ಬೆಳಗಾವಿ: ರಾಜ್ಯದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೃಷಿ ತೆರಿಗೆ ನಿರ್ಧರಣೆಗೆ ಒಳಪಟ್ಟಿರದ ಎಲ್ಲಾ ಭೂಮಿ ಮತ್ತು ಕಟ್ಟಡಗಳ ಮ್ಯಾನ್ಯುಯಲ್ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಅವರು, ಗ್ರಾಮ ಪಂಚಾಯತಿಗಳಲ್ಲಿ ಕೃಷಿ ತೆರಿಗೆ ನಿರ್ಧರಣೆಗೆ ಒಳಪಟ್ಟಿರದ ಎಲ್ಲಾ ಭೂಮಿಗಳ ಮ್ಯಾನ್ಯುಯಲ್ ಸರಿಯಾಗಿ ಆಗಿಲ್ಲ. ಸಂಪೂರ್ಣವಾಗಿ ಆಸ್ತಿ ನಮೂದು ಆಗಬೇಕು. ಗ್ರಾಮ ಪಂಚಾಯತಿಗಳಲ್ಲಿ ಸರಿಯಾಗಿ ಆಸ್ತಿ ಪತ್ತೆ ಹಚ್ಚಿ, ತೆರಿಗೆ ಸಂಗ್ರಹ ಮಾಡಬೇಕು. ಇದರಿಂದ ಸರ್ಕಾರದ ಗ್ಯಾರಂಟಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಯೇ ಹಣ ಕೊಡಬಹುದು. ಅಧಿಕಾರಿಗಳು ಸರಿಯಾಗಿ ಆಸ್ತಿ ಸರ್ವೇ ಮಾಡುತ್ತಿಲ್ಲ.ಬೆಂಗಳೂರಿನಲ್ಲಿ ಸರಿಯಾಗಿ ಸರ್ವೆ ಮಾಡಿಲ್ಲ. ಅಧಿಕಾರಿಗಳು ಎರಡು ಬುಕ್ ಇಟ್ಟುಕೊಂಡು ತೆರಿಗೆ ಸರ್ಕಾರಕ್ಕೆ ನಷ್ಟ ಮಾಡ್ತಿವೆ. ಇದರ ಬಗ್ಗೆ ಕ್ರಮ ತೆಗೆದುಕೊಳ್ಳಿ ಎಂದು ಪ್ರಶ್ನಿಸಿದರು.ಇದನ್ನೂ ಓದಿ: ಬಲಿಷ್ಠ ಸಮುದಾಯ 2ಎ ಮೀಸಲಾತಿ ಕೇಳುತ್ತಿರುವುದು ಸಂವಿಧಾನಕ್ಕೆ ಬಗೆಯುತ್ತಿರುವ ಅಪಚಾರ: ಲೇಖಕ ಕುಂ.ವೀರಭದ್ರಪ್ಪ ಕಿಡಿ
Advertisement
Advertisement
ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ತೆರಿಗೆ ನಿರ್ಧರಣೆಗೆ ಒಳಪಟ್ಟಿರದ ಎಲ್ಲಾ ಭೂಮಿ ಮತ್ತು ಕಟ್ಟಡಗಳ ಮ್ಯಾನ್ಯುಯಲ್ ಸಮೀಕ್ಷೆ ನಡೆಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸಿ, ಪಂಚತಂತ್ರ 2.0 ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಇಲ್ಲಿಯವರೆಗೆ ಮ್ಯಾನ್ಯುಯಲ್ ಸಮೀಕ್ಷೆ ಮೂಲಕ 1,41,42,124 ಆಸ್ತಿಗಳನ್ನು ಸಮೀಕ್ಷೆ ಮಾಡಿ ಈ ಎಲ್ಲಾ ಆಸ್ತಿಗಳ ವಿವರಗಳನ್ನು ನಮೂನೆ-9ಎ ರಿಜಿಸ್ಟರ್‌ನಲ್ಲಿ ನಮೂದಿಸಲಾಗಿದೆ ಎಂದರು.
Advertisement
ಗ್ರಾಮ ಪಂಚಾಯತ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ನಮ್ಮ ಸರ್ಕಾರ ಬಂದ ಮೇಲೆ 8,61,524 ನಾವು ಅಸ್ತಿಗಳನ್ನ ಮ್ಯಾಪಿಂಗ್ ಮಾಡಿದ್ದೇವೆ. ಇವುಗಳ ಪೈಕಿ 4 ಲಕ್ಷ ಅಸ್ತಿಗಳು ಪಂಚತಂತ್ರದಲ್ಲಿ ನಮೂದು ಆಗಿಲ್ಲ. ಆದಷ್ಟು ಬೇಗ ಎಲ್ಲಾ ಆಸ್ತಿ ನಮೂದು ಮಾಡ್ತೀವಿ. ಇ-ಆಸ್ತಿ ನೋಂದಣಿಗೆ ಮಾಡಲು ಸರ್ವರ್ ಸಮಸ್ಯೆ ಕಾಣುತ್ತಿದೆ. ಎನ್‌ಐಸಿ ಅವರು ಸರ್ವರ್ ನಿರ್ವಹಣೆ ಮಾಡಿದ್ದಾರೆ. ಹೀಗಾಗಿ ಎನ್‌ಐಸಿಗೆ ನಾವೇ ಸರ್ವರ್ ನಿರ್ವಹಣೆ ಮಾಡೋದಾಗಿ ಹೇಳಿದ್ದೇವೆ. ಅವರು ಸಮಯ ಕೇಳಿದ್ದಾರೆ. ಇನ್ನೊಂದು ವರ್ಷದಲ್ಲಿ ಇ-ಸ್ವತ್ತು ಸಂಪೂರ್ಣವಾಗಿ ಜಾರಿ ಮಾಡೋ ಬಗ್ಗೆ ನೀಲಿನಕ್ಷೆ ಸಿದ್ಧಪಡಿಸಿದ್ದೇವೆ ಎಂದರು.ಇದನ್ನೂ ಓದಿ: ದರ್ಶನ್‌ಗೆ ಬೇಲ್: ದೇವರ ಪ್ರಸಾದ ಹಿಡಿದ ಫೋಟೋ ಹಂಚಿಕೊಂಡ ವಿಜಯಲಕ್ಷ್ಮಿ