ಚಾಮರಾಜನಗರ: ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ದೇವಾಲಯ ವಿಷ ಪ್ರಸಾದ ದುರಂತಕ್ಕೆ ಸಂಬಂಧಿಸಿದ ದೇವಾಸ್ಥಾನದ ಟ್ರಸ್ಟಿನ ಸದಸ್ಯನಾಗಿರುವ ಚಿನ್ನಪ್ಪಿಯ ಆಸ್ತಿ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ದೇವಸ್ಥಾನದ ಟ್ರಸ್ಟಿ ಚಿನ್ನಪ್ಪಿ ಮೇಲೆ ಅನುಮಾನುಗೊಂಡು ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ಆದರೆ ಈ ವೇಳೆ ಚಿನ್ನಪ್ಪಿ ಐದು ವರ್ಷದ ಹಿಂದೆ ಸಾಮಾನ್ಯ ಕೂಲಿ ಕೆಲಸ ಮಾಡುತ್ತಿದ್ದನು. ಜೀವನಕ್ಕಾಗಿ ಕೂಲಿ ಕೆಲಸ ಮಾಡಲೇಬೇಕಿದ್ದ ಪರಿಸ್ಥಿತಿ ಇತ್ತು. ಆದರೆ ಈಗ ಚಿನ್ನಪ್ಪಿ ಕೂಲಿ ಕಾರ್ಮಿಕನಾಗಿದ್ದವನು ಐಷಾರಾಮಿ ಮನೆ ಮತ್ತು ಕಾಂಪ್ಲೆಕ್ಸ್ ಗಳ ಒಡೆಯನಾಗಿದ್ದಾನೆ. ಆದ್ದರಿಂದ ಕೂಲಿ ಕೆಲಸ ಮಾಡುತ್ತಿದ್ದವನು ಇಷ್ಟು ಆಸ್ತಿ ಹೇಗೆ ಸಂಪಾದನೆ ಮಾಡಿದ್ದಾನೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
Advertisement
Advertisement
ಸಾಮಾನ್ಯ ಕೂಲಿ ಕಾರ್ಮಿಕನಾಗಿದ್ದ ಚಿನ್ನಪ್ಪಿ ಕೊಡ್ಡ ಮನೆ ಮತ್ತು ಕಾಂಪ್ಲೆಕ್ಸ್ ಕಟ್ಟಿಸಿದ್ದಾನೆ. ಅಷ್ಟೇ ಅಲ್ಲದೇ ಮನೆಯನ್ನು 3 ವರ್ಷಗಳ ಹಿಂದೆ ಕಟ್ಟಿಸಿದ್ದಾನೆ. ದೇವಾಲಯದ ಆಡಳಿತ ಮಂಡಳಿಯಲ್ಲಿ ಚಿನ್ನಪ್ಪಿ ಸಾಕಷ್ಟು ಹಗರಣ ಎಸಗಿದ್ದಾನೆ. ಆದ್ದರಿಂದ ಇಂತಹ ಮನೆ ಕಟ್ಟಿಸಿದ್ದಾನೆ. ಜಮೀನು ಖರೀದಿಸಿದ್ದಾನೆ ಎಂದು ಅಲ್ಲಿನ ಜನರು ಆರೋಪಿಸುತ್ತಿದ್ದಾರೆ.
Advertisement
ಚಿನ್ನಪ್ಪಿ ಕಿಚ್‍ಗುತ್ ಮಾರಮ್ಮ ದೇವಾಲಯದ ಟ್ರಸ್ಟ್ ನ ಸದಸ್ಯನಾಗಿದ್ದನು. ಪ್ರಸಾದದ ದುರಂತ ಸಂಭವಿಸಿದ ಬಳಿಕ ಚಿನ್ನಪ್ಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಾರಮ್ಮ ದೇವಾಲಯ ವಿಷ ಪ್ರಸಾದ ದುರಂತಕ್ಕೆ ದೇವಸ್ಥಾನದ ಆದಾಯವೇ ಕಾರಣವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಿನ್ನಪ್ಪಿ ಆಸ್ತಿ ಬಗ್ಗೆಯೂ ಪೊಲೀಸರಿಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
Advertisement
ಶುಕ್ರವಾರ ಇಬ್ಬರು, ಭಾನವಾರ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದರು. ಆದರೆ ವಿಷಪ್ರಸಾದ ಪ್ರಕರಣದಲ್ಲಿ ಒಟ್ಟು 7 ಮದಿಯ ಮೇಲೆ ಎಫ್‍ಐಆರ್ ಹಾಕಲಾಗಿದೆ. ಕೊಳ್ಳೇಗಾಲ ಡಿಎಸ್‍ಪಿ ಪುಟ್ಟಮಾದಯ್ಯ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಿದೆ. ಕೊಳ್ಳೇಗಾಲ ನ್ಯಾಯಾಲಯಕ್ಕೆ ಆರೋಪಿಗಳು ಸೇರಿದಂತೆ ಚಿನ್ನಪ್ಪಿಯನ್ನು ಇಂದು ಹಾಜರು ಪಡಿಸುವ ಸಾಧ್ಯತೆ ಇದೆ.
https://www.youtube.com/watch?v=VlWU8VbgtSc
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv