ಮಡಿಕೇರಿ: ಕಲ್ಯಾಣ ಕರ್ನಾಟಕದಿಂದ ಹಲವು ಪ್ರಮುಖ ನಾಯಕರು ಕಾಂಗ್ರೆಸ್ (Congress) ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಕೊಡಗು (Kodagu) ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು (Boseraju) ಹೊಸ ಬಾಂಬ್ ಸಿಡಿಸಿದ್ದಾರೆ.
ಮಡಿಕೇರಿಯಲ್ಲಿ (Madikeri) ಮಾತಾನಾಡಿದ ಅವರು ಕಲ್ಯಾಣ ಕರ್ನಾಟಕದಿಂದ ಈಗಾಗಲೇ ಅನೇಕರು ತನ್ನೊಂದಿಗೆ ಸಂಪರ್ಕದಲ್ಲಿ ಇದ್ದಾರೆ. ಈಗಾಗಲೇ ನಮ್ಮ ನಾಯಕರ ಜೊತೆಯಲ್ಲಿ ಅವರು ಬರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಹಲವಾರು ಮಂದಿ ನಮ್ಮ ಪಕ್ಷಕ್ಕೆ ಬರುವುದರಿಂದ ಅವರಿಂದ ಆಗುವಂತಹ ಅನುಕೂಲ ಹಾಗೂ ಅನಾನುಕೂಲಗಳ ಬಗ್ಗೆ ಮಾಹಿತಿಯನ್ನು ರಾಜ್ಯ ನಾಯಕರಿಗೆ ನೀಡಲಾಗಿದೆ ಎಂದರು.
Advertisement
Advertisement
ಇಷ್ಟೇ ಜನರು ಬರುತ್ತಾರೆ ಎಂದು ಸ್ಪಷ್ಟವಾಗಿ ಹೇಳಲು ಆಗೋಲ್ಲ. ಅನೇಕ ಹೊಸ ಹೊಸ ಮುಖಗಳು ನಾವು ನಂಬಲು ಆಗದೇ ಇರುವಂತಹ ಮುಖಗಳು ಪಕ್ಷಕ್ಕೆ ಬರುತ್ತಿದೆ. ಬಿಜೆಪಿಯಿಂದ ಕೆಲ ಶಾಸಕರು ಮಾಜಿ ಶಾಸಕರು ಅತಿ ಮುಖ್ಯವಾದ ನಾಯಕರು ಕಲ್ಯಾಣ ಕರ್ನಾಟಕ ಭಾಗದಿಂದ ಬರುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಬಾಲಕಿಯ ಮೇಲೆ ಸರ್ಕಾರಿ ಅಧಿಕಾರಿ ಅತ್ಯಾಚಾರ – ಸ್ವಯಂ ದೂರು ದಾಖಲಿಸಿಕೊಂಡ ದೆಹಲಿ ಹೈಕೋರ್ಟ್
Advertisement
ಬಿಜೆಪಿಯವರು ಮೋದಿ ಅವರ ಮೇಲೆ ಆಧಾರದಿಂದ ಲೋಕಸಭೆ ಚುನಾವಣೆಗೆ ಹೋಗುತ್ತಾರೆ. ಕಳೆದ ಚುನಾವಣೆಯಲ್ಲಿ ರಾಜ್ಯಕ್ಕೆ 26 ಬಾರಿ ಮೋದಿ ಅವರು ಚುನಾವಣೆಗೆ ಬಂದು ನಾನಾ ರೀತಿಯ ಸಭೆಗಳು, ರೋಡ್ ಶೋ ಮಾಡಿದ್ರು. ಆದರೂ ಯಾವುದೇ ಪ್ರಯೋಜನ ಆಗಿಲ್ಲ. ಬಿಜೆಪಿ ಅಥವಾ ಜೆಡಿಎಸ್ ನಾಯಕತ್ವದಲ್ಲಿ ಯಾವ ರೀತಿ ಮುಂದುವರಿಯಬೇಕು ಎಂಬುವುದು ಕಾಣುತ್ತಿಲ್ಲ ಎಂದರು.
Advertisement
ಇದುವರೆಗೂ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡದೆ ಇರುವುದು ಬಿಜೆಪಿ ಅವರ ದುಸ್ಥಿತಿಯಾಗಿದೆ. ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಿ ನಮ್ಮ ತಪ್ಪುಗಳನ್ನು ತೋರಿಸುವ ಕೆಲಸ ಆಗಬೇಕು ಎಂದು ಬೋಸರಾಜು ಆಗ್ರಹಿಸಿದರು. ಇದನ್ನೂ ಓದಿ: ಕಳ್ಳತನದ ಆರೋಪ – ನಾಲ್ವರನ್ನು ತಲೆಕೆಳಗಾಗಿ ನೇತುಹಾಕಿ ಥಳಿಸಿದ ಗುಂಪು
Web Stories