ಚೆನ್ನೈ: ಗುರಿ ಸರಿಯಾಗಿದ್ದರೆ ಸಾಧನೆಯ ಹಾದಿ ಸರಳವಾಗುತ್ತದೆ ಎನ್ನುತ್ತಾರೆ. ಹೀಗೆ ಇಲ್ಲೊಬ್ಬ ವ್ಯಕ್ತಿ ರೈತನಾಗಿ ವೃತ್ತಿ ಜೀವನವನ್ನು ಆರಂಭಿಸಿ ಒಂದೊಂದೆ ಮೆಟ್ಟಿಲೇರಿದ್ದಾರೆ. ಇವರ ಸಾಧನೆಯ ಹಿಂದಿನ ಕಥೆ ಯುವ ಪಿಳಿಗೆಗೆ ಸ್ಫೂರ್ತಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
34 ವರ್ಷದ ಅರವಿಂದ್ ಪೆರುಮಾಳ್ ತನ್ನ ಗುರಿಯನ್ನು ಸಾಧಿಸಲು ತಿರುವುಗಳನ್ನು ದಾಟಿ ಬಂದಿದ್ದಾರೆ. ರೈತನಾಗಿ ಕೆಲಸವನ್ನು ಪ್ರಾರಂಭಿಸಿದರು. ಪೊಲೀಸ್‍ಗೆ ಕಾನ್ಸ್‌ಟೇಬಲ್, ಪಿಚ್‍ಡಿ ಪಡೆದರು ನಂತರ ಈಗ ಕಾಲೇಜ್‍ವೊಂದರಲ್ಲಿ ಸಹಾಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Advertisement
Advertisement
ಖಾಸಗಿ ವಾಹಿನಿ ಜೊತೆಗೆ ಮಾತನಾಡಿ, ನಾನೊಬ್ಬ ರೈತನ ಮಗ, ನಾವು ಜೀವನವನ್ನು ನಡೆದಲು ಹೆಣಗಾಡುತ್ತಿದ್ದೆವು. ನನ್ನ ಪದವಿ ಮತ್ತು ಸ್ನಾತಕೋತ್ತರ ಪದವಿಯ ಸಮಯದಲ್ಲಿ, ನನ್ನ ಮತ್ತು ನನ್ನ ಕುಟುಂಬಕ್ಕೆ ಸಹಾಯವನ್ನು ಮಾಡಲು ನಾನು ತೋಟಗಳಲ್ಲಿ ಕೆಲಸ ಮಾಡಿದೆ. ನಾನು ಪಿಎಚ್‍ಡಿ ಮಾಡಬೇಕೆಂದು ಬಯಸಿದ್ದೆ ಆದರೆ ಆ ಸಮಯದಲ್ಲಿ ಹಣಕಾಸಿನ ಅಡಚಣೆಗಳಿಂದ ಅದು ಸಾಧ್ಯವಾಗಲಿಲ್ಲ. 23ನೇ ವಯಸ್ಸಿನಲ್ಲಿ ಪೊಲೀಸ್ ಪಡೆಗೆ ಸೇರಿ 11 ವರ್ಷಗಳ ಕಾಲ ಅಲ್ಲೇ ಮುಂದುವರಿದಿದ್ದೇನೆ ಎಂದರು. ಇದನ್ನೂ ಓದಿ: ಬಿಕಿನಿ, ಜೀನ್ಸ್, ಹಿಜಬ್ ಹೀಗೆ ತಾನು ಏನು ಧರಿಸಬೇಕೆಂದು ನಿರ್ಧರಿಸುವುದು ಮಹಿಳೆಯ ಹಕ್ಕು : ಪ್ರಿಯಾಂಕಾ ಗಾಂಧಿ
Advertisement
ಪೊಲೀಸ್ ಪಡೆಗೆ ಸೇರಿದ ನಂತರ ಮನೋನ್ಮಣಿಯಂ ಸುಂದರನಾರ್ ವಿಶ್ವವಿದ್ಯಾಲಯದಲ್ಲಿ (ಎಂಎಸ್‍ಯು) ಪಿಎಚ್‍ಡಿ ಕೋರ್ಸ್‍ಗೆ ಪ್ರವೇಶ ಬರೆದು ಅದರಲ್ಲಿ ಪ್ರವೇಶ ಪಡೆದಿದ್ದೇನೆ. ನಾನು ಅರೆಕಾಲಿಕ ಪಿಎಚ್‍ಡಿ ಕೋರ್ಸ್‍ನ್ನು ಮುಂದುವರಿಸಲು ಅನುಮತಿಯನ್ನು ಕೋರಿದೆ, ಪ್ರಸ್ತುತ ತಮಿಳುನಾಡು ಕರಾವಳಿ ಪೊಲೀಸ್‍ನ ಡಿಐಜಿ ಆಗಿರುವ ಆಗಿನ ಪೊಲೀಸ್ ವರಿಷ್ಠಾಧಿಕಾರಿ ಆರ್. ಚಿನ್ನಸ್ವಾಮಿ ಅವರ ಮನವಿಗೆ ತಕ್ಷಣ ಒಪ್ಪಿದರು. ಇದನ್ನೂ ಓದಿ: PhonePe ಮೂಲಕ ಹಣವನ್ನು ಸ್ವೀಕರಿಸುವ ಡಿಜಿಟಲ್ ಭಿಕ್ಷುಕ
Advertisement
2019ರಲ್ಲಿ ತಮ್ಮ ಪಿಎಚ್‍ಡಿ ಪೂರ್ಣಗೊಳಿಸಿದೆ. ಆದರೆ ಸಾಂಕ್ರಾಮಿಕ ರೋಗದಿಂದಾಗಿ ಅವರಿಗೆ ಡಿಸೆಂಬರ್ 2021ರಲ್ಲಿ ನೀಡಲಾಯಿತು. ಕಳೆದ 11 ವರ್ಷಗಳಿಂದ ಸುತಮಲ್ಲಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೆರುಮಾಳ್ ಕಳೆದ ವಾರ ಗುರುವಾರ ಸೇವೆಯಿಂದ ಬಿಡುಗಡೆ ಹೊಂದಿದ್ದು, ಈಗ ನಾಗರಕೋಯಿಲ್‍ನ ಎಸ್‍ಟಿ ಹಿಂದೂ ಕಾಲೇಜಿಗೆ ಸೇರಿದ್ದಾರೆ.