಗಳ ಚಿತ್ರೀಕರಣವನ್ನು ಈಶ್ವರಿ ದೇಶಪಾಂಡೆ ಮುಗಿಸಿದ್ದರು. ಯುವ ನಟಿ ಈಶ್ವರಿ ದೇಶಪಾಂಡೆ ನಿಧನಕ್ಕೆ ಮರಾಠಿ ಚಿತ್ರರಂಗ ಕಂಬನಿ ಮಿಡಿದಿದೆ. ಇದನ್ನೂ ಓದಿ: ಪಿವಿ ಸಿಂಧು ಜೊತೆ ಬ್ಯಾಡ್ಮಿಂಟನ್ ಆಡಿದ ದೀಪಿಕಾ ಪಡುಕೋಣೆ

ಈಶ್ವರಿ ದೇಶಪಾಂಡೆ, ಶುಭಂ ದಡ್ಗೆ ಬಹುಕಾಲದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೆ ಕುಟುಂಬಸ್ಥರೂ ಸಮ್ಮತಿ ನೀಡಿದ್ದರು. ಮುಂದಿನ ತಿಂಗಳು ಈಶ್ವರಿ ದೇಶಪಾಂಡೆ ಮತ್ತು ಗೆಳೆಯ ಶುಭಂ ದಡ್ಗೆ ನಿಶ್ಚಿತಾರ್ಥ ನಿಗದಿ ಆಗಿತ್ತು. ನಿಶ್ಚಿತಾರ್ಥಕ್ಕಾಗಿ ಸಕಲ ತಯಾರಿ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಅಷ್ಟರಲ್ಲೇ ದುರಂತ ಸಂಭವಿಸಿದೆ.

Share This Article
Exit mobile version