ರಿಚ್ಚಿ (ಹೇಮಂತ್ ಕುಮಾರ್) ನಾಯಕನಾಗಿ ನಟಿಸಿ, ನಿರ್ದೇಶಿಸುತ್ತಿರುವ ರಿಚ್ಚಿ (Ritchie) ಚಿತ್ರದಲ್ಲಿ ಟಗರು ಖ್ಯಾತಿಯ ಮಾನ್ವಿತ ಕಾಮತ್ (Manvita Kamat) ನಟಿಸುತ್ತಿದ್ದಾರೆ. ಖ್ಯಾತ ಗಾಯಕ ಸೋನು ನಿಗಮ್ ಹಾಡಿರುವ (Song), ಅಗಸ್ತ್ಯ ಸಂಗೀತ ಸಂಯೋಜಿಸಿರುವ ‘ಸನಿಹ ನೀ ಇರುವಾಗ’ ಎಂಬ ಹಾಡಿಗೆ ಮಾನ್ವಿತ ಹೆಜ್ಜೆ ಹಾಕಲಿದ್ದಾರೆ. ಜೊತೆಗೆ ಕೆಲವು ಮಾತಿನ ಭಾಗದ ಸನ್ನಿವೇಶಗಳಲ್ಲೂ ಅವರು ಅಭಿನಯಿಸಲಿದ್ದಾರೆ ಎಂದು ರಿಚ್ಚಿ ತಿಳಿಸಿದ್ದಾರೆ.
Advertisement
ಈ ಸಿನಿಮಾದಲ್ಲಿ ಮಾನ್ವಿತಾ ಕಾಮತ್ ಕೇವಲ ಹಾಡಿಗೆ ಮಾತ್ರ ಹೆಜ್ಜೆ ಹಾಕುತ್ತಿಲ್ಲ, ಜೊತೆಗೆ ಕೆಲವು ದೃಶ್ಯಗಳಲ್ಲೂ ಅವರು ನಟಿಸಲಿದ್ದಾರೆ. ಹಾಗಾಗಿ ಈ ಸಿನಿಮಾವನ್ನು ಅವರು ಒಪ್ಪಿಕೊಂಡಿದ್ದಾರಂತೆ. ವಿಶೇಷ ಸನ್ನಿವೇಶಗಳು ಅವು ಆಗಿರಲಿವೆ ಎನ್ನುವುದು ಚಿತ್ರತಂಡದ ಮಾತು.
Advertisement
Advertisement
ಅಗಸ್ತ್ಯ ಕ್ರಿಯೇಷನ್ಸ್ ಲಾಂಛನದಲ್ಲಿ ವೆಂಕಟಾಚಲಯ್ಯ ಅವರು ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ರಾಕೇಶ್ ರಾವ್ ಅವರ ಸಹ ನಿರ್ಮಾಣವಿದೆ. ರಿಚ್ಚಿ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಒಂದು ಹಾಡು ಹಾಗೂ ಕೆಲವು ಮಾತಿನ ಭಾಗದ ಚಿತ್ರೀಕರಣ ಮಾತ್ರ ಬಾಕಿಯಿದೆ. ಅಜಿತ್ ಕುಮಾರ್ ಅವರ ಛಾಯಾಗ್ರಹಣ ರಿಚ್ಚಿ ಚಿತ್ರಕ್ಕಿದೆ.