ಪ್ಯಾರಿಸ್: 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympic 2024) ಎರಡು ಪದಕ ಗೆದ್ದು ದಾಖಲೆ ಬರೆದಿರುವ ಭಾರತದ ಮನು ಭಾಕರ್‌ಗೆ (Manu Bhaker) ಈಗ ಜಾಹೀರಾತು ಸಂಸ್ಥೆಗಳಿಂದ ಭರ್ಜರಿ ಆಫರ್‌ಗಳು ಬರುತ್ತಿವೆ ಎಂದು ವರದಿಯಾಗಿದೆ.
ಮನು ಭಾಕರ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿರುವಾಗಲೇ ಸುಮಾರು 40 ಜಾಹೀರಾತು ಕಂಪನಿಗಳು (Advertising Companies) ಅವರನ್ನು ಸಂಪರ್ಕಿಸಿವೆ ಕೋಟಿ ಕೋಟಿ ರೂ. ಮೌಲ್ಯದ ಒಂದೆರಡು ಒಪ್ಪಂದಗಳು ಸಹ ಮುಗಿದಿವೆ. ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುನ್ನ ಮನು ಭಾಕರ್ ಅವರ ಬ್ರ್ಯಾಂಡ್ ಮೌಲ್ಯವು 20-25 ಲಕ್ಷ ರೂ.ನಷ್ಟಿತ್ತು. ಆದರೀಗ 6-7 ಪಟ್ಟು ಮೌಲ್ಯ ಹೆಚ್ಚಾಗಿದೆ ಎಂದು ಹೇಳಲಾಗಿದೆ.
Advertisement
Advertisement
22 ವರ್ಷ ವಯಸ್ಸಿನಲ್ಲಿ ಮನು ಭಾಕರ್ ಅವರಿಗೆ ಸದ್ಯ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಒಲಿದಿದ್ದು, 3ನೇ ಪದಕ ಕೊಂಚದಲ್ಲೇ ಕೈತಪ್ಪಿದೆ. ಹೀಗಿರುವಾಗಲೇ ಕಳೆದ 2-3 ದಿನಗಳಲ್ಲಿ ಸುಮಾರು 40 ಬ್ರ್ಯಾಂಡ್ ಕಂಪನಿಗಳು ಅವರನ್ನ ಸಂಪರ್ಕಿಸಿ ಅನುಮೋದನೆ ಕೇಳಿವೆ. ಒಂದೆರಡು ಕಂಪನಿಗಳ ಒಪ್ಪಂದಗಳು ಮುಕ್ತಾಯಗೊಂಡಿದ್ದು, ಉಳಿದ ಕಂಪನಿಗಳು ಅವರ ದೀರ್ಘಾವಧಿ ಹಾಗೂ ಅಲ್ಪಾವಧಿ ಕಾಂಟ್ರ್ಯಾಕ್ಟ್‌ಗೆ ಅನುಮೋದನೆ ಪಡೆಯಲು ಕಾಯುತ್ತಿವೆ ಎಂದು ಸ್ಫೋರ್ಟ್ಸ್ & ಎಂಟರ್‌ಟೈನ್‌ಮೆಂಟ್ ಕಂಪನಿ ತಿಳಿಸಿರುವುದಾಗಿ ವರದಿಗಳು ಉಲ್ಲೇಖಿಸಿವೆ. ಇದನ್ನೂ ಓದಿ: Paris Olympics | ಭಾರತಕ್ಕೆ ಮೂರನೇ ಪದಕ- ಕಂಚು ಗೆದ್ದ ಸ್ವಪ್ನಿಲ್
Advertisement
Advertisement
ಈ ಹಿಂದೆಯು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಬಳಿಕ ನೀರಜ್ ಚೋಪ್ರಾ ಅವರ ಬ್ರ್ಯಾಂಡ್ ಮೌಲ್ಯ ಹೆಚ್ಚಾಗಿತ್ತು. ಅದೇ ರೀತಿ ಮನು ಭಾಕರ್ ಪ್ರಸಕ್ತ ವರ್ಷದಲ್ಲಿ ದೇಶದ ಬ್ರ್ಯಾಂಡ್ ಆಗುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮನು ಭಾಕರ್‌ಗೆ ಮೋದಿ ಕರೆ – ಗಣ್ಯರಿಂದ ಅಭಿನಂದನೆಗಳ ಮಹಾಪೂರ
ಕೈ ತಪ್ಪಿದ ಹ್ಯಾಟ್ರಿಕ್ ಸಾಧನೆ:
ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದು ದಾಖಲೆ ಬರೆದಿದ್ದ ಭಾರತದ ಮನು ಭಾಕರ್ ಅವರಿಗೆ ಮೂರನೇ ಪದಕ ಜಸ್ಟ್ ಮಿಸ್ ಆಯಿತು. 25 ಮೀ ಸ್ಫೋರ್ಟ್ಸ್ ಪಿಸ್ತೂಲ್ ವಿಭಾಗದ ಫೈನಲ್‌ನಲ್ಲಿ 8 ಸ್ಪರ್ಧಿಗಳಿದ್ದರು. ಉತ್ತಮ ಪ್ರದರ್ಶನ ನೀಡಿದ ಮನು ಭಾಕರ್ ಅಂತಿಮವಾಗಿ 4ನೇ ಸ್ಥಾನ ಪಡೆದರು. 3ನೇ ಸ್ಪರ್ಧಿಯೊಂದಿಗೆ ಜಂಟಿಯಾಗಿ 28 ಅಂಕ ಪಡೆದರೂ ಹಂಗೇರಿ ಸ್ಪರ್ಧಿ ಈ ಹಿಂದಿನ ಸುತ್ತಿನಲ್ಲಿ ಮುನ್ನಡೆಯಲ್ಲಿದ್ದ ಕಾರಣ ಮನು ಭಾಕರ್ ಅವರ 3ನೇ ಪದಕ ಗೆಲ್ಲುವ ಕನಸು ಭಗ್ನಗೊಂಡಿತು. 22 ವರ್ಷದ ಮನು ಭಾಕರ್ ಈ ಒಲಿಂಪಿಕ್ಸ್‌ನಲ್ಲಿ ಮನು 10 ಮೀ ಏರ್ ಪಿಸ್ತೂಲ್ ಮತ್ತು 10 ಮೀ ಏರ್ ಪಿಸ್ತೂಲ್ ಮಿಶ್ರ (ಸರಬ್ಜೋತ್‌ಸಿಂಗ್ ಜೊತೆಗೂಡಿ) ತಂಡ ವಿಭಾಗಗಳಲ್ಲಿ ಕಂಚಿನ ಪದಕಗಳನ್ನು ಗೆದ್ದಿದ್ದರು. ಇದನ್ನೂ ಓದಿ: IPL 2025: ಮುಂದಿನ ಐಪಿಎಲ್‌ನಲ್ಲೂ ಮಹಿ ಕಣಕ್ಕಿಳಿಯೋದು ಫಿಕ್ಸ್?