ಬೆಂಗಳೂರು: ಮಂತ್ರಿಮಾಲ್ ಕಾರ್ಯಾರಂಭಕ್ಕೆ ಬಿಬಿಎಂಪಿ 12 ಷರತ್ತುಗಳನ್ನ ವಿಧಿಸಿ ಅನುಮತಿ ನೀಡಿದ್ದು, 40 ದಿನಗಳಿಂದ ಸ್ಥಗಿತಗೊಂಡಿದ್ದ ಮಂತ್ರಿಮಾಲ್ ಇಂದಿನಿಂದ ಓಪನ್ ಆಗಿದೆ.
ಬಿದ್ದಿರುವ ಗೋಡೆಯನ್ನ ಮತ್ತೆ ಹೊಸದಾಗಿ ನಿರ್ಮಾಣ ಮಾಡಬೇಕು. ಗೋಡೆ ಕುಸಿತವಾಗಿರುವ ಕಡೆ ಇರುವ ಡೋರ್‍ಗಳನ್ನ ಯಾವುದೇ ಕಾರಣಕ್ಕೂ ತೆರೆಯುವಂತಿಲ್ಲ ಎಂದು ಬಿಬಿಎಂಪಿ ಷರತ್ತು ವಿಧಿಸಿದೆ. ಬಿಬಿಎಂಪಿಯ ಸೂಚನೆ ಮೇರೆಗೆ ಮಂತ್ರಿಮಾಲ್ ಶೇ. 80ರಷ್ಟು ಬದಲಾವಣೆ ಮಾಡಿಕೊಂಡಿದ್ದು, ಏನೇ ಆದ್ರೂ ನಾವೇ ಜವಬ್ದಾರಿ ಎಂದು ಬರೆದುಕೊಟ್ಟಿದೆ.
Advertisement
ಮಂತ್ರಿಮಾಲ್‍ನಲ್ಲಿ ಕೊಳಚೆ ನೀರು ಹರಿದು ಗೋಡೆ ಕುಸಿದಿತ್ತು, ಈಗ ಪೈಪು ಬದಲಿಸಲಾಗಿದೆ. ಮುಂದೆ ಪೈಪು ತುಕ್ಕು ಹಿಡಿಯದಂತೆ `ಆ್ಯಂಟಿ ಕೊರೊಸೀವ್’ ಬಣ್ಣ ಹಚ್ಚಲಾಗಿದೆ. ಬೇರೆ ಕಡೆ ಸ್ಲಾಬ್, ಸಿಮೆಂಟ್, ಕಬ್ಬಿಣ, ಕಟ್ಟಡ ಸಲಕರಣೆ ಗುಣಮಟ್ಟ ಚೆನ್ನಾಗಿವೆ. ಮಂತ್ರಿಮಾಲ್ ಕಟ್ಟಡದ ಎಲ್ಲಾ ಭಾಗವೂ ವಾಣಿಜ್ಯ ಚಟುವಟಿಕೆಗೆ ಸಮರ್ಥವಾಗಿದೆ. 60 ಕಡೆ ಸ್ಯಾಂಪಲ್ ಪರೀಕ್ಷೆ ಮಾಡಿದ್ದು ಕಟ್ಟಡ ಸಂಪೂರ್ಣ ಗಟ್ಟಿಮುಟ್ಟಾಗಿದೆ ಎಂದು ಮಾಲ್ ವರದಿ ತಯಾರಿಸಿದೆ. ವರದಿ ಬಳಿಕ ಹಲವು ಷರತ್ತುಗಳನ್ನ ವಿಧಿಸಿ ಬಿಬಿಎಂಪಿ ಅನುಮತಿ ನೀಡಿದೆ.
Advertisement
ಜನವರಿ 16 ರಂದು ಮಂತ್ರಿಮಾಲ್ ಹಿಂಬದಿ ಗೋಡೆ ಕುಸಿದಿತ್ತು. ಬಳಿಕ ತಜ್ಞರ ತಂಡ ರಚನೆ ಮಾಡಿದ್ದ ಬಿಬಿಎಂಪಿ, ವರದಿ ಬಳಿಕ ಕೆಲ ಬದಲಾವಣೆ ಮಾಡಿಕೊಳ್ಳುವಂತೆ ಸೂಚಿಸಿತ್ತು. ಇದೀಗ ಬಿಬಿಎಂಪಿ ಸೂಚನೆ ಮೇರೆಗೆ ಬದಲಾವಣೆ ಮಾಡಿಕೊಂಡಿರುವ ಮಂತ್ರಿಮಾಲ್ ಮತ್ತೆ ಕಾರ್ಯರಂಭ ಮಾಡುತ್ತಿದೆ.
Advertisement
ಮಂತ್ರಿ ಮಾಲ್‍ಗೆ 12 ಷರತ್ತುಗಳು:
Advertisement
1. ತಜ್ಞರ ಸಮಿತಿ ವರದಿ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವುದು.
2. ಗೋಡೆ ಕುಸಿದಿರುವ ಭಾಗವನ್ನ ತಜ್ಞರ ಸೂಚನೆ ಪ್ರಕಾರ ಪುನರ್ ನಿರ್ಮಾಣ ಮಾಡಬೇಕು.
3. ಪ್ರತಿ ವರ್ಷ ನಿರ್ವಹಣಾ ಮಾಹಿತಿಯನ್ನ ಬಿಬಿಎಂಪಿಗೆ ನೀಡಬೇಕು.
4. ತುರ್ತು ಸೇವೆಗೆ ತೆರೆದುಕೊಳ್ಳುವಂತೆ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಎರಡು ವರ್ಷಕ್ಕೊಮ್ಮೆ ಅಗ್ನಿ ಸುರಕ್ಷತೆ ಬಗ್ಗೆ ಪ್ರಮಾಣೀಕರಿಸಬೇಕು.
5. ಕಟ್ಟಡದ ಸುಭದ್ರತೆ ಬಗ್ಗೆ ತಜ್ಞರ ಸಮಿತಿಯಿಂದ ಪರಿಶೀಲಿಸಿ ಬಿಬಿಎಂಪಿಗೆ ವರದಿ ನೀಡಬೇಕು.
6. ವಾಟರ್ ಸಪ್ಲೈ, ಒಳ ಚರಂಡಿ, ಎಸಿ ಉಪಕರಣಗಳು ಸೇರಿದಂತೆ ಇತರೆ ಸರ್ವಿಸ್‍ಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕು.
7. ಪಾರ್ಕಿಗ್ ಜಾಗವನ್ನು ಪಾರ್ಕಿಂಗ್ ಜಾಗಕ್ಕೆ ಮಾತ್ರ ಉಪಯೋಗಿಸಬೇಕು.
8. ಕಟ್ಟಡವನ್ನು ಯಾವ ಉದ್ದೇಶಕ್ಕಾಗಿ ಅನುಮತಿ ಪಡೆಯಲಾಗಿದೆಯೋ ಅದೇ ಉದ್ದೇಶಕ್ಕೆ ಬಳಸಿಕೊಳ್ಳಬೇಕು.
9. ಕಟ್ಟಡದ ಟೆರೆಸ್ ಭಾಗದಲ್ಲಿ ಲೀಕ್ ಪ್ರೂಫ್ ಟೆಕ್ನಾಲಜಿ ಬಳಸಬೇಕು.
10. ಕಟ್ಟಡದ 3ನೇ ಅಂತಸ್ತಿನ ಎಲ್ಲಾ ಹೊರ ದ್ವಾರಗಳನ್ನು ಗೋಡೆ ನಿರ್ಮಾಣ ಸಂಪೂರ್ಣವಾಗುವವರೆಗೂ ಮುಚ್ಚಬೇಕು.
11. ಮಾಲ್‍ಗೆ ಬರುವ ಸಾರ್ವಜನಿಕರ ಸುರಕ್ಷತೆಯ ದೃಷ್ಠಿಯಿಂದ ಮಂತ್ರಿಮಾಲ್ ಸಿಬ್ಬಂದಿ ಕಾರ್ಯನಿರ್ವಹಿಸಬೇಕು. ಅಷ್ಟೇ ಅಲ್ಲದೆ ಮುಂದೆ ಏನಾದ್ರು ಅನಾಹುತ ಆದ್ರೆ ಅವರೇ ಜವಾಬ್ದಾರರಾಗಬೇಕು.
12. 3ನೇ ಅಂತಸ್ತಿನಲ್ಲಿರೋ ಸ್ಕೇರಿ ಹೌಸನ್ನು ಗೋಡೆ ನಿರ್ಮಾಣವಾಗುವವರೆಗೂ ಮುಚ್ಚಬೇಕು.