ನವದೆಹಲಿ: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ೩೭೦ನೇ ವಿಧಿಯನ್ನು ರದ್ದು ಪಡಿಸಿ, ೨ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿದ್ದ ಕೇಂದ್ರ ಸರ್ಕಾರ ಸದ್ಯ ಭಾರತದ ಹೊಸ ಭೂಪಟವನ್ನು ಬಿಡುಗಡೆ ಮಾಡಿದೆ.
೨೦೧೯ರ ಅ.೩೧ ರಂದು ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರವನ್ನು ೨ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿ ಅಧಿಕೃತವಾಗಿ ಘೋಷಣೆ ಮಾಡಿತ್ತು. ಇದಾದ ಬಳಿಕ ಸದ್ಯ ಭಾರತೀಯ ಸರ್ವೆ ಜನರಲ್ ಹೊಸ ಭೂಪಟ ಸಿದ್ಧ ಪಡಿಸಿದ್ದು, ಕಾರ್ಗಿಲ್, ಲೇಹ್ ಸೇರಿದಂತೆ ೮ ಜಿಲ್ಲೆಗಳನ್ನು ಲಡಾಖ್ ಹಾಗೂ ೨೦ ಜಿಲ್ಲೆಗಳನ್ನು ಒಳಗೊಂಡ ಜಮ್ಮು ಕಾಶ್ಮೀರವಾಗಿ ಗುರಿತಿಸಲಾಗಿದೆ.
Advertisement
#BREAKING: New Official Maps of Union Territories of Jammu & Kashmir and Ladakh released by Government of India, clearly demarcating Illegally occupied territories by Pakistan like Muzaffarabad, Mirpur etc. in PoK as part of J&K UT and Gilgit-Baltistan as part of Ladakh UT. pic.twitter.com/M1Q9r0BbvX
— Aditya Raj Kaul (@AdityaRajKaul) November 2, 2019
Advertisement
ಕಳೆದ ೨ ದಿನಗಳ ಹಿಂದೆಯಷ್ಟೇ ಲಡಾಖ್ ಹಾಗೂ ಜಮ್ಮು ಕಾಶ್ಮೀರ ಅಧಿಕೃತವಾಗಿ ವಿಭಜನೆಯಾಗಿತ್ತು. ಸದ್ಯ ಜಮ್ಮು ಕಾಶ್ಮೀರದಲ್ಲಿ ಕಥುವಾ, ಜಮ್ಮು, ಸಾಂಬಾ, ಪೂಂಚ್, ಕುಲ್ಗಾಂ, ಶೋಫಿಯಾನ್, ಶ್ರೀನಗರ, ಅನಂತ್ ನಾಗ್, ಬಂಡಿಪೋರ, ಮೀರ್‌ಪುರ್, ಮುಜಫರಾಬಾದ್ ಸೇರಿದಂತೆ ೨೦ ಜಿಲ್ಲೆಗಳನ್ನು ಒಳಗೊಂಡಿದೆ. ಲಡಾಖ್ ನಲ್ಲಿ ಗಿಲ್ಗಿಟ್, ಗಿಲ್ಗಿಟ್ ವಜಾರತ್, ಕಾರ್ಗಿಲ್, ಲೇಹ್ ಬುಡಕಟ್ಟು ಪ್ರದೇಶ, ಲಡಾಕ್, ಚಿಲ್ಹಾಸ್ ಜಿಲ್ಲೆಗಳಿವೆ. ವಿಶೇಷ ಎಂದರೆ ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರ್ ಬಾದ್, ಮೀರ್ ಪುರ್ ಗಳನ್ನು ಭಾರತದ ಭಾಗವಾಗಿ ಗುರುತಿಸಲಾಗಿದೆ.
Advertisement
1947 ರಲ್ಲಿ ಜಮ್ಮು ಕಾಶ್ಮೀರ 14 ಜಿಲ್ಲೆಗಳನ್ನು ಒಳಗೊಂಡಿತ್ತು. 2019 ರಲ್ಲಿ ರಾಜ್ಯ ಸರ್ಕಾರ ಜಮ್ಮು ಕಾಶ್ಮೀರದ ಜಿಲ್ಲೆಗಳನ್ನು ಮರುವಿಂಗಡನೆ ಮಾಡಿ 28ಕ್ಕೆ ಹೆಚ್ಚಿಸಿತ್ತು.
Advertisement
Maps of newly formed Union Territories of #JammuKashmir and #Ladakh, with the map of India. @PIBSrinagar@airnewsalerts@DDNewsLive@diprjk
Press Release ????https://t.co/tEBd4B7c0h pic.twitter.com/lGAeFwvFfb
— Spokesperson, Ministry of Home Affairs (@PIBHomeAffairs) November 2, 2019