ಕೊಪ್ಪಳ: ಸತತ ನಾಲ್ಕು ವರ್ಷಗಳಿಂದ ಬರಗಾಲದಿಂದ ತತ್ತರಿಸಿಹೋಗಿದ್ದ ತುಂಗಾಭದ್ರಾ ಜಲಾಶಯ ಈ ಭಾರಿ ಮತ್ತೆ ಮೈದುಂಬಿದ್ದು, ಜಲಾಶಯದಿಂದ ನೀರುಬಿಟ್ಟ ದೃಶ್ಯವನ್ನ ನೋಡಲು ಜನರು ತಂಡೋಪತಂಡವಾಗಿ ಆಗಮಿಸಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ.
ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಾಭದ್ರಾ ಜಲಾಶಯವೀಗ ಮೈದುಂಬಿಕೊಂಡಿದೆ. ಕಳೆದ ದಿನದಿಂದ 32 ಕ್ರಷ್ಟ್ ಗೇಟ್ ಗಳ ಪೈಕಿ 20 ಗೇಟ್ ಗಳಿಂದ 60 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಬಿಡಲಾಗುತ್ತಿದೆ.
Advertisement
ಜಲಾಶಯದಿಂದ ನೀರು ಬಿಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯ ನಾನಾ ಭಾಗಗಳಿಂದ ಜನ ಬಂದು ಜಲಾಶಯದಿಂದ ನೀರು ಬಿಟ್ಟ ದೃಶ್ಯವನ್ನ ತಮ್ಮ ಮೊಬೈಲ್ ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಸಾಯಂಕಾಲ ಸಮಯದಲ್ಲಿ ಕಾಣುವ ಕಲರ್ ಕಲರ್ ದೃಶ್ಯವನ್ನ ನೋಡಲು ಸಾವಿರಾರು ಜನ ಜಲಾಶಯಕ್ಕೆ ಲಗ್ಗೆಯಿಡುತ್ತಿದ್ದರೆ.
Advertisement
ಈ ಬಾರಿ ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದರಿಂದ ತುಂಗಾಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು ಇನ್ನೂ ಕೇವಲ ಮೂರು ಅಡಿ ಬಾಕಿ ಇದೆ. ಜಲಾಶಯದ ಒಳ ಹರಿವಿನ ಪ್ರಮಾಣ ಹೆಚ್ಚಾಗಿದ್ದರಿಂದ ಕಳೆದ ದಿನದಿಂದ ಜಲಾಶಯದ ಕ್ರಷ್ಟ್ ಗೇಟ್ ಗಳ ಮೂಲಕ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ.
Advertisement