ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕ (Bronze Medals) ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಮನು ಭಾಕರ್‌ಗೆ (Manu Bhaker) ತವರಿನಲ್ಲಿ ಬುಧವಾರ (ಆಗಸ್ಟ್ 7) ಅದ್ಧೂರಿ ಸ್ವಾಗತ ದೊರೆತಿದೆ.
Advertisement
ಏರ್ ಇಂಡಿಯಾ ನೇರ ವಿಮಾನದ (ವಿಮಾನ ಸಂಖ್ಯೆ – AI142) ಮೂಲಕ ಬುಧವಾರ ಬೆಳಗ್ಗೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಬಂದ ವಿಮಾನವು ಬೆಳಗ್ಗೆ 9:20ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಯಿತು. ಇದನ್ನೂ ಓದಿ: Paris Olympics 2024 | ಅನರ್ಹಗೊಂಡ ಕೆಲವೇ ನಿಮಿಷಗಳಲ್ಲಿ ವಿನೇಶ್ ಆಸ್ಪತ್ರೆಗೆ ದಾಖಲು
Advertisement
Bronze medallist shooter #ManuBhaker and her coach Jaspal Rana arrive at Indira Gandhi International Airport, New Delhi after her historic performance at the Paris Olympics 2024. Fans welcome them with garlands and bouquets. #PARIS2024 #Cheer4India pic.twitter.com/OjVHm2hVuC
— All India Radio News (@airnewsalerts) August 7, 2024
Advertisement
ಮನು ಭಾಕರ್‌ಗಾಗಿ ಪೋಷಕರಾದ ರಾಮ್ ಕಿಶನ್ ಹಾಗೂ ಸುಮೇಧಾ ದಂಪತಿ, ಮನು ಭಾಕರ್ ತವರು ರಾಜ್ಯ ಉತ್ತರಾಖಂಡದ ಅಧಿಕಾರಿಗಳು, ಕ್ರೀಡಾಭಿಮಾನಿಗಳು, ಕೋಚ್ ಜಸ್ವಾಲ್ ರಾಣಾ ಸೇರಿದಂತೆ ನೂರಾರು ಮಂದಿ ಮನು ಸ್ವಾಗತಿಸಲು ಕಾದು ಕುಳಿತಿದ್ದರು. ಮನು ಏರ್‌ಪೋರ್ಟ್‌ನಿಂದ (Delhi Airport) ಹೊರಬರುತ್ತಿದ್ದಂತೆ 200 ರೂ. ಹಾಗೂ 50 ರೂ.ಗಳ ನೋಟುಗಳ ಹಾರ ಹಾಕಿ ಸ್ವಾಗತಿಸಿದರು, ಅವರ ಮೇಲೆ ಹೂಮಳೆ ಸುರಿಸಿದರು. ಹಾಡು, ನೃತ್ಯ, ತಮಟೆ ವಾದ್ಯಗಳೊಂದಿಗೆ ಭಾಕರ್ ಆಗಮನವನ್ನ ಅದ್ಧೂರಿಯಾಗಿ ಅಭಿಮಾನಿಗಳು ಸಂಭ್ರಮಿಸಿದರು. ಭಾಕರ್ ಹಾಗೂ ರಾಣಾ ಅವರ ಚಿತ್ರಗಳಿದ್ದ ಪೋಸ್ಟರ್ ಹಿಡಿದು ಜೈಕಾರ ಕೂಗಿದರು. ಇದೇ ವೇಳೆ ಕೆಲವರು ವಿಶೇಷ ಉಡುಗೊರೆ ನೀಡಿ ಆಟೋಗ್ರಾಫ್ ಸಹ ಪಡೆದರು.
Advertisement
22 ವರ್ಷ ವಯಸ್ಸಿನ ಮನು ಭಾಕರ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಒಂದೇ ಆವೃತ್ತಿಯಲ್ಲಿ ಎರಡು ಪದಕ ಗೆದ್ದ ವಿಶೇಷ ದಾಖಲೆ ಬರೆದರು. ಮಹಿಳೆಯರ ಸಿಂಗಲ್ಸ್‌ನ 10 ಮೀಟರ್ ಏರ್ ಪಿಸ್ತೂಲ್ (Air Pistol) ಹಾಗೂ 10 ಮೀಟರ್ ಏರ್‌ಪಿಸ್ತೂಲ್ ಮಿಶ್ರ ತಂಡಗಳ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ವಿಶೇಷ ಸಾಧನೆಗೆ ಪಾತ್ರರಾದರು. ಇದನ್ನೂ ಓದಿ: ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್: ವಿನೇಶ್‌ಗೆ ಸಮಾಧಾನ ಹೇಳಿದ ಮೋದಿ
ಶನಿವಾರ ಮತ್ತೆ ಪ್ಯಾರಿಸ್‌ಗೆ ತೆರಳಲಿರುವ ಮನು ಭಾಕರ್ ಭಾನುವಾರ (ಆ.11) ನಡೆಯಲಿರುವ ಒಲಿಂಪಿಕ್ಸ್ ಸಮಾರೋಪ ಸಮಾರಂಭದಲ್ಲಿ ಮಹಿಳಾ ಧ್ವಜಧಾರಿಯಾಗಿ ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: Paris Olympics| ಭಾರತಕ್ಕೆ ಆಘಾತ – ಫೈನಲ್‌ನಿಂದ ವಿನೇಶ್ ಫೋಗಟ್ ಅನರ್ಹ