ಬೆಂಗಳೂರು: ನನ್ನ ಹಾಗೂ ಎಂ.ಬಿ ಪಾಟೀಲ್ ರ ಸಂಬಂಧ ಪಕ್ಷಗಳನ್ನು ಮೀರಿದ್ದು. ಚುನಾವಣೆಯಲ್ಲಿ ಗೆದ್ದ ಬಳಿಕ ಭೇಟಿಯಾಗಿರಲಿಲ್ಲ. ಹಾಗಾಗಿ ಭೇಟಿ ಮಾಡಿದ್ದೇನೆ. ಯಾವುದೇ ರಾಜಕೀಯ ಚರ್ಚೆ ಆಗಿಲ್ಲ ಅಂತ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಹೇಳಿದ್ದಾರೆ.
ಇಂದು ಸದಾಶಿವ ನಗರದಲ್ಲಿರೋ ಮಾಜಿ ಸಚಿವ ಎಂ.ಬಿ ಪಾಟೀಲ್ ಮನೆಗೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್ ಪಾಟೀಲ್, ಮಂತ್ರಿ ಆಗಿದ್ದಾಗ ನಮ್ಮ ಭಾಗದಲ್ಲಿ ಅನೇಕ ಕೆಲಸ ಮಾಡಿದ್ದಾರೆ. ಇದೊಂದು ಕರ್ಟಸಿ ಭೇಟಿ ಅಷ್ಟೆ. ಇದು ರಾಜಕೀಯ ಭೇಟಿಯಲ್ಲ. ಬಿಜೆಪಿಗೆ ಅಹ್ವಾನ ಮಾಡಲು ಬಂದಿಲ್ಲ. ಈಗಿನ ಕಾಂಗ್ರೆಸ್ ಗಲಾಟೆಗೂ ನನಗೂ ಸಂಬಂಧವಿಲ್ಲ ಅಂದ್ರು.
Advertisement
Advertisement
ಇದೇ ವೇಳೆ ಎಂ.ಬಿ ಪಾಟೀಲ್ ಅವರ ಮನವೊಲಿಸಲು ಬಂದಿದ್ದೀರಾ ಅಂತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಯಾರ ಮನವೊಲಿಸಲು ಬಂದಿಲ್ಲ. ಅದಕ್ಕೆಲ್ಲ ಪಕ್ಷದಲ್ಲಿ ಹಿರಿಯರಿದ್ದಾರೆ. ಕೇವಲ ಸೌಜನ್ಯದ ಭೇಟಿ ಅಷ್ಟೆ. ಯಾವುದೇ ರಾಜಕೀಯ ಚರ್ಚೆ ಆಗಿಲ್ಲ ಅಂತ ಮತ್ತೊಮ್ಮೆ ಸ್ಪಷ್ಟಪಡಿಸಿದ್ರು.
Advertisement
ಒಟ್ಟಿನಲ್ಲಿ ರಾಜಕೀಯ ಬೆಳವಣಿಗೆಗಳ ಮಧ್ಯೆ ರಾಯಚೂರು ನಗರದ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್, ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಎಂ.ಬಿ ಪಾಟೀಲ್ ಅವರನ್ನು ಭೇಟಿ ಮಾಡಿರುವುದು ಇದೀಗ ತೀವ್ರ ಕುತೂಹಲ ಸೃಷ್ಟಿಸಿದೆ.
Advertisement
ಇತ್ತ ಸಚಿವ ಸ್ಥಾನ ಕೈ ತಪ್ಪಿದ್ರ ಬಗ್ಗೆ ನಾನು ಸಿದ್ದರಾಮಯ್ಯ ಅವರ ಬಳಿಗೆ ಹೋಗಿ ಹೇಳಿದ್ದೆ. ಏನಾಯ್ತು ಅಂತ ಕೇಳಿದ್ರು ಅಷ್ಟೇ. ಆಮೇಲೆ ಫೋನ್ ಮಾಡ್ಲಿಲ್ಲ ಅಂತ ಮಾಜಿ ಸಚಿವ ಎಂಬಿ ಪಾಟೀಲ್ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದಾರೆ.