ಶ್ರೀನಗರ: ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಅನೇಕ ಸುಳ್ಳುಗಳನ್ನು ಬಿಂಬಿಸಲಾಗಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‍ಸಿ) ಕಾರ್ಯಾಧ್ಯಕ್ಷ ಮತ್ತು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಹೇಳಿದ್ದಾರೆ.
ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆಸಿದ ರ್‍ಯಾಲಿ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ಡಾಕ್ಯುಮೆಂಟರಿ ಸಿನಿಮಾವೋ ಅಥವಾ ಚಲನಚಿತ್ರವೋ ಎಂಬುದು ಸ್ಪಷ್ಟವಾಗಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಪರೀಕ್ಷಾ ಸಮಯದಲ್ಲೇ ಉಪಚುನಾವಣೆ ಯಾಕೆ – ಆಯೋಗದ ವಿರುದ್ಧ ಮಮತಾ ಕಿಡಿ
Advertisement
Advertisement
ಸಿನಿಮಾವು ನೈಜಕತೆಯನ್ನು ಆಧರಿಸಿದೆ ಎಂದು ನಿರ್ಮಾಪಕರು ಹೇಳಿದ್ದಾರೆ. ಆದರೆ ಚಿತ್ರದಲ್ಲಿ ಹಲವು ಸುಳ್ಳುಗಳನ್ನು ಬಿಂಬಿಸಲಾಗಿದೆ ಎನ್ನುವುದಂತು ಸತ್ಯ. ಎನ್‍ಸಿ ಸರ್ಕಾರ ಇತ್ತು ಎಂಬುದು ದೊಡ್ಡ ಸುಳ್ಳು. ಕಾಶ್ಮೀರಿ ಪಂಡಿತರು ತೊರೆದಾಗ 1990ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆ ಇತ್ತು. ಕೇಂದ್ರದಲ್ಲಿ ವಿ.ಪಿ.ಸಿಂಗ್ ನೇತೃತ್ವದ ಬಿಜೆಪಿ ಬೆಂಬಲಿತ ಸರ್ಕಾರವಿತ್ತು ಎಂದು ತಿಳಿಸಿದ್ದಾರೆ.
Advertisement
Advertisement
ಕಾಶ್ಮೀರಿ ಪಂಡಿತರು ವಲಸೆ ಹೋಗಬೇಕಾದರೆ ಅವರನ್ನು ಮಾತ್ರವಲ್ಲ. ಮುಸ್ಲಿಮರು ಮತ್ತು ಸಿಖ್ಖರನ್ನು ಸಹ ಕೊಲ್ಲಲಾಗಿದೆ. ಕಾಶ್ಮೀರದಿಂದ ವಲಸೆ ಹೋದವರು ಇನ್ನೂ ಕೂಡ ಹಿಂತಿರುಗಿಲ್ಲ. ಆದರೆ ಕಾಶ್ಮೀರಿ ಪಂಡಿತರನ್ನು ಸುರಕ್ಷಿತವಾಗಿ ಕರೆತರಲು ಎನ್‍ಸಿ ಪ್ರಮುಖ ಪಾತ್ರವಹಿಸಿದೆ ಮತ್ತು ಅದನ್ನು ತನ್ನ ಪ್ರಯತ್ನವನ್ನು ಮುಂದುವರಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವೈಷ್ಣೋದೇವಿ ಯಾತ್ರಾರ್ಥಿಗಳಿಗೆ ಹೆಲಿಕಾಪ್ಟರ್ ಆಸೆ ತೋರಿಸಿ ವಂಚನೆ!