ಇವಿಎಂ ಬಗ್ಗೆ ಮತ್ತೆ ವಿಪಕ್ಷಗಳಿಗೆ ಅನುಮಾನ – ವಿವಿಪ್ಯಾಟ್‌ ಸ್ಲಿಪ್‌ ಮತದಾರರ ಕೈಗೆ ನೀಡಬೇಕು

Public TV
2 Min Read
india meeting 1

ನವದೆಹಲಿ: ಇವಿಎಂ (EVM) ಬಗ್ಗೆ INDIA ಒಕ್ಕೂಟದ ಸದಸ್ಯರು ಮತ್ತೆ ಅನುಮಾನ ವ್ಯಕ್ತಪಡಿಸಿದ್ದಾರೆ. ಎಲ್ಲಾ ವಿವಿಪ್ಯಾಟ್‌ಗಳಲ್ಲಿ (VVPAT) ಬಿದ್ದ ಸ್ಲಿಪ್‌ಗಳನ್ನು ಎಣಿಕೆ ಮಾಡುವಂತೆ ಒತ್ತಾಯಿಸಿದ್ದಾರೆ.

ದೆಹಲಿಯಲ್ಲಿ ನಡೆದ ನಾಲ್ಕನೇ ಸಭೆಯಲ್ಲಿ ಇವಿಎಂ ಕುರಿತು ನಿರ್ಣಯವನ್ನು ಅಂಗೀಕರಿಸಲಾಗಿದೆ. ಇವಿಎಂಗಳ ಕಾರ್ಯನಿರ್ವಹಣೆಯ ಸಮಗ್ರತೆಯ ಬಗ್ಗೆ ಹಲವು ಅನುಮಾನಗಳಿವೆ ಮತ್ತು ಇವುಗಳನ್ನು ಅನೇಕ ತಜ್ಞರು ಮತ್ತು ವೃತ್ತಿಪರರು ಸಹ ಎತ್ತಿದ್ದಾರೆ ಎಂದು ವಿಪಕ್ಷಗಳು ಹೇಳಿವೆ.

ವಿವಿಪ್ಯಾಟ್ ಬಿದ್ದ ಎಲ್ಲಾ ಸ್ಲಿಪ್‌ಗಳನ್ನು ಎಣಿಕೆ ಮಾಡಬೇಕು. ವಿವಿಪ್ಯಾಟ್ ಸ್ಲಿಪ್ (VVPAT Slip) ಬಾಕ್ಸ್‌ನಲ್ಲಿ ಬೀಳುವ ಮತದಾರರ ಅದನ್ನು ಕೈಯಾರೇ ಪರಿಶೀಲಿಸಬೇಕು. ಮತದಾರ ತಮ್ಮ ಆಯ್ಕೆಯನ್ನು ಪರಿಶೀಲಿಸಿದ ನಂತರ ಅದನ್ನು ಪ್ರತ್ಯೇಕ ವಿವಿ ಪ್ಯಾಟ್‌ ಪೆಟ್ಟಿಗೆಯಲ್ಲಿ ಹಾಕಬೇಕು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

ಇದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯಲ್ಲಿ ಜನರ ಸಂಪೂರ್ಣ ವಿಶ್ವಾಸವನ್ನು ಮರುಸ್ಥಾಪಿಸುತ್ತದೆ ಎಂದು ವಿರೋಧ ಪಕ್ಷಗಳು ಹೇಳಿವೆ.  ಇದನ್ನೂ ಓದಿ: 2ನೇ ಹಂತದ ಭಾರತ್ ಜೋಡೋ ಯಾತ್ರೆ ಆರಂಭಿಸಲು ಕಾಂಗ್ರೆಸ್ ನಿರ್ಧಾರ

ಈಗ ಹೇಗಿದೆ?
ಪ್ರಸ್ತುತ ಬ್ಯಾಲೆಟ್‌ ಯಂತ್ರದಲ್ಲಿ ಬಟನ್‌ ಒತ್ತಿದ ಕೂಡಲೇ ಸಮಯದಲ್ಲಿ ವಿವಿಪ್ಯಾಟ್‌ ಸ್ಕ್ರೀನ್‌ನಲ್ಲಿ ಒಂದು ಸ್ಲಿಪ್‌ ರೆಡಿಯಾಗುತ್ತದೆ. ಆ ಸ್ಲಿಪ್‌ನಲ್ಲಿ ತಾನು ಯಾರಿಗೆ ಮತದಾನ ಮಾಡಿದ್ದೇನೆ ಎಂಬುದನ್ನು ಮತದಾರ ನೋಡಬಹುದು. 7 ಸೆಕೆಂಡ್‌ ಈ ಸ್ಲಿಪ್‌ ಸ್ಕ್ರೀನ್‌ನಲ್ಲಿ ಕಾಣುತ್ತಿರುತ್ತದೆ. 7 ಸೆಕೆಂಡ್‌ ಆದ ಬಳಿಕ ಆ ಸ್ಲಿಪ್‌ ಅಟೋಮ್ಯಾಟಿಕ್‌ ಆಗಿ ಕತ್ತರಿಸಿ ವಿವಿಪ್ಯಾಟ್‌ ಬಾಕ್ಸ್‌ ಒಳಗಡೆ ಬೀಳುತ್ತದೆ.

ಮತ ಎಣಿಕೆಯ ಸಮಯದಲ್ಲಿ ಚುನಾವಣಾ ಅಧಿಕಾರಿಗಳು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 5 ಮತ ಎಣಿಕೆ ಕೇಂದ್ರಗಳ ವಿವಿಪ್ಯಾಟ್‌ ಮತ್ತು ಎವಿಎಂ ಯಂತ್ರಗಳಲ್ಲಿ ಬಿದ್ದ ಮತಗಳನ್ನು ಎಣಿಕೆ ಮಾಡಿ ತಾಳೆ ಹಾಕುತ್ತಾರೆ. ಬ್ಯಾಲೆಟ್‌ ಪೇಪರ್‌ ಚುನಾವಣೆಯಲ್ಲಿ ಅಕ್ರಮಗಳು ನಡೆಯತ್ತಿದ್ದ ಹಿನ್ನೆಲೆಯಲ್ಲಿ ಮತ್ತು ಮತ ಎಣಿಕೆ ಪ್ರಕ್ರಿಯೆ ಸುಲಭಗೊಳಿಸಲು ಭಾರತದಲ್ಲಿ ಇವಿಎಂ ಬಳಕೆ ಮಾಡಲಾಗುತ್ತದೆ.

india meeting 2

ವಿಪಕ್ಷಗಳ ಬೇಡಿಕೆ ಈಡೇರುತ್ತಾ?
ವಿಪಕ್ಷಗಳು ವಿವಿಪ್ಯಾಟ್‌ ಸ್ಲಿಪ್‌ ಮತದಾರರ ಕೈಗೆ ನೀಡಬೇಕು ಎಂದು ಬೇಡಿಕೆ ಇಟ್ಟಿವೆ. ಈಗ ಸ್ಲಿಪ್‌ ಪ್ರಿಂಟ್‌ ಆಗಿ 7 ಸೆಕೆಂಡ್‌ ಸ್ಕ್ರೀನ್‌ನಲ್ಲಿ ಕಾಣುತ್ತದೆ. ಒಂದು ವೇಳೆ ಕೈಗೆ ಸ್ಲಿಪ್‌ ಕೊಟ್ಟರೆ ಮತದಾರ ಅದನ್ನು ಬಾಕ್ಸ್‌ಗೆ ಹಾಕದೇ ಹರಿದು ಹಾಕಿದರೆ ಬಿದ್ದ ಮತಕ್ಕೂ ವಿವಿ ಪ್ಯಾಟ್‌ನಲ್ಲಿ ಬಿದ್ದ ಸ್ಲಿಪ್‌ ತಾಳೆಯಾಗುವುದಿಲ್ಲ. ಈ ಕಾರಣಕ್ಕೆ ವಿಪಕ್ಷಗಳ ಬೇಡಿಕೆಯನ್ನು ಚುನಾವಣಾ ಆಯೋಗ ಒಪ್ಪುತ್ತಾ ಎಂಬುದರ ಬಗ್ಗೆಯೇ ಅನುಮಾನವಿದೆ.

 

Share This Article