ರಶ್ಮಿಕಾ ಮಂದಣ್ಣ ನಟನೆಯನ್ನು ಹೊಗಳಿದ ಮಾನುಷಿ ಚಿಲ್ಲರ್

Public TV
1 Min Read
manushi chhillar

ಬಾಲಿವುಡ್ ಬೆಡಗಿ ಮಾನುಷಿ ಚಿಲ್ಲರ್ (Manushi Chhillar) ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ‘ಅನಿಮಲ್’ (Animal) ಚಿತ್ರದಲ್ಲಿನ ರಶ್ಮಿಕಾ ಮಂದಣ್ಣ (Rashmika Mandanna) ನಟನೆ ಅದ್ಭುತವಾಗಿದೆ ಎಂದು ಮಾನುಷಿ ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ:‘ವೀರ ಮದಕರಿ’ ಬಾಲನಟಿ ಈಗ ನಾಯಕಿ- ಮಹೇಶ್ ಬಾಬು, ರಕ್ಷಿತ್ ಸಿನಿಮಾದಲ್ಲಿ ಜೆರುಶಾ

manushi chhillar 2ಇತ್ತೀಚಿನ ಸಂದರ್ಶನವೊಂದರಲ್ಲಿ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಚಿತ್ರದ ಕುರಿತು ನಟಿ ಮಾತನಾಡಿದ್ದಾರೆ. ‘ಅನಿಮಲ್’ ಚಿತ್ರದಲ್ಲಿ ನಟಿಸಲು ಮೊದಲು ಮಾನುಷಿಗೆ ಆಫರ್ ಬಂದಿತ್ತು ಎಂದು ಸುದ್ದಿಯೊಂದು ಹಬ್ಬಿತ್ತು. ಇದನ್ನೇ ಸಂದರ್ಶನದಲ್ಲಿ ಕೇಳಲಾಯ್ತು. ಈ ಸುದ್ದಿ ಸುಳ್ಳು ಎಂದು ನಟಿ ಸ್ಪಷ್ಟನೆ ನೀಡಿದ್ದರು.

manushi chhillar 1

ಒಂದು ವೇಳೆ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದರೆ, ರಶ್ಮಿಕಾ ಮಂದಣ್ಣ, ತೃಪ್ತಿ ದಿಮ್ರಿ ನಟಿಸಿದ ಪಾತ್ರಗಳ ನಡುವೆ ಯಾವ ರೋಲ್‌ಗೆ ಪ್ರಾಮುಖ್ಯತೆ ನೀಡುತ್ತಿದ್ದೀರಿ ಎಂದು ನಿರೂಪಕಿ ಮರು ಪ್ರಶ್ನೆ ಮಾಡಿದ್ದಾರೆ. ಆಗ ಮಾನುಷಿ, ಎರಡು ಪಾತ್ರಗಳು ಅದ್ಭುತವಾಗಿದೆ. ಆದರೆ ರಶ್ಮಿಕಾ ನಟಿಸಿದ ಪಾತ್ರ ತುಂಬಾ ಇಷ್ಟವಾಯಿತು ಎಂದಿದ್ದಾರೆ. ರಶ್ಮಿಕಾ ನಟಿಸಿದ ಪಾತ್ರದಲ್ಲೇ ನಾನು ಕೂಡ ನಟಿಸಲು ಇಷ್ಟಪಡುತ್ತೇನೆ ಎಂದಿದ್ದಾರೆ.

manushi chhillar 3

ರಣ್‌ಬೀರ್‌ ಕಪೂರ್ (Ranbir Kapoor) ಪತ್ನಿಯ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಪತ್ನಿಯಾಗಿ ರಣ್‌ಬೀರ್‌ಗೆ ಪ್ರಶ್ನಿಸಿ ನಿಲ್ಲುವ ರೀತಿ ಚೆನ್ನಾಗಿದೆ. ಗೀತಾಂಜಲಿ ಪಾತ್ರ (ರಶ್ಮಿಕಾ ಮಂದಣ್ಣ) ನಟನೆಗೆ ಉತ್ತಮ ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ. ಅದನ್ನು ನಟಿ ಚೆನ್ನಾಗಿ ನಿಭಾಯಿಸಿದ್ದಾರೆ ಎಂದು ಮಾನುಷಿ ಮಾತನಾಡಿದ್ದಾರೆ.

2017ರಲ್ಲಿ ಮಾನುಷಿ ಚಿಲ್ಲರ್ (Manushi Chhillar) ವಿಶ್ವಸುಂದರಿ ಪಟ್ಟ ಅಲಂಕರಿಸಿದ್ದರು. ಬಳಿಕ ಬಾಲಿವುಡ್ ಮತ್ತು ತೆಲುಗು ಸಿನಿಮಾಗಳಲ್ಲಿ ಇದೀಗ ನಟಿ ಆ್ಯಕ್ಟೀವ್ ಆಗಿದ್ದಾರೆ.

Share This Article