ಧಾರವಾಡ: ಡಿಸೆಂಬರ್‌ವರೆಗೂ ರಾಜ್ಯದಲ್ಲಿ ರಾಜಕೀಯ ಬಾಂಬ್ ಬ್ಲಾಸ್ಟ್ ಆಗುತ್ತದೆ. ಹಲವರು ಕಾಂಗ್ರೆಸ್ (Congress) ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ, ಕಾದು ನೋಡಿ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಧಾರವಾಡದಲ್ಲಿ (Dharwad) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ (BJP) ಹಲವು ಮಂದಿ ಗೊಂದಲದಲ್ಲಿದ್ದಾರೆ, ನವೆಂಬರ್‌ವರೆಗೂ ಕಾದು ನೋಡಿ, ಹಲವರು ಮತ್ತೆ ಕಾಂಗ್ರೆಸ್‍ಗೆ ಬರುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನ ವೈದ್ಯೆ ಹೆಸರಲ್ಲಿ ಮಹಿಳೆಯರಿಗೆ ಅಶ್ಲೀಲ ಫೋಟೋ – ಆರೋಪಿಗಳು ಅರೆಸ್ಟ್
Advertisement
Advertisement
ಇದೇ ವೇಳೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರಿಗೆ ನನ್ನ ಅರ್ಹತೆ ಗೊತ್ತಿರಲಿಲ್ವಾ? ರಾಜ್ಯದಲ್ಲಿ 123 ಸ್ಥಾನ ಗೆಲ್ಲುತ್ತೇನೆ ಎನ್ನುವ ಅವರು ಮೊದಲು 59 ಸೀಟು ಗೆದ್ದು ತೋರಿಸಲಿ. ಜಮೀರ್ ಅಹ್ಮದ್ ಖಾನ್ ಅವರನ್ನು ಯಾರು ಕಟ್ಟಿ ಹಾಕಲು ಸಾಧ್ಯವಿಲ್ಲ ಎಂದು ಟಾಂಗ್ ನೀಡಿದ್ದಾರೆ.
Advertisement
Advertisement
ರಾಹುಲ್ ಗಾಂಧಿ ಪಾದಯಾತ್ರೆ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ, ದೇವರ ಆಶೀರ್ವಾದ ಪಾದಯಾತ್ರೆ ಯಶಸ್ವಿಯಾಗಿ ಸಾಗುತ್ತಿದೆ. ಸಿದ್ದು-ಡಿಕೆಶಿ ಮೊದಲಿನಿಂದಲೂ ಒಂದಾಗಿಯೇ ಇದ್ದಾರೆ, ಮಾಧ್ಯಮದವರೇ ಈ ರೀತಿಯಾಗಿ ಬಿಂಬಿಸಿದ್ದು, ಬಿಜೆಪಿ ಅವರಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಹೀಗೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿ (Rahul Gandhi) ಅವರು ಪಾದಯಾತ್ರೆ (Bharat Jodo Yatra) ಮೂಲಕ ಇತಿಹಾಸ ಕ್ರಿಯೇಟ್ ಮಾಡುತ್ತಿದ್ದಾರೆ, ಇಷ್ಟೊಂದು ಜನ ಬರುತ್ತಾರೆ ಅಂತ ನಾವು ಅಂದುಕೊಂಡಿರಲಿಲ್ಲ. ಪಾಂಡವಪುರದಿಂದ ಶ್ರೀರಂಗಪಟ್ಟಣದವರೆಗೂ ನಾನು ನಡೆದೇ, ನನಗೆ ಅಲ್ಲಿಯವರೆಗೂ ನಡೆಯುವುದಕ್ಕೆ ಆಗಿಲ್ಲ, ಅಂಥದ್ದರಲ್ಲಿ ರಾಹುಲ್ ಗಾಂಧಿ ಇಷ್ಟೊಂದು ನಡೆಯುತ್ತಿರುವುದು ನಿಜಕ್ಕೂ ಅಚ್ಚರಿ ಎಂದಿದ್ದಾರೆ.
ಮುಸ್ಲಿಮರಿಗೆ ಕಾಂಗ್ರೆಸ್‍ನಲ್ಲಿ ಟಿಕೆಟ್ ನೀಡುತ್ತಾರೆ, ಆದರೆ ಅವರನ್ನು ಜನರು ಗೆಲ್ಲಿಸುತ್ತಿಲ್ಲ, ಅವರು ಗೆಲ್ಲಿಸಿದರೆ ಒಳ್ಳೆಯದು. ಓರ್ವ ಸೇವಕ ನಾನು, ಲೀಡರ್ ಆಗುವುದಕ್ಕೆ ಇಷ್ಟ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸರ್ಕಾರ ನಡೆಸುತ್ತೆ; ಬ್ರಹ್ಮಾಂಡ ಗುರೂಜಿ
ಖರ್ಗೆ ಎಐಸಿಸಿ ಅಧ್ಯಕ್ಷ ಆಗಿರುವುದು ನಮಗೆ ಆನೆಬಲ ಬಂದಂತಾಗಿದೆ, ಕುಮಾರಸ್ವಾಮಿ 57 ಸೀಟ್‍ಗೆ ರೀಚ್ ಆಗಲಿಲ್ಲ, ಮುಂದೆ 1,2,3 ಅಷ್ಟೇ ಅವರು ಗೆಲ್ಲುವುದು ಎಂದು ಕುಮಾರಸ್ವಾಮಿ ಬಗ್ಗೆ ಜಮೀರ್ ವ್ಯಂಗ್ಯವಾಡಿದ್ದಾರೆ.