ಬೆಂಗಳೂರು: ಮರಾಠರು ಪುಂಡಾಟಿಕೆ ಮಾಡಿದರೆ ಸರಿಯಿರಲ್ಲ, ಮರಾಠ ಸಮುದಾಯದವರ ಈ ವರ್ತನೆ ಹೀಗೆ ಮುಂದುವರಿದರೆ ಬುದ್ಧಿ ಕಲಿಸಬೇಕಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಹೇಳಿದರು.ಇದನ್ನೂ ಓದಿ: ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ಅನುಮತಿ, ಅನುದಾನ ನೀಡಿ: ಕೇಂದ್ರಕ್ಕೆ ಡಿಕೆಶಿ ಮನವಿ
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮರಾಠ ಪುಂಡರ ಹಾವಳಿಗೆ ಈಗಾಗಲೇ ಎಚ್ಚರಿಕೆ ಕೊಡುವ ಕೆಲಸ ಆಗಿದೆ. ಇದೆಲ್ಲ ಸರಿಯಿರಲ್ಲ ಎಂದು ಹೇಳಿದ್ದೇವೆ. ಮುಂದುವರೆದರೆ ನಾವೂ ಸರಿಯಾದ ಉತ್ತರ ಕೊಡಬೇಕಾಗುತ್ತದೆ. ಈಗಾಗಲೇ ಸಿಎಂ ಗೃಹ ಸಚಿವರಿಗೂ ಹೇಳಿದ್ದೇವೆ. ಕನ್ನಡದ ವಿಚಾರಕ್ಕೆ ಬಂದರೆ ಅವರಿಗೆ ಶಿಸ್ತು ಕಲಿಸಬೇಕಾಗುತ್ತದೆ ಎಂದರು.
ಇಲ್ಲಿಯ ಗಾಳಿ, ನೀರು, ಅನ್ನ ತಿಂದು ಬೇರೆ ಭಾಷೆ ಬಗ್ಗೆ ವ್ಯಾಮೋಹ ಇದ್ದರೆ ಸರಿಯಿರಲ್ಲ. ಅಂತವರ ವಿರುದ್ಧ ಗೂಂಡಾ ಕೇಸ್ ಹಾಕ್ತೀವಿ. ನಾವು ಕೂಡ ಬೇರೆ ಭಾಷೆ ಪ್ರೀತಿಸುತ್ತೇವೆ. ಆದರೆ ಗೂಂಡಾ ವರ್ತನೆ ಮಾಡುವುದಿಲ್ಲ. ಈ ರೀತಿ ಮಾಡಿದರೆ ಸರಿಯಾದ ಉತ್ತರ ಕೊಡಬೇಕಾಗುತ್ತದೆ. ನಾಡು ನುಡಿ ವಿಷಯ ಬಂದಾಗ ಯಾಕೆ ಮಾತಾಡಬಾರದು? ನಾವು ಅವರ ಜಾಗದಲ್ಲಿಯೇ ಬಂದು ಉತ್ತರ ಕೊಡ್ತೀವಿ. ನಮ್ಮ ಕಂಡಕ್ಟರ್ ಯಾಕೆ ಮರಾಠಿ ಮಾತಾಡಬೇಕು? ಅವರು ಕನ್ನಡದವರು ಕನ್ನಡ ಮಾತನಾಡುತ್ತಾರೆ. ಅವರ ಮೇಲೆ ಯಾಕೆ ಪೋಕ್ಸೋ ಕಾಯ್ದೆ ಹಾಕಬೇಕು ಎಂದು ಕಿಡಿಕಾರಿದರು.ಇದನ್ನೂ ಓದಿ: ಕೋರ್ಟ್ ಹಾಲ್‌ನಲ್ಲಿ ಪವಿತ್ರಾ, ದರ್ಶನ್ ದೂರ ದೂರಾ – ಕಣ್ಣೀರಿಡುತ್ತ ತೆರಳಿದ ಗೆಳತಿ!