ತಾಯಿಗೆ 2ನೇ ಮದುವೆ ಮಾಡಿಸಿದ ಮರಾಠಿ ನಟ ಸಿದ್ಧಾರ್ಥ್ ಚಂದೇಕರ್

Public TV
2 Min Read
siddarth chandekar

ತಿ ತೀರಿ ಹೋದ ಮೇಲೆ ಪತ್ನಿ 2ನೇ ಮದುವೆಯಾಗಬಾರದು ಎಂಬುದು ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿರುವ ಪದ್ಧತಿಯಾಗಿದೆ. ಆದರೆ ಇದೀಗ ತನ್ನ ತಾಯಿಗೆ ಮಗ ಮುಂದೆ ನಿಂತು 2ನೇ ಮದುವೆ ಮಾಡಿಸಿದ್ದಾರೆ. ಮರಾಠಿ ನಟ(Marathi Actor)  ಸಿದ್ಧಾರ್ಥ್ ಚಂದೇಕರ್ (Siddarth Chandekar) ತನ್ನ ತಾಯಿಗೆ ಮರು ಮದುವೆ ಮಾಡಿಸಿದ್ದಾರೆ. ಈ ಕುರಿತ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.

siddarth

ನಟ ಸಿದ್ಧಾರ್ಥ್ ಸಿನಿಮಾ ಬಿಟ್ಟು ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ನೆಟ್ಟಿಗರ ಮನಸ್ಸು ಗೆದ್ದಿದ್ದಾರೆ. ಇತ್ತೀಚೆಗೆ ತಮ್ಮ ತಾಯಿಗೆ 2ನೇ ಮದುವೆ ಮಾಡಿಸಿ ಸಿದ್ದಾರ್ಥ್ ಆದರ್ಶವಾಗಿ ನಿಂತಿದ್ದಾರೆ. ನಿತಿನ್ ಎಂಬುವವರ ಜೊತೆ ಸಿದ್ಧಾರ್ಥ್ ತಾಯಿ, ಸೀಮಾ ಚಂದೇಕರ್ (Seema Chandekar) ಮದುವೆ ನಡೆದಿದೆ. ಈ ಬಗ್ಗೆ ಸಿದ್ದಾರ್ಥ್ ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಬರೆದುಕೊಂಡಿದ್ದಾರೆ. ಆ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಸೀಮಾ ಕೂಡ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಹರ್ಷಿಕಾ ಪೂಣಚ್ಚ- ಭುವನ್

ಅಮ್ಮ, ಹ್ಯಾಪಿ ಸೆಕೆಂಡ್ ಇನ್ನಿಂಗ್ಸ್. ನಿಮ್ಮ ಮಕ್ಕಳ ಜೊತೆ ನಿನ್ನು ಜೀವನ ಇನ್ನು ಬಾಕಿಯಿದೆ. ನಿನಗೆ ಸ್ವತಂತ್ರವಾದ ಸುಂದರ ಪ್ರಪಂಚ ಇದೆ. ಇವತ್ತಿನವರೆಗೆ ನಮಗಾಗಿ ಬಹಳ ತ್ಯಾಗ ಮಾಡಿದ್ದೀಯಾ. ಈಗ ನಿಮ್ಮ ಕುರಿತು, ನಿಮ್ಮ ಹೊಸ ಸಂಗಾತಿ ಬಗ್ಗೆ ಆಲೋಚಿಸಬೇಕಾದ ಸಮಯ ಬಂದಿದೆ. ಈ ವಿಷಯದಲ್ಲಿ ನಿಮ್ಮ ಮಕ್ಕಳು ಯಾವಾಗಲೂ ನಿಮೊಟ್ಟಿಗೆ ಇರುತ್ತೇವೆ. ನೀವು ನನ್ನ ಮದುವೆಯನ್ನು ಬಹಳ ಅದ್ಧೂರಿಯಾಗಿ ನೆರವೇರಿಸಿದ್ದಿರಿ. ಈಗ ನಾನು ಅದನ್ನೇ ಮಾಡಿದ್ದೇನೆ. ನನ್ನ ಜೀವನದಲ್ಲಿ ಹೆಚ್ಚು ಸಂತೋಷಪಟ್ಟ ಮದುವೆ. ಐ ಲವ್ ಯೂ ಅಮ್ಮ. ಹ್ಯಾಪಿ ಮ್ಯಾರೀಡ್ ಲೈಫ್ ಎಂದು ಸಿದ್ದಾರ್ಥ್ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅಷ್ಟೇ ಅಲ್ಲ ಹೊಸ ಜೋಡಿಗೆ ಶುಭ ಹಾರೈಸುತ್ತಿದ್ದಾರೆ. ಮರಾಠಿ ಚಿತ್ರರಂಗ ಹಾಗೂ ಕಿರುತೆರೆ ಕಲಾವಿದರು ಕೂಡ ಜೋಡಿಗೆ ಶುಭಹಾರೈಸಿದ್ದಾರೆ.

ಮರಾಠಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿರುವ ಸಿದ್ದಾರ್ಥ್ ಚಂದೇಕರ್ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೆಂಡಾ, ಕ್ಲಾಸ್‌ಮೇಟ್ಸ್, ಬಾಲ ಗಂಧರ್ವ ಹೀಗೆ ಒಂದಷ್ಟು ಮರಾಠಿ- ಹಿಂದಿ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ಮರಾಠಿ ಕಿರುತೆರೆ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಂಡು ಹೆಸರು ಮಾಡಿದ್ದಾರೆ. ಇತ್ತೀಚೆಗೆ ನಾಗೇಶ್ ಕುಕುನೂನ್ ನಿರ್ದೇಶನದ ‘ಸಿಟಿ ಆಫ್ ಡ್ರೀಮ್ಸ್’ ವೆಬ್ ಸೀರಿಸ್‌ನಲ್ಲಿ ಸಿದ್ದಾರ್ಥ್ ನಟಿಸಿದ್ದರು.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article